»   » ನೆಚ್ಚಿನ ಸಂಗೀತ ಪ್ರತಿಭೆಗಳನ್ನು ನೀವೆ ಆಯ್ಕೆ ಮಾಡಿ!

ನೆಚ್ಚಿನ ಸಂಗೀತ ಪ್ರತಿಭೆಗಳನ್ನು ನೀವೆ ಆಯ್ಕೆ ಮಾಡಿ!

Posted By:
Subscribe to Filmibeat Kannada
93.5 SFM presents Kalaa Awards
ಕನ್ನಡ ಚಿತ್ರೋದ್ಯಮದಲ್ಲಿ ಎಲೆಮರೆಯ ಕಾಯಿಗಳಂತಿರುವ ಸಂಗೀತ ಪ್ರತಿಭೆಗಳನ್ನು ಹೆಕ್ಕಿ ತೆಗೆಯಲು ಇದೇ ಮೊದಲ ಬಾರಿಗೆ ಸನ್ ನೆಟ್ ವರ್ಕ್ ನ 93.5 ಎಸ್ ಎಫ್ ಎಂ ರೇಡಿಯೋ(ಕರ್ನಾಟಕ) ಕಲಾ ಪ್ರಶಸ್ತಿ 2009ನ್ನು ವಿತರಿಸಲು ಯೋಜಿಸಿದೆ. ಉತ್ತಮ ಸಂಗೀತ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಅಭಿನಂದಿಸಲು ಜನವರಿ 24, 2009ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮವನ್ನು 93.5 ಎಸ್ ಎಫ್ ಎಂ ರೇಡಿಯೋ ಆಯೋಜಿಸಲಿದೆ.

''ರೇಡಿಯೋ ಕೇಂದ್ರಗಳು ಕೇವಲ ಸಂಗೀತೋದ್ಯಮದ ಮೇಲೆ ಆಧಾರಪಟ್ಟಿವೆ. ರೇಡಿಯೋ ವಾಹಿನಿಗಳ ಈ ಕೊಡುಗೆಯನ್ನು ಗುರುತಿಸುವ ಕೆಲಸ ಆಗಿಲ್ಲ.ಕಳೆದ ಎರಡು ವರ್ಷಗಳ ನಮ್ಮ ಸತತ ಗೆಲುವಿಗೆ ಕಾರಣವಾದ ಸಂಗೀತೋದ್ಯಮವನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಲು ಕಲಾ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಿದ್ದೇವೆ. ಸ್ಪರ್ಧೆ ಆರೋಗ್ಯಕರವಾಗಿ ಮತ್ತು ನ್ಯಾಯಯುತವಾಗಿ ಇರಬೇಕೆಂಬುದು ನಮ್ಮ ಆಶಯ. ಪ್ರಶಸ್ತಿಗಾಗಿ ತಮ್ಮ ನೆಚ್ಚಿನ ಗಾಯಕರ ಹೆಸರನ್ನು ಕೇಳುಗರು ಸೂಚಿಸಬಹುದು ಎಂದು 93.5 ಎಸ್ ಎಫ್ ಎಂನ ಕಾರ್ಯಕ್ರಮ ನಿರ್ದೇಶಕ(ಕರ್ನಾಟಕ) ಸತೀಶ್ ಚಂದ್ರ ತಿಳಿಸಿದರು.

