For Quick Alerts
  ALLOW NOTIFICATIONS  
  For Daily Alerts

  'ಶೋಕಿವಾಲ' ಅಜಯ್ ರಾವ್ ಅಡ್ಡಾದಲ್ಲಿ ನಾಟಿ ಕೋಳಿ ಸೌಂಡು: ಮೊದಲ ಬಾರಿ ಮೈಕ್ ಹಿಡಿದ ಸಂಗೀತ ನಿರ್ದೇಶಕ

  |

  ಅಜಯ್ ರಾವ್ ಮತ್ತೊಂದು ಸಿನಿಮ 'ಶೋಕಿವಾಲ' ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಸಿನಿಮಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಸಂಗೀತ ಪ್ರಿಯರಿಗಾಗಿ ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಎರಡನೇ ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಫೆಬ್ರವರಿ 3ನೇ ತಾರೀಕಿನಂದು ಹುಚ್ಚೆದ್ದು ಹೆಜ್ಜೆ ಹಾಕುವ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

  'ಶೋಕಿವಾಲ' ಸಿನಿಮಾದ ಹಾಡುಗಳಲ್ಲಿ ಸಾಕಷ್ಟು ವಿಶೇಷತೆಗಳಿವೆ. ಸಿನಿಮಾದ ಮೊದಲನೇ ಲಿರಿಕಲ್ ಸಾಂಗ್ ಸಂಗೀತ ಪ್ರಿಯರಿಗೆ ಇಷ್ಟ ಆಗಿದೆ. ಇದೇ ಖುಷಿಯಲ್ಲಿ ಎರಡನೇ ಹಾಡನ್ನು ಬಿಡುಗಡೆ ಮಾಡುವುದಕ್ಕೆ 'ಶೋಕಿವಾಲ' ಟೀಮ್ ಸಜ್ಜಾಗಿ ನಿಂತಿದೆ. ಇದೊಂದು ನಾಟಿ ಶೈಲಿಯಲ್ಲಿ ಕಂಪೋಸ್ ಮಾಡುವ ಹಾಡು. ಹಾಗಾಗಿ ಒಂದಿಷ್ಟು ವಿಶೇಷತೆಗಳನ್ನು ಹೊತ್ತು ಸಂಗೀತ ಪ್ರಿಯರ ಮುಂದೆ ಬರುತ್ತಿದೆ.

  ಮೊದಲ ಬಾರಿ ಸಂಗೀತ ನಿರ್ದೇಶಕ‌ ಶ್ರಿಧರ್.ವಿ.ಸಂಭ್ರಮ್ ಗಾಯನ

  ಅಜಯ್ ರಾವ್ ಹಾಗೂ ಸಂಜನಾ ಆನಂದ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ 'ಶೋಕಿವಾಲ' ಸಾಂಗ್‌ ಹಲವು ವಿಶೇಷತೆಗಳನ್ನು ಹೊತ್ತು ಬರುತ್ತಿದೆ. ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಹಾಡೊಂದಕ್ಕೆ ಧ್ವನಿ ನೀಡಿದ್ದಾರೆ. ನಾಟಿ ಕೋಳಿ ನೀನು.. ನಾಟಿ ಹುಂಜ ನಾನು ಎನ್ನುವ ಹಾಡು ಇದಾಗಿದ್ದು, ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಹಾಗೂ ಹೋಗಿ ಸುನಿತಾ ಧ್ವನಿ ನೀಡಿದ್ದಾರೆ.

  ಶ್ರೀಧರ್ ವಿ ಸಂಭ್ರಮ್ ಗಾಯಕರಷ್ಟೇ ಅಲ್ಲ. ಈ ಹಾಡಿನಲ್ಲಿ ಶ್ರೀಧರ್ ವಿ ಸಂಭ್ರಮ್ ಹಾಗೂ ಗಾಯಕಿ ಜೋಗಿ ಸುನಿತಾ ಇಬ್ಬರೂ ಚಿಕ್ಕೊಂದು ಸ್ಟೆಪ್ ಕೂಡ ಹಾಕಿದ್ದಾರೆ. ಸದ್ಯ ಚಿತ್ರತಂಡ ಲಿರಿಕಲ್ ಸಾಂಗ್ ಅನ್ನು ಮಾತ್ರ ಬಿಡುಗಡೆ ಮಾಡಲು ಸಜ್ಜಾಗಿದೆ. ಫೆಬ್ರವರಿ 3ರಂದು ಈ ಹಾಡನ್ನು ಬಿಡುಗಡೆ ಮಾಡಲಿದ್ದಾರೆ. 'ಶೋಕಿವಾಲ' ಸಿನಿಮಾವನ್ನು ಜಾಕಿ ನಿರ್ದೇಶಿಸಿದ್ದು, ರಿಲೀಸ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನೂ ಚಿತ್ರತಂಡ ಮಾಡಿಕೊಂಡಿದೆ.

  ಕನ್ನಡ, ತೆಲುಗು ಭಾಷೆಯಲ್ಲಿ 'ಶೋಕಿವಾಲ' ರಿಲೀಸ್

  ಅಜಯ್ ರಾವ್ ಹಾಗೂ ಸಲಗ ಖ್ಯಾತಿಯ ಸಂಜನಾ ಆನಂದ್ ನಟನೆಯ 'ಶೋಕಿವಾಲ' ಎರಡು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಆಗಲಿದ್ದು, ಇದೇ ಮೊದಲ ಬಾರಿಗೆ ಅಜಯ್ ರಾವ್ ಸಿನಿಮಾವೊಂದು ಎರಡು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸದ್ಯ ಕನ್ನಡ ಸಾಂಗ್‌ಗೆ ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಅದೇ ತೆಲುಗು ಸಾಂಗಿಗೆ ಗೌಸ್‌ಪೀರ್ ಸಾಹಿತ್ಯವಿದೆ.

  'ಶೋಕಿವಾಲ' ಸಿನಿಮಾದ ಸೆನ್ಸಾರ್ ಕೂಡ ಈಗಾಗಲೇ ಆಗಿದೆ. ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಯು/ಎ ಸರ್ಟಿಫಿಕೇಟ್ ನೀಡಿದೆ. ಇದು ಪಕ್ಕಾ ಗ್ರಾಮೀಣ ಪ್ರದೇಶದ ಸಿನಿಮಾ. ಹೀಗಾಗಿ ಸಿನಿಮಾದಲ್ಲ ಹಾಸ್ಯ, ಸೆಂಟಿಮೆಂಟ್ ಎಲ್ಲಾ ಎಲಿಮೆಂಟ್‌ಗಳನ್ನೂ ಮಿಕ್ಸ್ ಮಾಡಿ ಸಿನಿಮಾ ಮಾಡಲಾಗಿದೆ. ಈ ಸಿನಿಮಾಗೆ ನವೀನ್ ಕುಮಾರ್ ಛಾಯಾಗ್ರಹಣವಿದೆ. ಪ್ರಶಾಂತ್ ರಾಜಪ್ಪ ಡೈಲಾಗ್ ಬರೆದಿದ್ದಾರೆ. ಅಜಯ್ ರಾವ್ ಹಾಗೂ ಸಂಜನಾ ಜೊತೆ ತಬಲಾ ನಾಣಿ, ಶರತ್ ಲೋಹಿತಾಶ್ವ, ಲಾಸ್ಯಾ, ನಾಗರಾಜ ಮೂರ್ತಿ ಸೇರಿದಂತೆ ಹಲವರು ನಟಿಸಿದ್ದಾರೆ.

  English summary
  Ajay Rao Starrer Shokiwala song Nati koli song will be released on feb 3rd. For the first time music director Sridar V Sambram lent the voice to the movie.
  Sunday, January 30, 2022, 21:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X