twitter
    For Quick Alerts
    ALLOW NOTIFICATIONS  
    For Daily Alerts

    ಸಂಗೀತ ದಿಗ್ಗಜರ ಸಾರಥ್ಯದಲ್ಲಿ ಸೃಷ್ಟಿಯಾದ 'ಮೇರಿ ಪುಕಾರ್ ಸುನೋ'

    |

    ಕೊರೊನಾ ಸಂಕಷ್ಟದ ಸಮಯದಲ್ಲಿ ಮನಮುಟ್ಟುವ ಮಾಧುರ್ಯದ ಜೊತೆಗೆ ಸ್ಫೂರ್ತಿದಾಯಕ ಹಾಡುಗಳು ಹೊಸ ಆಶಾಕಿರಣವಾಗಿ ಕಾಣಿಸುತ್ತದೆ. ಈ ನಿಟ್ಟಿನಲ್ಲಿ, ಸೋನಿ ಮ್ಯೂಸಿಕ್ ಇಂಡಿಯಾ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಗುಲ್ಝಾರ್ ಮತ್ತು ಆಸ್ಕರ್ ವಿಜೇತ ಸಂಗೀತಗಾರ ಎ.ಆರ್‌ ರೆಹಮಾನ್ ಸಮಾಗಮದಲ್ಲಿ 'ಮೇರಿ ಪುಕಾರ್ ಸುನೋ' ಎಂಬ ಶೀರ್ಷಿಕೆ ಗೀತೆ ರಚನೆಯಾಗಿದೆ.

    ಸೋನಿ ಮ್ಯೂಸಿಕ್ ಇಂಡಿಯಾ ಅನಾವರಣಗೊಳಿಸಿದ ಈ ಹಾಡು, ದಿಲ್ ಸೇ, ಗುರು, ಸ್ಲಮ್‌ಡಾಗ್‌ ಮಿಲಿಯನೇರ್, ಸಾಥಿಯಾ ಮತ್ತು ಓಕೆ ಜಾನು ರೀತಿಯ ಸ್ಮರಿಸಿಕೊಳ್ಳಬಹುದಾದ ಸಂಯೋಜನೆಯನ್ನು ಮತ್ತೆ ನೆನಪಿಸುವಂತಿದೆ.

    ಕಲಾವಿದರಿಗೆ ನೆರವಾಗಲು 'ಕಲಾನಿಧಿ' ಕಾರ್ಯಕ್ರಮ, ದಿಗ್ಗಜರಿಂದ ಗಾಯನಕಲಾವಿದರಿಗೆ ನೆರವಾಗಲು 'ಕಲಾನಿಧಿ' ಕಾರ್ಯಕ್ರಮ, ದಿಗ್ಗಜರಿಂದ ಗಾಯನ

    'ಮೇರಿ ಪುಕಾರ್ ಸುನೋ' ಹಾಡು ಭಾರತೀಯ ಸಂಗೀತ ಲೋಕದ ಕೆಲವು ಪ್ರಮುಖ ಸಂಗೀತಗಾರರನ್ನು ಒಟ್ಟಾಗಿಸಿದೆ. ಅಲ್ಲದೆ, ಜನಪ್ರಿಯ ಗಾಯಕರಾದ ಅಲ್ಕಾ ಯಾಗ್ನಿಕ್, ಶ್ರೇಯಾ ಘೋಷಾಲ್, ಕೆ ಎಸ್‌ ಚಿತ್ರಾ, ಸಾಧನಾ ಸರ್ಗಮ್, ಶಶಾ ತಿರುಪತಿ, ಅರ್ಮಾನ್ ಮಲಿಕ್ ಮತ್ತು ಆಸೀಸ್ ಕೌರ್ ಇದರಲ್ಲಿ ಕೈ ಜೋಡಿಸಿದ್ದಾರೆ. ಸಪ್ತಸ್ವರಗಳ ಹಾಗೆಯೇ, ಈ ವಿಶಿಷ್ಟ ಸಂಯೋಜನೆಯು ತಲೆಮಾರುಗಳು ಮತ್ತು ಸಂಸ್ಕೃತಿಗಳಾದ್ಯಂತ ಏಕತೆಯ ಪ್ರತೀಕವಾಗಿದೆ.

    AR Rahman and Gulzars Anthem Meri Pukaar Suno song released

    ಹಾಡಿನ ನಿರ್ದೇಶನ ಮತ್ತು ಸಂಗೀತ ಸಂಯೋಜನೆಯ ಬಗ್ಗೆ ಮಾತನಾಡಿದ ಸಂಗೀತಗಾರ ಎ.ಆರ್.ರೆಹಮಾನ್, "ಈ ಸಾಂಕ್ರಾಮಿಕ ರೋಗದ ಸಮಯವು, ಎಲ್ಲರ ಜೀವನದಲ್ಲಿ ಅತ್ಯಂತ ಸಂಕಷ್ಟದ ಸಮಯ. ಎಲ್ಲೆಡೆ ಅನಿಶ್ಚಿತತೆ ಮತ್ತು ನೋವು ಇದೆ. ಆದರೂ, ತುಂಬಾ ಸಹಿಷ್ಣುತೆ ಮತ್ತು ಶಮನವೂ ಇದೆ. ಭರವಸೆಯ ಹಾಡೊಂದನ್ನು ರೂಪಿಸಲು ಗುಲ್ಝಾರ್ ಮತ್ತು ನಾನು ಬಯಸಿದ್ದೇವೆ. ಯಾಕೆಂದರೆ, ನಮಗೆಲ್ಲರಿಗೂ ಅನುಕೂಲ ಮತ್ತು ಭರವಸೆ ಅಗತ್ಯವಿದೆ. 'ಮೇರಿ ಪುಕಾರ್‌ ಸುನೋ' ಎಂಬುದು ತನ್ನ ಮಕ್ಕಳ ಮೂಲಕ ಮಕ್ಕಳಿಗೆ ಹಾಡುವಂಥ ಹಾಡಾಗಿದೆ. ಮನುಷ್ಯರು ಹಲವು ಕಾಲಗಳನ್ನು ದಾಟಿಯೂ ಬದುಕುಳಿದಿದ್ದಾರೆ ಮತ್ತು ಈ ಸಂಕಷ್ಟವನ್ನೂ ಅವರು ಎದುರಿಸಿ ನಿಲ್ಲಲಿದ್ದಾರೆ ಎಂಬುದನ್ನು ಇದು ಹೇಳುತ್ತದೆ'' ಎಂದಿದ್ದಾರೆ.

    ಆಂಥೆಮ್‌ನ ಮೂಲ ಧ್ಯೇಯದ ಬಗ್ಗೆ ಮಾತನಾಡಿದ ಗುಲ್ಝಾರ್‌, "ಇದು ಭೂತಾಯಿಯ ಕಥೆ. ತನ್ನ ಮಾತು ಕೇಳಿ ಎಂದು ಆಕೆ ನಮಗೆ ಮನವಿ ಮಾಡಿಕೊಳ್ಳುತ್ತಾಳೆ. ಅಪಾರ ಸಂಪತ್ತು, ತಂಗಾಳಿ, ಹರಿವ ನದಿಗಳು ಮತ್ತು ಅನವರತ ಬೆಳಕಿನಿಂದ ಆಕೆ ನಮಗೆ ಭರವಸೆಯನ್ನು ನೀಡುತ್ತಾಳೆ. ನಮಗೆ ಜೀವನ ಎಂಬ ಉಡುಗೊರೆಯನ್ನು ಕಾಯ್ದುಕೊಳ್ಳುವ ಭರವಸೆಯನ್ನೂ ನಮಗೆ ಇದು ನೀಡುತ್ತದೆ. ರೆಹಮಾನ್ ನನ್ನ ಶಬ್ದಗಳಿಗೆ ನಿಜಕ್ಕೂ ಅದ್ಭುತ ಸಂಯೋಜನೆಯನ್ನು ಮಾಡಿದ್ದಾರೆ." ಎಂದು ಸಂತಸ ಹಂಚಿಕೊಂಡಿದ್ದಾರೆ.

    ಸೋನಿ ಮ್ಯೂಸಿಕ್ ಇಂಡಿಯಾದ ಭಾರತೀಯ ವ್ಯವಸ್ಥಾಪಕ ನಿರ್ದೇಶಕ ರಜತ್ ಕಕ್ಕರ್‌, ಹೇಳುವಂತೆ "ಸೋನಿ ಮ್ಯೂಸಿಕ್ ಇಂಡಿಯಾ ನಮ್ಮ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಂಗೀತ ಮತ್ತು ಸ್ಫೂರ್ತಿದಾಯಕ ಶಬ್ದಗಳ ಮೂಲಕ ಶ್ರೋತೃಗಳ ಮನದುಂಬಿಸಲು ಬಯಸುತ್ತದೆ. ಎ.ಆರ್‌.ರೆಹಮಾನ್ ಮತ್ತು ಗುಲ್ಝಾರ್ ಸಾಹಬ್‌ರಂತಹ ದೈತ್ಯರು ರಚಿಸಿ ಸಂಗೀತ ಸಂಯೋಜಿಸಿದ ಮೇರಿ ಪುಕಾರ್‌ ಸುನೋ, ಸ್ಫೂರ್ತಿದಾಯಕ ಹಾಡಾಗಿದ್ದು, ಇದು ಎಲ್ಲರನ್ನೂ ಭವಿಷ್ಯದ ಕಡೆಗೆ ಭರವಸೆ ಹೊಂದಿರಿ ಎಂಬುದಕ್ಕಾಗಿ ಸ್ಫೂರ್ತಿ ನೀಡುತ್ತದೆ.

    ಈ ಸಂಗೀತವು ಸ್ಫೂರ್ತಿಯನ್ನು ಹುಡುಕುತ್ತಿರುವ ಒಬ್ಬ ಮಗುವಿನ ದೃಷ್ಟಿಕೋನವನ್ನು ಹೊಂದಿದೆ. ಅತ್ಯದ್ಭುತ ಧ್ವನಿಗಳು ಈ ಹಾಡಿಗೆ ಧ್ವನಿಯಾಗಿದ್ದು, ಭರವಸೆ ಮತ್ತು ಸಮಗ್ರತೆಗೆ ಸ್ಫೂರ್ತಿಯ ಕ್ಷಣವನ್ನಾಗಿ ಇದು ರೂಪಿಸಿದೆ. ಅತ್ಯದ್ಭುತ ಮತ್ತು ಸಕಾಲಿಕ ವೀಡಿಯೋ ಗುಚ್ಛ ಇದಾಗಿದ್ದು, ಎಲ್ಲ ಸಂಕಷ್ಟದ ಸಮಯವನ್ನೂ ಸಹಿಸಿಕೊಳ್ಳುವುದಕ್ಕೆ ಸ್ಫೂರ್ತಿಯಾಗಿದೆ. ಈ ದೃಶ್ಯಗಳನ್ನು ದೇಶದ ವಿವಿಧ ಭಾಗಗಳಲ್ಲಿ ಪ್ರತ್ಯೇಕವಾಗಿ ಸೆರೆಹಿಡಿದಿದ್ದರೂ, ವೀಕ್ಷಕರಿಗೆ ಮನೋಹರವಾದ ಭಾವವನ್ನು ನೀಡುತ್ತದೆ.

    ಈ ಹಾಡಿನ 50% ಗಳಿಕೆಯನ್ನು, ದೇಶದ ಪ್ರಮುಖ ದತ್ತಿ ಸಂಸ್ಥೆಗಳ ನೆರವಿನಲ್ಲಿ ದೇಶದ ಕೋವಿಡ್ ಪರಿಹಾರಕ್ಕೆ ಮೀಸಲಿಡಲಿದೆ. ಹಾಡು ಈಗಾಗಲೇ ಎಲ್ಲ ಮಾಧ್ಯಮಗಳಲ್ಲೂ ಲಭ್ಯವಿದೆ.
    https://SMI.lnk.to/MeriPukaarSuno

    English summary
    Legendary Musicians AR Rahman and Gulzar creates ‘Meri Pukar Suno’ Anthem song.
    Saturday, June 26, 2021, 9:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X