ಕಲಾ ಪ್ರಶಸ್ತಿಗಳನ್ನು ಪ್ರದಾನ ಮಾಡುವುದಕ್ಕೂ ಮುನ್ನ ಒಂದು ಗಂಟೆ ಕಾಲಾವಧಿಯ ವಿಶೇಷ ಕಾರ್ಯಕ್ರಮವನ್ನು ಜ.24ರಂದು ಪ್ರಸಾರ ಮಾಡಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾದ ಗಾಯಕರ ಹಾಡುಗಳನ್ನು 93.5 ಎಸ್ ಎಫ್ ಎಂ ರೇಡಿಯೋದ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಗುಲ್ಬರ್ಗ ಕೇಂದ್ರಗಳಿಂದ ಪ್ರಸಾರ ಮಾಡಲಾಗುತ್ತದೆ. ಕೇಳುಗರು ಪ್ರಶಸ್ತಿಗಾಗಿ ಆಯ್ಕೆ ಮಾಡಿದ ಹಾಡುಗಳನ್ನು ಪ್ರಸಾರ ಮಾಡಲಾಗುತ್ತದೆ ಎಂದು ಸತೀಶ್ ಚಂದ್ರ ವಿವರ ನೀಡಿದರು.

ಕಲಾ ಪ್ರಶಸ್ತಿಗಳು 2009:
ಸಂಗೀತೋದ್ಯಮವನ್ನು ಪ್ರೋತ್ಸಾಹಿಸಲು ರೇಡಿಯೋ ವಾಹಿನಿಯೊಂದು ಕೊಡುತ್ತಿರುವ ಪ್ರಶಸ್ತಿ ಇದಾಗಿದ್ದು. ಪ್ರಶಸ್ತಿಗಾಗಿ ಪ್ರತಿಭಾವಂತ ಗಾಯಕರನ್ನು ಆಯ್ಕೆ ಮಾಡುವ ಅವಕಾಶವನ್ನು ಕೇಳುಗರಿಗೆ ನೀಡಲಾಗಿದೆ. 93.5 ಎಸ್ ಎಫ್ ಎಂನ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಗುಲ್ಬರ್ಗ ಕೇಂದ್ರಗಳ ಕೇಳುಗರೇ 2008ರ ತಮ್ಮ ನೆಚ್ಚಿನ ಗಾಯಕ/ಗಾಯಕಿಯರ ಹೆಸರುಗಳನ್ನು ಕಲಾ ಪ್ರಶಸ್ತಿಗಾಗಿ ಸೂಚಿಸಬಹುದು.

ಉತ್ತಮ ಚಿತ್ರಸಾಹಿತಿ, ಗಾಯಕ, ಸಂಗೀತ ನಿರ್ದೇಶಕರನ್ನು ಎಸ್ ಎಂ ಎಸ್ ಮೂಲಕ ಕೇಳುಗರು ಸೂಚಿಸಬಹುದು.ಉತ್ತಮ ಸಂಗೀತ ಸಂಯೋಜಕ, ಉತ್ತಮ ಚಿತ್ರಸಾಹಿತಿ, ಉತ್ತಮ ಗಾಯಕಿ, ಉತ್ತಮ ಗಾಯಕ,ಉತ್ತಮ ಹಾಡಿನ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಗಳನ್ನು ಹೊರತುಪಡಿಸಿ 2008ರ ಅತ್ಯುತ್ತಮ ಸಂಗೀತ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಕೇಳುಗರು ತಮ್ಮ ನೆಚ್ಚಿನ ಕಲಾವಿದರನ್ನು ಆಯ್ಕೆ ಮಾಡಲು 93.5 ಎಸ್ ಎಫ್ ಎಂ ಕೇಂದ್ರಗಳಿಗೆ ಕರೆ ಮಾಡಿ ತಿಳಿಸಬಹುದು ಅಥವಾ 58585 ಸಂಖ್ಯೆಗೆ ಎಸ್ ಎಂ ಎಸ್ ಮಾಡಬಹುದು. ಒಬ್ಬರು ಎಷ್ಟು ಬೇಕಾದರೂ ಎಸ್ ಎಂ ಎಸ್ ಗಳನ್ನು ಕಳುಹಿಸಬಹುದಾಗಿದೆ.

ಬೆಂಗಳೂರಿನ ಶ್ರೋತೃಗಳು ಕರೆಮಾಡಿ: 080-41237 935

(ದಟ್ಸ್ ಕನ್ನಡ ಚಿತ್ರವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X