For Quick Alerts
  ALLOW NOTIFICATIONS  
  For Daily Alerts

  ಹೊಸ ದಾಖಲೆ ಸೃಷ್ಟಿಸಿದ 'ಜೋಗಯ್ಯ' ಆಡಿಯೋ

  By Rajendra
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂರನೆ ಚಿತ್ರ 'ಜೋಗಯ್ಯ' ಆಡಿಯೋ ದಾಖಲೆ ಮಾರಾಟ ಕಂಡಿದೆ. ಈ ಮೂಲಕ ನಷ್ಟದಲ್ಲಿದ್ದ ಆಡಿಯೋ ಕಂಪನಿಗಳಿಗೆ ಹೊಸ ಚೈತನ್ಯ ಬಂದಂತಾಗಿದೆ. ಇಡೀ ರಾಜ್ಯದಾದ್ಯಂತ ಒಂದು ಲಕ್ಷ ಸಿಡಿಗಳು ಮಾರಾಟವಾಗಿರುವುದಾಗಿ ಚಿತ್ರದ ನಿರ್ಮಾಪಕಿ ರಕ್ಷಿತಾ ಪ್ರೇಮ್ ತಿಳಿಸಿದ್ದಾರೆ.

  ಆರಂಭದಲ್ಲಿ ಕೊಂಚ ದುಗುಡ ಕಾಡುತ್ತಿತ್ತು, ಆಡಿಯೋ ಸೇಲ್ಸ್ ನೋಡಿದ ಬಳಿಕ ಮನಸು ಹೂವಿನಷ್ಟು ಹಗುರವಾಗಿದೆ ಎನ್ನುತ್ತಾರೆ ನಿರ್ದೇಶಕ ಪ್ರೇಮ್. ಸದ್ಯಕ್ಕೆ 'ಜೋಗಯ್ಯ' ಡಬ್ಬಿಂಗ್ ಅಂತಿಮ ಹಂತದಲ್ಲಿದೆ. ಚಿತ್ರವನ್ನು ಆಗಸ್ಟ್ 12ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

  'ಜೋಗಯ್ಯ' ಚಿತ್ರಕ್ಕೆ ವಿತರಣೆ ಹಕ್ಕುಗಳು ದಾಖಲೆ ಬೆಲೆಗೆ ಮಾರಾಟವಾಗಿದೆ ಎಂಬ ಸುದ್ದಿಯೂ ಇದೆ. ಪ್ರಮುಖ ಕೇಂದ್ರಗಳಾದ ಬೆಂಗಳೂರು, ಕೋಲಾರ ಹಾಗೂ ತುಮಕೂರು ವಿತರಣೆ ಹಕ್ಕುಗಳನ್ನು ಕಾದಿರಿಸಲಾಗಿದೆ ಎನ್ನುತ್ತವೆ ಮೂಲಗಳು. ವಿ ಹರಿಕೃಷ್ಣ ಸಂಗೀತ ಮತ್ತೊಮ್ಮೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Hat trick hero Shivarajkumar's century movie Jogayya has has crossed over one lakh all over Karnataka. Meanwhile the release date has been set as August 12th. On the other hand, the film has been sold to distributors at fancy prices.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X