»   » ಗಾಯಕಿಯಾಗಿ 'ಪಂಚರಂಗಿ' ನಿಧಿಸುಬ್ಬಯ್ಯ

ಗಾಯಕಿಯಾಗಿ 'ಪಂಚರಂಗಿ' ನಿಧಿಸುಬ್ಬಯ್ಯ

Posted By:
Subscribe to Filmibeat Kannada

ಈಗಾಗಲೆ ತಮ್ಮ ಮಾದಕ ಚೆಲುವಿನಿಂದ ಪ್ರೇಕ್ಷಕರನ್ನು ಆಕರ್ಷಿಸುತ್ತಿರುವ ನಟಿ ನಿಧಿ ಸುಬ್ಬಯ್ಯ. ತಮ್ಮದೇ ಆದಂತಹ ಅಭಿನಯದ ಮೂಲಕ ಗಮನಸೆಳೆದ ನಟಿ. ಇದೀಗ ತಮ್ಮ ಸುಮಧುರ ಕಂಠದಿಂದ ಪ್ರೇಕ್ಷಕರನ್ನು ಸೆಳೆಯಲು 'ಪಂಚರಂಗಿ' ನಿಧಿ ಸುಬ್ಬಯ್ಯ ಮುಂದಾಗಿದ್ದಾರೆ.

ಚಿತ್ರವೊಂದರ ನಿರ್ಮಾಣ ಹಂತದ ವಿಡಿಯೋಗಳನ್ನು (ಮೇಕಿಂಗ್ ವಿಡಿಯೋ) ಮಾಡಿ ಪ್ರೇಕ್ಷಕರನ್ನು ಸೆಳೆಯುವುದು ಹೊಸ ಬೆಳವಣಿಗೆ. ಕನ್ನಡ ಚಿತ್ರರಂಗ ಸಹ ಮೇಕಿಂಗ್ ವಿಡಿಯೋಗಳಿಂದ ಹೊರತಾಗಿಲ್ಲ.ಯಶಸ್ವಿ ನಿರ್ದೇಶಕ ಯೋಗರಾಜಭಟ್ ತಮ್ಮ 'ಪಂಚರಂಗಿ' ಚಿತ್ರದ ಮೇಕಿಂಗ್ ವಿಡಿಯೋ ಮಾಡಿದ್ದಾರೆ. ಈ ವಿಡಿಯೋದ ಹಾಡು ನಿಧಿ ಸುಬ್ಬಯ್ಯ ಕಂಠದಿಂದ ಮೂಡಿಬಂದಿರುವುದು ವಿಶೇಷ.

ಈಗಾಗಲೆ 'ಚೆಲುವೆಯೇ ನಿನ್ನೇ ನೋಡಲು' ಚಿತ್ರತಂಡ ಆಡಿಯೋ ಸಿಡಿ ಜೊತೆಗೆ ಚಿತ್ರದ ಮೇಕಿಂಗ್ ಸಿಡಿಯನ್ನು ಕೊಟ್ಟಿತ್ತು. 'ಮನಸಾರೆ' ಚಿತ್ರಕ್ಕೂ ಯೋಗರಾಜ್ ಭಟ್ ಮೇಕಿಂಗ್ ವಿಡಿಯೋ ಮಾಡಿದ್ದರು. ಇದೀಗ 'ಮೇಕಿಂಗ್ ಆಫ್ ಪಂಚರಂಗಿ' ಮೂಲಕ ಆ ಪ್ರಯತ್ನ ಮುಂದುವರಿದಿದೆ. ನಿಧಿ ಸುಬ್ಬಯ್ಯ ಕಂಠ ಎಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ಸೆಳೆಯಲಿದೆ ಎಂಬುದನ್ನು ಕಾದುನೋಡಬೇಕು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada