For Quick Alerts
  ALLOW NOTIFICATIONS  
  For Daily Alerts

  'ಲಹರಿ'ಯಿಂದ ವಿಭಿನ್ನ ಪ್ರಯತ್ನ ಅನ್ನದಾತಂ ಶರಣಂ

  By Rajendra
  |

  ರೈತರ ಬಗ್ಗೆ ಕಾಳಜಿ ಹೊಂದಿರುವ ಯುವಕ ಅವಿರಾಂ ಕಂಠೀರವ ಅವರು ನಮಗಾಗಿ ಪ್ರಾಣತೆತ್ತು ಹುತಾತ್ಮರಾದ ಹಾಗೂ ಈಗಲೂ ನಮ್ಮಗೆಲ್ಲ ಅನ್ನ ನೀಡುತ್ತಿರುವ ರೈತಾಪಿ ವರ್ಗಕ್ಕೆ ಗೌರವ ಸಲ್ಲಿಸಲೆಂದು 'ಅನ್ನದಾತಂ ಶರಣಂ' ಎಂಬ ದೃಶ್ಯಗೀತೆಯೊಂದನ್ನು ಮಾಡಿದ್ದಾರೆ.

  ಈ ಸೀಡಿಯ ಬಿಡುಗಡೆ ಸಮಾರಂಭ ರೇಣುಕಾಂಬ ಥಿಯೇಟರ್ ನಲ್ಲಿ ನೆರವೇರಿತು. ರಾಜೇಶ್ ಕೃಷ್ಣನ್, ಶಶಿಧರ್ ಕೋಟೆ, ರಮೇಶ್ ಚಂದ್ರ, ಅಜೇಯ್ ವಾರಿಯರ್, ಸಂಗೀತಾಕಟ್ಟಿ, ಸುರೇಖ, ದಿವ್ಯಾರಾಘವನ್ ಹಾಗೂ ಅನುರಾಧಾ ಭಟ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಸೀಡಿಯನ್ನು ಹೆಸರಾಂತ ಲಹರಿ ಸಂಸ್ಥೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

  ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ, ಡಾ. ಸಿ.ಎನ್.ಮಂಜುನಾಥ್, ಹಂಸಲೇಖ, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ, ಮಾಸ್ಟರ್ ಹಿರಣ್ಣಯ್ಯ, ಡಾ.ಚಂದ್ರಶೇಖರ್ ಕಂಬಾರ, ಎಚ್.ಎಸ್.ದೊರೆಸ್ವಾಮಿ, ಕೆ.ಎಸ್.ನಿಸಾರ್‍ ಅಹ್ಮದ್, ಬಿ.ಸರೋಜದೇವಿ, ಭಾರತಿವಿಷ್ಣುವರ್ಧನ, ಬಿ.ಜಯಶ್ರೀ, ಅರುಂಧತಿನಾಗ್, ಗಿರೀಶ್ ಕಾಸರವಳ್ಳಿ, ಸುರೇಶ್ ಹೆಬ್ಳಿಕರ್, ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಸೇರಿದಂತೆ ಹಲವಾರು ಗಣ್ಯರು ಈ ಗೀತೆಯ ಮೂಲಕ ರೈತರಿಗೆ ನಮನ ಸಲ್ಲಿಸಿದ್ದಾರೆ.

  ಈ ಸೀಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಸಂತೋಷ್ ಹೆಗ್ಡೆ ಅವರು, "ನಮ್ಮ ರೈತರ ಬಗ್ಗೆ ಯಾರು ಕಾಳಜಿ ಇಟ್ಟುಕೊಳ್ಳಬೇಕಾದವರು ಇಟ್ಟುಕೊಂಡಿಲ್ಲ. ಇಂಥ ಕೆಲಸಗಳ ಮೂಲಕ ನಾವು ರೈತ ಕುಟುಂಬಗಳಿಗೆ ಸಾಂತ್ವನ ಹೇಳಬಹುದು" ಎಂದರು. ಹೃದಯ ತಜ್ಞೆ ಡಾ:ವಿಜಯಲಕ್ಷ್ಮೀ ಬಾಳೆಕುಂದ್ರಿ, ರಮೇಶ್ ಚಂದ್ರ, ಲಹರಿ ಸಂಸ್ಥೆಯ ವೇಲು ಮೊದಲಾದ ಗಣ್ಯರು ಈ ಸೀಡಿಯ ಬಗ್ಗೆ ಮಾತನಾಡಿ ಅವಿರಾಂ ಕಂಠೀರವ ಅವರಲ್ಲಿರುವ ರೈತರ ಪರ ಕಾಳಜಿಯನ್ನು ಶ್ಲಾಘಿಸಿದರು. (ಒನ್ಇಂಡಿಯಾ ಕನ್ನಡ)

  English summary
  A video song specially dedicated to farmers by Aviram Kanteerava released in grand style in Bangalore recently. Renowned singers Rajesh Krishnan, Shashidhar Kote, Ramesh Chandra, Ajay Warrior, Sangeetha Katti, Surekha, Anuradha Bhat, Divya Raghavan lend the voice for the audio. The audio marketed by Lahari Music.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X