»   »  'ಫೀವರ್ 104'ನಲ್ಲಿ ಕನ್ನಡರಾಜ್ಯೋತ್ಸವ ಸಪ್ತಾಹ

'ಫೀವರ್ 104'ನಲ್ಲಿ ಕನ್ನಡರಾಜ್ಯೋತ್ಸವ ಸಪ್ತಾಹ

Posted By:
Subscribe to Filmibeat Kannada

ಕನ್ನಡ ರಾಜ್ಯೋತ್ಸವನ್ನು ವಿಭಿನ್ನವಾಗಿ ಆಚರಿಸುವ ಪ್ರಯತ್ನಕ್ಕೆ ಜನಪ್ರಿಯ ಎಫ್ ಎಂ ವಾಹಿನಿ 'ಫೀವರ್ 104' ಮುಂದಾಗಿದೆ .'ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ' ಎಂಬ ಭಿನ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಈಗಾಗಲೇ ಆರಂಭವಾಗಿರುವ ಈ ಕಾರ್ಯಕ್ರಮ ಅಕ್ಟೋಬರ್ 26ರಿಂದ ನವೆಂಬರ್ 1ರವರೆಗೂ ಒಂದು ವಾರ ಕಾಲ ನಡೆಯಲಿದೆ.

ಒಂದು ವಾರ ಕಾಲ ವಿವಿಧ ಕ್ಷೇತ್ರಗಳಲ್ಲಿ (ಕನ್ನಡ ಚಿತ್ರರಂಗ, ಸಂಗೀತ, ದೂರದರ್ಶನ, ಆಹಾರ, ಸಾಹಿತ್ಯ, ಕನ್ನಡ ಉದ್ಯಮಿ) ಸಾಧನೆ ಮಾಡಿರುವವರನ್ನು ಸಂದರ್ಶಿಸುವ ಮೂಲಕ ಕನ್ನಡರಾಜ್ಯೋತ್ಸವದ ಸಂಭ್ರಮವನ್ನು ಹೆಚ್ಚಿಸಲಿದೆ. ಈ ಮೂಲಕ ಕನ್ನಡ ರಾಜ್ಯೋತ್ಸವವಕ್ಕೆ ಮತ್ತಷ್ಟು ಮೆರುಗು ತರುವ ಪ್ರಯತ್ನಕ್ಕೆ ಫೀವರ್ 104 ಎಫ್ ಎಂ ಕೈ ಹಾಕಿದೆ.

ನಟರಾದ ರಮೇಶ್ ಭಟ್, ಸಿಹಿ ಕಹಿ ಚಂದ್ರು, ಗಾಯಕ ರಾಜೇಶ್ ಕೃಷ್ಣನ್, ನಿರ್ದೇಶಕ ಯೋಗರಾಜ್ ಭಟ್, ಟಿ ಎನ್ ಸೀತಾರಾಮ್ ಅವರು ಸಂದರ್ಶನದ ಮೂಲಕ ಶ್ರೋತೃಗಳಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ. ಕನ್ನಡ ರಾಜ್ಯೋತ್ಸವವನ್ನು ಮತ್ತಷ್ಟು ಅರ್ಥಗರ್ಭಿತವಾಗಿ ಆಚರಿಸುವ ಉದ್ದೇಶದಿಂದ ಈ ವಿಭಿನ್ನ ಪ್ರಯತ್ನ ಮಾಡುತ್ತಿದ್ದೇವೆ ಎಂದು ಫೀವರ್ 104 ಎಫ್ ಎಂ ನ ರಾಷ್ಟ್ರೀಯ ಮಾರುಕಟ್ಟೆ ಮುಖ್ಯಸ್ಥ ನೀರಜ್ ಚತುರ್ವೇದಿ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada