For Quick Alerts
  ALLOW NOTIFICATIONS  
  For Daily Alerts

  ಎಸ್ ಎಫ್ ಎಂ ಸಂಗೀತ ಕಲಾ ಪ್ರಶಸ್ತಿ ಸಮಾರಂಭ

  By Staff
  |

  ಭಾರತದ ಖಾಸಗಿ ರೇಡಿಯೋ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ, ರೇಡಿಯೋ ಆಧಾರಿತ ಸಂಗೀತ ಕಲಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಜಯನಗರದ ಪೈ ವೈಸ್ ರಾಯ್ ಸಭಾಂಗಣ ಸಾಕ್ಷಿಯಾಯಿತು. ಉದಯ ಟಿ. ವಿ; ಪೈ ಗ್ರೂಪ್ ಹೋಟೆಲ್ಸ್; ರೇಡಿಯೊ ಅಂಡ್ ಮ್ಯೂಸಿಕ್ ಡಾಟ್‌ಕಾಮ್, ವೈ ಫೈ ಹಾಗು ಅಶ್ವಿನಿ ಎಂಟರ್‌ಟೇನ್‌ಮೆಂಟ್ ಸಹಯೋಗದೊಂದಿಗೆ ಈ ಸಂಗೀತ ಕಾರ್ಯಕ್ರಮವನ್ನು ಎಸ್ ಎಫ್ ಎಂ ನವರು ಅದ್ದೂರಿಯಾಗಿ ನೆರವೇರಿಸಿದರು.

  ಗುರು ಕಿರಣ್ ಸಂಗೀತ ಸಾಮ್ರಾಟ್ ಮತ್ತು ಹಂಸಲೇಖ, ವಿ. ಮನೋಹರ್, ರಾಜೇಶ್ ರಾಮ್‌ನಾಥ್ ಹಾಗು ಸಾಧು ಕೋಕಿಲರವರಿಗೆ ವಿಶೇಷ ಕಲಾ ಪ್ರಶಸ್ತಿಗಳು. ನೆಚ್ಚಿನ ಗಾಯಕ ರಘು ದಿಕ್ಷಿತ್, ಗಾಯಕಿ ನಂದಿತ, ಗೀತ ರಚನೆಕಾರ ಕವಿರಾಜ್, ಸಂಗೀತ ನಿರ್ದೇಶಕ ಹರಿಕೃಷ್ಣ ಹಾಗೂ ನಂದ ನಂದಿತದ ಜಿಂಕೆಮರೀನ ಹಾಡು ಈ ಬಾರಿಯ ಕಲಾ ಪ್ರಶಸ್ತಿಯನ್ನು ಪಡೆದುಕೊಂಡಿತು

  ಭಾರತದ ಖಾಸಗಿ ರೇಡಿಯೋ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸನ್ ನೆಟ್‌ವರ್ಕ್ ಸಂಚಾಲಿತ ಕಾಲ್ ರೇಡಿಯೋ ಲಿಮಿಟೆಡ್‌ನ ಸೂಪರ್ ಹಿಟ್ಸ್ 93.5 ಎಸ್.ಎಫ್.ಎಂ ಪ್ರಸ್ತುತ ಪಡಿಸಿದ 2008ನೇ ಸಾಲಿನ ಕಲಾ ಪ್ರಶಸ್ತಿ, ಕನ್ನಡ ಚಿತ್ರರಂಗದ ನೆಚ್ಚಿನ ಸಂಗೀತ ಕಲಾವಿದರನ್ನು ಸನ್ಮಾನಿಸಿತು. ಶ್ರೋತೃಗಳೇ ಆಯ್ಕೆ ಮಾಡಿದ ಈ ಪ್ರಶಸ್ತಿಗಳು ಜನವರಿ 24 ರಂದು ಬೆಂಗಳೂರಿನಲ್ಲಿ ಸಾದರಪಡಿಸಲಾಯಿತು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಖಾಸಗಿ ರೇಡಿಯೋ ಚಾನೆಲ್ ನಡೆಸಿದ ಇಂಥದ್ದೊಂದು ಸಮಾರಂಭ ಹಿಂದೆಂದು ನಡೆದಿರಲಿಲ್ಲ.

  ನಮ್ಮನ್ನು ಅಗಲಿದ ರಾಜು ಅನಂತಸ್ವಾಮಿರವರನ್ನು ನೆನೆದು ಒಂದು ನಿಮಷದ ಮೌನದೊಂದಿಗೆ ಕಲಾ ಪ್ರಶಸ್ತಿಯ ಸಮಾರಂಭವು ಪ್ರಾರಂಭವಾಯಿತು. ಈ ವರ್ಷದಿಂದ, ಈ ದಿನ, ಅಂದರೆ ಜನವರಿ 24, 'ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ'ವೆಂದು ನಮ್ಮ ಭಾರತ ಸರ್ಕಾರ ಘೋಷಿಸಿದೆ. ಆದ್ದರಿಂದ ಈ ನಿರ್ಣಯವನ್ನು ಆದರಿಸುತ್ತ, ಈ ದಿನದ ಮೊದಲ ಪ್ರಶಸ್ತಿಯನ್ನು ಈ ವರ್ಷದ ನೆಚ್ಚಿನ ಹಿನ್ನೆಲೆ ಗಾಯಕಿಗೆ ನೀಡಲಾಯಿತು.

  93.5 ಎಸ್.ಎಫ್.ಎಮ್‌ನ ನಿಲಯದ ನಿರ್ದೇಶಕಿ (ಕರ್ನಾಟಕ) ದಯಾ ದೇವಯ್ಯಾ ಹೇಳುವಂತೆ 93.5 ಎಸ್.ಎಫ್.ಎಮ್‌ನ ಕಾರ್ಯಕ್ರಮ ನಿರ್ದೇಶಕ (ಕರ್ನಾಟಕ) ಸತೀಶ್ ಚಂದ್ರ ತಮ್ಮ ಸ್ವಾಗತ ಭಾಷಣದಲ್ಲಿ " ಕನ್ನಡ ಚಿತ್ರ ಸಂಗೀತೋದ್ಯಮವು ಈ ಕಾರ್ಯಕ್ರಮವನ್ನು ಗುರುತಿಸಿ, ಪ್ರೋತ್ಸಾಹಿಸುತ್ತಿರುವುದಕ್ಕೆ ನನಗೆ ತುಂಬಾ ಸಂತಸವಾಗುತ್ತಿದೆ. ಈ ಉದ್ಯಮಕ್ಕೆ ಬರುತ್ತಿರುವ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ನಾವು ಈ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹೀಗೆ ಮುಂದುವರಿಸಿಕೊಂಡು ಹೋಗುತ್ತೇವೆ. ಇದೇ ದಿನ 100 ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ ವಿ. ಮನೋಹರ್ ಮತ್ತು ರಾಜೇಶ್ ರಾಮ್‌ನಾಥ್‌ರವರಿಗೆ ಹಾಗೂ ಚಲನಚಿತ್ರೋದ್ಯಮದ ಸಕಲಕಲಾವಲ್ಲಭರಾದ ಸಾಧು ಕೋಕಿಲರವರಿಗೆ ವಿಶೇಷ ಕಲಾ ಪ್ರಶಸ್ತಿಗಳನ್ನು ನೀಡಲಾಗುವುದು ಹಾಗೂ ಇದೇ ಸಂಧರ್ಭದಲ್ಲಿ ಕನ್ನಡ ಚಲನ ಚಿತ್ರರಂಗದಲ್ಲಿ 300 ಕ್ಕಿಂತಲೂ ಹೆಚ್ಚು ಜನಪ್ರಿಯ ಚಿತ್ರಗಳಿಗೆ ಸಂಗೀತ ಹಾಗೂ ಸಾಹಿತ್ಯ ನೀಡಿರುವ ಹಂಸಲೇಖರನ್ನು ಅಭಿನಂದಿಸುತ್ತಿದ್ದೇವೆ" ಎಂದರು.

  ಈ ತಾರಾ ಸಮಾರಂಭಕ್ಕೆ ಕನ್ನಡ ಚಿತ್ರ ಸಂಗೀತೋದ್ಯಮದ ಗಣ್ಯರೆಲ್ಲರೂ ಆಗಮಿಸಿದ್ದರು. 93.5 ಎಸ್.ಎಫ್.ಎಮ್‌ನ ಶ್ರೋತೃಗಳಿಗೆ ಯಾವುದೇ ಆಯ್ಕೆಯನ್ನು 93.5 ಎಸ್.ಎಫ್.ಎಮ್‌ನ ವತಿಯಿಂದ ನೀಡದೆ ಅವರ ನೆಚ್ಚಿನ ಗಾಯಕ, ಗಾಯಕಿ, ಗೀತ ರಚನೆಕಾರ, ಸಂಗೀತ ನಿರ್ದೇಶಕ, ಹಾಗೂ ಹಾಡನ್ನು ನಿರ್ಧರಿಸುವ ನೇರ ಹಾಗು ಸ್ವತಂತ್ರ ಅವಕಾಶವನ್ನು ಶ್ರೋತೃಗಳಿಗೆ ನೀಡಲಾಗಿತ್ತು.

  ಕಲಾ ಪ್ರಶಸ್ತಿ: 93.5 ಎಸ್.ಎಫ್.ಎಮ್, ತಮ್ಮ ಶ್ರೋತೃಗಳಿಗೆ ಎಸ್.ಎಮ್.ಎಸ್ ಮತ್ತು ಕರೆಗಳ ಮೂಲಕ ತಮ್ಮ ನೆಚ್ಚಿನ ಗಾಯಕ, ಗಾಯಕಿ, ಸಂಗೀತ ನಿರ್ದೇಶಕ, ಗೀತ ರಚನೆಕಾರ ಹಾಗೂ ಹಾಡನ್ನು ಜನವರಿ 22, 2009 ರ ತನಕ ಅಂದರೆ 40ದಿನಗಳ ಕಾಲಾವಕಾಶ ನೀಡಲಾಗಿತ್ತು. ಸಾವಿರಾರು ಎಸ್.ಎಮ್.ಎಸ್. ಮತ್ತು ಕರೆಗಳನ್ನು ಪಟ್ಟಿ ಮಾಡಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಚಿತ್ರಸಂಗೀತೋದ್ಯಮದ ಎಲ್ಲಾ ತಲೆಮಾರಿನವರಿಗೂ ವೋಟ್‌ಗಳು ಬಂದಿದ್ದು, ಇದರಿಂದ ಎಲ್ಲರಿಗೂ ಸಮಾನವಾದ ಅವಕಾಶ ದೊರಕಿದೆ. ಆದ್ದರಿಂದ ಈ ಬಾರಿಯ ಕಲಾ ಪ್ರಶಸ್ತಿ ವಿಜೇತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವೋಟ್‌ಗಳನ್ನು ಪಡೆದು ಈ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ.

  ಕಲಾ ಪ್ರಶಸ್ತಿ ಫಲಕ: ಸಂಗೀತವು ಜಾಗತಿಕ ಭಾಷೆ, ಭಾವನೆಯನ್ನು ಪಡೆದುಕೊಂಡಿರುವಂತದ್ದು. ಅದರಲ್ಲಿ ಅಡಗಿರುವ ಸತ್ಯ ಮತ್ತು ಸತ್ವ ಜಗತ್ತಿಗೆ ಸಂಪೂರ್ಣವಾಗಿ ಅಂಗೀಕರಿಸಲ್ಪಟ್ಟಿರುವ ಊಹಿಸಲಾಗದ ಜೀವಂತ ಪ್ರಭಾವವನ್ನು ಕೊಡುವಂತಹದ್ದು. ಇದು ಪ್ರಾಪಂಚಿಕ ಗಡಿ, ಜಾತಿ, ದೇಶ, ಭಾಷೆ ಮತ್ತು ವರ್ಣಗಳನ್ನು ಮೀರಿ ನಿಂತಿದೆ. ಆದ್ದರಿಂದಲೇ ಪ್ರಪಂಚದ ಯಾವ ಮೂಲೆಗೆ ಸುತ್ತಿದರೂ ಮೊದಲಿದ್ದಲ್ಲಿಯೇ ಬರುವಂತಹ ಆಂಗ್ಲ ಭಾಷೆಯ 'S' ಆಕಾರದ ಚಿಹ್ನೆಯಾದ ಉ-ಕ್ಲೆಫ್‌ಅನ್ನು ಸಂಗೀತದ ಹೆಗ್ಗುರುತಾಗಿ ಕಲಾ ಪ್ರಶಸ್ತಿ ಫಲಕವಾಗಿ ಅಳವಡಿಸಿಕೊಳ್ಳಲಾಗಿದೆ.

  ಅತೀ ಹೆಚ್ಚು ಮೆಸೇಜ್ ಕಳುಹಿಸಿ ಮತದಾನ ಮಾಡಿದ ರಮೇಶ್ ಮತ್ತು ಭವ್ಯರವರು ತಮ್ಮ ನೆಚ್ಚಿನ ಗಾಯಕ ಹಾಗೂ ಗಾಯಕಿಗೆ ಪ್ರಶಸ್ತಿ ನೀಡುವ ಸದಾವಕಶವನ್ನು ಕಲ್ಪಿಸಲಾಗಿತ್ತು. ಹಾಗೆಯೇ ಉಳಿದ ಅದೃಷ್ಟಶಾಲಿ ವೀಜೆತರು ಅನೇಕ ಆಕರ್ಷಕ ಬಹುಮಾನಗಳನ್ನು ಗೆದ್ದಿದ್ದಾರೆ.

  93.5 ಎಸ್.ಎಫ್.ಎಮ್. ರೇಡಿಯೋ ವಾಹಿನಿಯು ಅನೇಕ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 2008 ರ ಸಾಲಿನ ನಮ್ಮ ಕೇಳುಗರ ನೆಚ್ಚಿನ ಕಲಾ ಪ್ರಶಸ್ತಿ ವಿಜೇತರ ಹಿಂದಿನ ವರ್ಷ ಬಿಡುಗಡೆಯಾದ ಹಾಡುಗಳೊಂದಿಗೆ ಅವರ ನೇರ ಸಂದರ್ಶನವನ್ನು ಕೇಳಲು 93.5 ಎಸ್.ಎಫ್.ಎಮ್‌ಗೆ ಟ್ಯೂನ್ ಮಾಡಬಹುದು.
  ಪೂರಕ ಓದಿಗೆ: ನೆಚ್ಚಿನ ಸಂಗೀತ ಪ್ರತಿಭೆಗಳನ್ನು ನೀವೆ ಆಯ್ಕೆ ಮಾಡಿ!ಗ್ಯಾಲರಿ : ಎಸ್ ಫ್ ಎಂ ಕಲಾ ಪ್ರಶಸ್ತಿ ಪಡೆದವರ ಕಲರವ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X