For Quick Alerts
  ALLOW NOTIFICATIONS  
  For Daily Alerts

  ಬಳ್ಳಾರಿ ಪೊಲೀಸರ ಕುಣಿಸಿದ ಅರ್ಜುನ್ ಜನ್ಯ!

  By ಫಿಲ್ಮಿಬೀಟ್ ಡೆಸ್ಕ್
  |

  ಬಳ್ಳಾರಿ ನಗರದ ಮುನಿಸಿಪಲ್ ಮೈದಾನದಲ್ಲಿ ಶನಿವಾರ ಮಧ್ಯರಾತ್ರಿ ಜರುಗಿದ ಬಳ್ಳಾರಿ ಜಿಲ್ಲಾ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತವರ ತಂಡ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

  ಈ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾದ ವಿಲನ್ ಚಿತ್ರದ ಟಿಕ್ ಟಿಕ್ ಟಿಕ್ ಟಿಕ್ ಎಂಬ ಹಾಡಿಗೆ ಐಎಎಸ್, ಕೆಎಎಸ್ ಹಾಗೂ ಹಿರಿಯ ಪೋಲಿಸ್ ಅಧಿಕಾರಿಗಳು ಸ್ಟೆಪ್ ಹಾಕಿ ಕುಣಿದ ಅಪರೂಪದ ಘಟನೆಗೆ ಅಲ್ಲಿ ನೆರೆದಿದ್ದ ಜನಸ್ತೋಮ ಸಾಕ್ಷಿಯಾಯಿತು.

  ಟಿಕ್. ಟಿಕ್. ಟಿಕ್. ಟಿಕ್ ರಾವಣ.. ಎಂಬ ಜನಪ್ರಿಯ ಹಾಡಿಗೆ ಬಳ್ಳಾರಿ ಜಿಲ್ಲಾ ಉತ್ಸವದ ಉಸ್ತುವಾರಿ ಹೊತ್ತಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳಾದ ಪಾಲಿಕೆ ಆಯುಕ್ತ ರುದ್ರೇಶ್, ಸಹಾಯಕ ಆಯುಕ್ತ ಹೇಮಂತ, ಎಎಸ್ಪಿ ನಟರಾಜ್, ತಹಶೀಲ್ದಾರ್ ವಿಶ್ವನಾಥ್, ಎಡಿಸಿ ಮಂಜುನಾಥ್ ಅವರನ್ನೊಳಗೊಂಡಂತೆ ವಿವಿಧ ಅಧಿಕಾರಿಗಳು ಕುಣಿದು ಕುಪ್ಪಳಿಸಿ ನೋಡುಗರ ಸೋಜಿಗಕ್ಕೆ ಪಾತ್ರರಾದರು.

  ಪಾಲಿಕೆ ಆಯುಕ್ತ ತಾವು ತೊಟ್ಟಿದ್ದ ಕೋಟನ್ನು ಬಿಚ್ಚಿ ಸ್ಟೇಜ್ ಮೇಲೆಯೇ ಗಾಳಿಯಲ್ಲಿ ತಿರುಗಿಸಿ ಕುಣಿದರು.

  ಅರ್ಜುನ್ ಜನ್ಯ ರವರು ತಮ್ಮ ರಸಮಂಜರಿ ಕಾರ್ಯಕ್ರಮದಲ್ಲಿ ಸಚಿವ ಶ್ರೀರಾಮುಲು ಅವರನ್ನು ಕೂಡಾ ಮುಖ್ಯ ವೇದಿಕೆ ಮೇಲೆ ಕರೆತಂದು ಒಂದೆರೆಡು ಹೆಜ್ಜೆ ಹಾಕುವ ಹಾಗೇ ಮಾಡಿ, ತಾವು ಕೂಡಾ ಅವರೊಂದಿಗೆ ಹೆಜ್ಜೆ ಕೂಡಿಸಿದರು.

  ಬಳ್ಳಾರಿ ವಿಭಜನೆಯಾದ ಬಳಿಕ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಬಳ್ಳಾರಿ ಉತ್ಸವದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಅವರ ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

  ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸಿನಿಮಾದ ಟೈಟಲ್ ಸಾಂಗ್ ಹಾಡಿದ ಅರ್ಜನ್ ಜನ್ಯ ರವರು ಗಾಯನದ ಮಧ್ಯದಲ್ಲೇ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಸಚಿವ ಶ್ರೀರಾಮುಲುರವರನ್ನು ಕೈಹಿಡಿದು ವೇದಿಕೆಗೆ ಕರೆತಂದ ಅರ್ಜುನ್ ಜನ್ಯ ಅವರು, ತಾವು ನೃತ್ಯ ಮಾಡುವದರ ಜೊತೆಗೆ ಶ್ರೀರಾಮುಲುರವರನ್ನು ಕಾಲು ಕುಣಿಸುವಂತೆ ಮಾಡಿ ನೋಡಿಗರ ಗಮನ ಸೆಳೆದರು.

  ಇದೇ ಕಾರ್ಯಕ್ರಮದಲ್ಲಿ ಬಳ್ಳಾರಿ ನಗರ ಶಾಸಕರಾದ ಸೋಮಶೇಖರ ರೆಡ್ಡಿರವರು ಕೂಡಾ ನೃತ್ಯ ಮಾಡಿ ನೆರೆದಿದ್ದ ವೀಕ್ಷಕರ ಸಂತೋಷದಲ್ಲಿ ಭಾಗಿಯಾದರು. ಅರ್ಜುನ್ ಜನ್ಯ ಹಾಗೂ ಸಹಗಾಯಕರು ಹಾಡಿದ ರಾಬರ್ಟ್ ಸಿನಿಮಾದ ಸ್ನೇಹದ ಮಹತ್ವ ಸಾರುವ ಹಾಡು ಬ್ರದರ್ ಫ್ರಂ ಅನದರ್ ಮದರ್ ಹಾಡಿಗೆ ಸ್ಟೆಪ್ ಹಾಕಿದರು.

  English summary
  Music director Arjun Janya performs live music at Ballari uthsava. Ballari people enjoyed Arjun Janya's music and danced to the tunes
  Monday, January 23, 2023, 20:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X