Just In
- 2 hrs ago
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- 2 hrs ago
'ದಳಪತಿ 65' ಸಿನಿಮಾಗೆ ಇವರೇ ನಾಯಕಿ; ಟ್ವಿಟ್ಟರ್ ನಲ್ಲಿ ಅಭಿಮಾನಿಗಳ ಟ್ರೆಂಡ್
- 4 hrs ago
ಶಿವಣ್ಣನಿಗೆ ಕೃಷ್ಣ-ಮಿಲನಾ ಜೋಡಿಯ ಮದುವೆ ಆಮಂತ್ರಣ- ಡಿ ಬಾಸ್ ಗೆ ಯಾವಾಗ ಕೊಡ್ತೀರಾ ಎನ್ನುತ್ತಿದ್ದಾರೆ ಅಭಿಮಾನಿಗಳು
- 12 hrs ago
ಮತ್ತೆ ಬಾಲಿವುಡ್ಗೆ ಪಯಣ ಬೆಳೆಸಿದ ದುಲ್ಕರ್ ಸಲ್ಮಾನ್
Don't Miss!
- Finance
34,000 ರುಪಾಯಿ ತನಕ ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ
- News
ಚುನಾವಣೆಗೂ ಮುನ್ನ ಅಮಿತ್ ಶಾ ಜೊತೆ ಇಪಿಎಸ್ ಮಹತ್ವದ ಚರ್ಚೆ
- Automobiles
ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆಫರ್
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮತ್ತೆ ಗೆದ್ದ ನಾಗಶೇಖರ್: ಯೂಟ್ಯೂಬ್ ನಲ್ಲಿ 'ಅಮರ್' ಚಿತ್ರದ ಹಾಡಿನ ಹವಾ
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಬಹು ನಿರೀಕ್ಷೆಯ 'ಅಮರ್' ಚಿತ್ರದಿಂದ ರಿಲೀಸ್ ಆಗಿರುವ ಎರಡು ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಮೊದಲ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೆ ಎರಡನೇ ಹಾಡು ಕೂಡ ಯೂಟ್ಯೂಬ್ ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ.
'ಅಮರ್' ನಿರ್ದೇಶಕ ನಾಗಶೇಖರ್ ಸಾರಥ್ಯದಲ್ಲಿ ಮೂಡಿ ಬಂದಿರುವ ಚಿತ್ರ. ವಿಶೇಷ ಅಂದ್ರೆ ನಾಗಶೇಖರ್ ನಿರ್ದೇಶನದ ಎಲ್ಲಾ ಚಿತ್ರಗಳ ಹಾಡುಗಳು ಸಹ ಸೂಪರ್ ಹಿಟ್ ಆಗಿವೆ. ಮ್ಯೂಸಿಕಲ್ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರುವ ನಾಗಶೇಖರ್ ಸಿನಿಮಾ ಲಿಸ್ಟ್ ಗೆ ಈಗ 'ಅಮರ್' ಸಿನಿಮಾ ಕೂಡ ಸೇರ್ಪಡೆಯಾಗಿದೆ.
'ಅಮರ್' ಚಿತ್ರದ ಬಿಡುಗಡೆ ದಿನಾಂಕ ಅಧಿಕೃತ ಘೋಷಣೆ
'ಅಮರ್' ಸೇರಿದಂತೆ ನಾಗಶೇಖರ್ ಐದು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಸಕ್ಸಸ್ ಗೆ ಸಂಗೀತ ಕೂಡ ಬಹು ಮುಖ್ಯವಾಗಿರುತ್ತೆ. ಹಾಡುಗಳು ಸೂಪರ್ ಹಿಟ್ ಆದ್ರೆ ಚಿತ್ರ ಅರ್ಧ ಗೆದ್ದ ಹಾಗೆ. ಈ ವಿಷಯದಲ್ಲಿ ನಾಗಶೇಖರ್ ಯಾವಾಗಲು ಲಕ್ಕಿ ಅಂದ್ರೆ ತಪ್ಪಾಗಲ್ಲ. 'ಅರಮನೆ' ಚಿತ್ರದಿಂದ 'ಅಮರ್' ಚಿತ್ರದ ವರೆಗೂ ಪ್ರತಿಯೊಂದು ಸಿನಿಮಾಗಳ ಹಾಡುಗಳು ಸೂಪರ್ ಹಿಟ್ ಆಗಿವೆ. ಮುಂದೆ ಓದಿ..

ಯ್ಯೂಟ್ಯೂಬ್ ನಲ್ಲಿ ಅಮರ್ ಹಾಡಿನ ಸದ್ದು
ಇತ್ತೀಚಿಗಷ್ಟೆ ರಿಲೀಸ್ ಆಗಿರುವ 'ಅಮರ್' ಚಿತ್ರದ 'ಹಾಗೆ ಸುಮ್ಮನೆ.. ಹೀಗೆ ನಿನ್ನನೇ' ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಮೆಲೋಡಿ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿರುವ ಈ ಹಾಡು ಮೂರನೆ ಸ್ಥಾನದಲ್ಲಿದೆ. ಮತ್ತೆ ಮತ್ತೆ ಕೇಳಬೇಕು ಎನಿಸುವ ಈ ಹಾಡು 'ಅಮರ್' ಚಿತ್ರದ ಮೋಸ್ಟ್ ಮೆಲೋಡಿ ಹಾಡು ಇದಾಗಿದೆ. ಈ ಹಿಂದೆ ರಿಲೀಸ್ ಆಗಿದ್ದ ಚಿತ್ರದ ಮೊದಲ ಹಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕವಿರಾಜ್ ಸಾಹಿತ್ಯ ಮತ್ತು ಅರ್ಜುನ್ ಜನ್ಯ ಸಂಗೀತ 'ಅಮರ್' ಚಿತ್ರವನ್ನು ಮತ್ತೊಂದು ಲೆವೆಲ್ ಗೆ ತೆಗೆದುಕೊಂಡು ಹೋಗಿದೆ.
ಸೆನ್ಸಾರ್ ಅದ 'ಅಮರ್' ಸಿನಿಮಾ ಮೇ ತಿಂಗಳಿನಲ್ಲಿ ರಿಲೀಸ್

ಅರಮನೆ ಸಿನಿಮಾದಲ್ಲಿ ಹಾಡಿನ ಮೋಡಿ
ನಾಗಶೇಖರ್ ನಿರ್ದೇಶನದ ಮೊದಲ ಸಿನಿಮಾ 'ಅರಮನೆ' ಚಿತ್ರದ ಹಾಡುಗಳು ಸಹ ಸೂಪರ್ ಹಿಟ್ ಆಗಿವೆ. ಗುರುಕಿರಣ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡುಗಳು ಗಾನಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದವು. ಚಿತ್ರದ ಆರು ಹಾಡುಗಳು ಸಹ ಒಂದಕ್ಕಿಂತ ಒಂದು ವಿಭಿನ್ನವಾಗಿ ಮೂಡಿ ಬಂದಿದ್ದು ಪ್ರತಿಯೊಂದು ಹಾಡುಗಳು ಕೇಳುಗರ ಮನಗೆದ್ದಿವೆ.

ಸದ್ದು ಮಾಡಿತ್ತು ಸಂಜು ವೆಡ್ಸ್ ಗೀತಾ ಸಂಗೀತ
ನಾಗಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಸಂಜು ವೆಡ್ಸ್ ಗೀತಾ' ಚಿತ್ರದ ಹಾಡುಗಳು ಸಹ ಸಿಕ್ಕಾ ಪಟ್ಟೆ ಸದ್ದು ಮಾಡಿತ್ತು. ಮೋಹಕ ತಾರೆ ರಮ್ಯಾ ಮತ್ತು ಶ್ರೀನಗರ ಕಿಟ್ಟಿ ಅಭಿನಯದ 'ಸಂಜು ವೆಡ್ಸ್ ಗೀತಾ' ಚಿತ್ರ ಹಿಟ್ ಆಗಲು ಚಿತ್ರದ ಹಾಡುಗಳು ಸಹ ಪ್ರಮುಖ ಕಾರಣವಾಗಿತ್ತು. ಪ್ರತಿಯೊಂದು ಹಾಡುಗಳು ಕೇಳುಗರ ಮನ ಮುಟ್ಟುವಂತ್ತಿದ್ದವು. ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜನೆ ಇದೆ.

ಮೈನಾ ಚಿತ್ರದ ಹಾಡಿಗೆ ಮನಸೋಲದವರಿಲ್ಲ
ನಗಶೇಖರ್ ಸಿನಿಮಾಗಳು ಸಂಗೀತ ಮೂಲಕವೇ ಹೆಚ್ಚು ಸದ್ದು ಮಾಡಿವೆ ಎನ್ನುವುದಕ್ಕೆ ಮೈನಾ ಚಿತ್ರ ಕೂಡ ಉತ್ತಮ ಉದಾಹಾರಣೆ. ಮೈನಾ ಚಿತ್ರದ 5 ಹಾಡುಗಳು ಸಹ ಕೇಳೋಕೆ ಸಖತ್ ಇಂಪಾಗಿವೆ. ಜೆಸ್ಸಿ ಗಿಫ್ಟ್ ಮೆಲೋಡಿ ಸಂಗೀತ ಮತ್ತು ಸಾಧು ಕೋಕಿಲ ಬ್ಯಾಗ್ರೌಂಡ್ ಸ್ಕ್ರೋರ್ ಮೈನಾ ಸಿನಿಮಾ ಸೂಪರ್ ಹಿಟ್ ಆಗಲು ಪ್ರಮುಖ ಕಾರಣವಾಗಿತ್ತು.

ಮಾಸ್ತಿಗುಡಿಯ ಒಂದು ಸಾಂಗ್ ಹಿಟ್
ನಾಗಶೇಖರ್ ನಿರ್ದೇಶನದ ಬಹುತೇಕ ಚಿತ್ರಗಳಲ್ಲಿ ಸಾಧು ಕೋಕಿಲ ಕೆಲಸ ಮಾಡಿದ್ದಾರೆ. 'ಮಾಸ್ತಿಗುಡಿ' ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಇದೇ ಸಾಧು ಕೋಕಿಲ. 'ಮಾಸ್ತಿಗುಡಿ' ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗದಿದ್ದರು 'ಚಿಪ್ಪಿನೊಳಗಡೆ' ಮೆಲೋಡಿ ಹಾಡಂತು ಮತ್ತೆ ಮತ್ತೆ ಕೇಳಬೇಕು ಎನಿಸುವ, ಮತ್ತೆ ಮತ್ತೆ ಗುನುಗುವ ಹಾಡಾಗಿವೆ. ಈಗ 'ಅಮರ್' ಚಿತ್ರದ ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಮ್ಯೂಸಿಕಲಿ ನಾಗಶೇಖರ್ ಯಾವಾಗಲು ಫುಲ್ ಮಾರ್ಕ್ಸ್ ಗಿಟ್ಟಿಸಿಕೊಳ್ಳುತ್ತಾರೆ.