For Quick Alerts
  ALLOW NOTIFICATIONS  
  For Daily Alerts

  8 ವರ್ಷದ ಬಾಲೆಗೆ 82ರ ಲತಾ ಕಂಠ !

  By Srinath
  |

  ಮುಂಬೈ, ಫೆ.28: ಕಳೆದ ವಾರ ಬಿಡುಗಡೆಯಾಗಿರುವ 'ಸತ್ರಂಗೀ ಪ್ಯಾರಾಚೂಟ್' ಎಂಬ ಮಕ್ಕಳ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸುವ ವೇಳೆಗೆ 24 ವರ್ಷದ ವಿನೀತ್ ಕ್ಷೇತ್ರಪಾಲ್ ಹೈರಾಣರಾಗಿದ್ದಾರೆ. ಆದರೆ ಅಷ್ಟೇ ಸಮಾಧಾನವೂ ಇವರದಾಗಿದೆ. ಚಿತ್ರದಲ್ಲಿ ಸಂಗೀತವೇ ಪ್ರಧಾನ ಪಾತ್ರವಹಿಸಿದೆ. ಇತ್ತೀಚೆಗೆ ಹಾಡುವುದನ್ನು ನಿಲ್ಲಿಸಿರುವ ಲತಾ ದೀದಿ ಅವರನ್ನು ಮಕ್ಕಳ ಚಿತ್ರಕ್ಕಾಗಿ ಅದೂ 8ರ ಬಾಲೆಗಾಗಿ ಹಾಡಬೇಕು ಎಂದು ಕೇಳಿಕೊಂಡಾಗ ಸ್ವತಃ ಅವರೇ ಎಂಟರ ಬಾಲಕಿಯಾಗಿ ಸ್ವರ ಹೊರಹೊಮ್ಮಿಸಿದ್ದಾರೆ.

  ಚಿತ್ರದಲ್ಲಿ 6 ಹಾಡುಗಳಿವೆ. ಅದರಲ್ಲಿ ಒಂದು ವಿಶೇಷವಾಗಿದೆ. ಅದೇ ನಮ್ಮ 82 ವರ್ಷದ ಲತಾ ದೀದಿ 8 ವರ್ಷದ ಬಾಲ ನಟಿಗೆ ಹಿನ್ನೆಲೆ ಗಾಯನ ಮಾಡಿದ್ದಾರೆ. 'ತೇರೆ ಹಸ್ನೆ ಪೆ ಮುಝೆ ಹಸಿ ಆತಿ ಹೈ' ಎಂದು ಲತಾ ಮಂಗೇಷ್ಕರ್ ನಗುನಗುತ್ತಲೇ ಹಾಡಿದ್ದಾರೆ. ಚೊಚ್ಚಲ ಸಿನಿಮಾ ಮಾಡುತ್ತಿರುವ ೨೪ ವರ್ಷದ ನಿರ್ದೇಶಕ/ನಿರ್ಮಾಪಕನಿಗಾಗಿ ಈ ಮೇರು ಕಲಾವಿದೆ ಎಂದಿನಂತೆ ಸುಶ್ರಾವ್ಯವಾಗಿ ಹಾಡಿದ್ದಾರೆ.

  ಆದರೆ ಅದಕ್ಕಾಗಿ ಸಾಕಷ್ಟು ದೈಹಿಕ ಶ್ರಮ ಹಾಕಿದ್ದಾರೆ. ಜೀವನದ ಸಂಧ್ಯಾಕಾಲದಲ್ಲಿರುವ ನಮ್ಮೆಲ್ಲರ ಪ್ರೀತಿಯ ಲತಾಜೀ ಹಾಡಿನ ರೆಕಾರ್ಡಿಂಗ್‌ಗಾಗಿ 3 ಬಾರಿ ಸ್ಟುಡಿಯೋಗೆ ಬಂದು ಹೋಗಿದ್ದಾರೆ. ದೇಹಕ್ಕೆ ಮುಪ್ಪಾದರೂ ಕಂಠಕ್ಕೆ ಇನ್ನೂ ಎಂಟರ ಪ್ರಾಯ ಎಂಬುದನ್ನು ಹಾಡು ಕೇಳಿದರೆ ನೀವೇ ಹೇಳುತ್ತೀರಿ.

  English summary
  Lata Mangeshkar, 82, sings for an eight-year-old in a 24-year-old's debut movie, Satrangee Parachute in bollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X