For Quick Alerts
  ALLOW NOTIFICATIONS  
  For Daily Alerts

  ಆಡಿಯೋ ವಿಮರ್ಶೆ: ಹಾಡುಗಳ ವರ್ಷಧಾರೆ 'ಮುಂಗಾರು ಮಳೆ'

  By Suneetha
  |

  'ಮುಂಗಾರು ಮಳೆ' ಎಂದಾಕ್ಷಣ ತಟ್ಟನೆ ಎಲ್ಲರಿಗೂ ನೆನಪಿಗೆ ಬರೋದು ಚಿತ್ರದ ಹಾಡುಗಳು. ಅಂದು ಯೋಗರಾಜ್ ಭಟ್ಟರು ಹಾಡುಗಳ ಮೂಲಕಾನೇ ಇಡೀ ಸಿನಿ ಪ್ರಿಯರನ್ನು ತಮ್ಮತ್ತ ತಿರುಗಿ ನೋಡುವಂತೆ ಮಾಡಿದರು. ಅಲ್ಲದೇ 'ಮುಂಗಾರು ಮಳೆ' ಹಾಡುಗಳನ್ನು ಕೇಳ್ತಾ-ಕೇಳ್ತಾ ಅದೆಷ್ಟೋ ಪ್ರೇಮಿಗಳು ತಮ್ಮಲ್ಲೇ ಕಳೆದು ಹೋಗಿದ್ದರು.

  ಇದೀಗ 'ಆ' ಹಳೇ ಇತಿಹಾಸ ಮತ್ತೆ ಮರುಕಳಿಸಿದಂತಾಗಿದೆ. 'ಮುಂಗಾರು ಮಳೆ 2' ಚಿತ್ರದ ಆಡಿಯೋ ರಿಲೀಸ್ ಆಗಿದ್ದು, ಹಾಡುಗಳು ಒಂದಕ್ಕಿಂತ ಒಂದು ಸೂಪರ್ ಹಿಟ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

  ಭಯಂಕರ ಘಟಾನುಘಟಿಗಳೇ ಹಾಡಿರುವ 'ಮುಂಗಾರು ಮಳೆ 2' ಚಿತ್ರದ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮ್ಯೂಸಿಕ್ ಪ್ರಿಯರು ಹಾಗೂ ಅಭಿಮಾನಿಗಳು ಹಾಡನ್ನು ಯದ್ವಾ-ತದ್ವಾ ಹೊಗಳುತ್ತಿದ್ದಾರೆ.[ಆಡಿಯೋ ರಿಲೀಸ್ ಗೂ ಮುನ್ನ 'ಮಳೆ 2' ಹಾಡುಗಳು ಲೀಕ್.!]

  'ಬಚ್ಚನ್', 'ಕೃಷ್ಣ ಲೀಲಾ' ಚಿತ್ರದ ಖ್ಯಾತಿಯ ನಿರ್ದೇಶಕ ಶಶಾಂಕ್ ಅವರು ನಿರ್ದೇಶನ ಮಾಡಿರುವ 'ಮುಂಗಾರು ಮಳೆ 2' ಚಿತ್ರ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.

  ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರ ತಂದೆಯ ಪಾತ್ರ ವಹಿಸಿದ್ದಾರೆ. ಕುಡ್ಲದ ಬೆಡಗಿ ನೇಹಾ ಶೆಟ್ಟಿ ಗಣಿ ಜೊತೆ ಡ್ಯುಯೆಟ್ ಹಾಡಿದ್ದು, ಇನ್ನೂ ಮೂವರು ನಟಿಯರು ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ.[ಸೆಪ್ಟೆಂಬರ್ ನಲ್ಲಿ 'ಮುಂಗಾರು ಮಳೆ 2' ಆರ್ಭಟ ಆರಂಭ.?]

  ಅಂದಹಾಗೆ ಈ ಇಡೀ ಸಿನಿಮಾದಲ್ಲಿ ಇವರೆಲ್ಲಾ ಎಷ್ಟು ಮುಖ್ಯ ಪಾತ್ರ ವಹಿಸಿದ್ದಾರೋ, ಅಷ್ಟೇ ಪ್ರಮುಖ ಪಾತ್ರವನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಕೂಡ ವಹಿಸಿದ್ದಾರೆ. ಪ್ರತಿಯೊಂದು ಹಾಡಿಗೂ ಹದವಾಗಿ ಮ್ಯೂಸಿಕ್ ಕಂಪೋಸ್ ಮಾಡಿರುವ ಜನ್ಯ ಗರಡಿಯಲ್ಲಿ ಪಳಗಿದ ಮಳೆ ಹಾಡುಗಳು ಸೂಪರ್. ಚಿತ್ರದ ಆಡಿಯೋ ವಿಮರ್ಶೆಗಾಗಿ ಸ್ಲೈಡ್ಸ್ ಕ್ಲಿಕ್ಕಿಸಿ.....

  'ಸರಿಯಾಗಿ ನೆನಪಿದೆ ನನಗೆ'

  'ಸರಿಯಾಗಿ ನೆನಪಿದೆ ನನಗೆ'

  ಗಾಯಕ: ಅರ್ಮಾನ್ ಮಲ್ಲಿಕ್

  ಹಲವಾರು ಹಿಂದಿ ಸಿನಿಮಾಗಳನ್ನು ಹಾಡಿ ಹಿಟ್ ಗಾಯಕ ಎನಿಸಿಕೊಂಡಿರುವ ಅರ್ಮಾನ್ ಮಲ್ಲಿಕ್ ಹಾಡಿರುವ 'ಸರಿಯಾಗಿ ನೆನಪಿದೆ ನನಗೆ...ಇದಕ್ಕೆಲ್ಲಾ ಕಾರಣ ಕಿರುನಗೆ' ಹಾಡು ಖಂಡಿತ ನಿಮ್ಮನ್ನು ಪ್ರೀತಿಯಲ್ಲಿ ಕೆಡವುತ್ತದೆ. ಒಂಥರಾ ಫ್ರೆಶ್ ಎನಿಸುವ ಧ್ವನಿಯನ್ನು ಮತ್ತೆ-ಮತ್ತೆ ಕೇಳಬೇಕೆನಿಸುತ್ತದೆ. ಈ ಧ್ವನಿಗೆ ತಕ್ಕಂತೆ ಗೀತರಚನೆಕಾರ ಜಯಂತ್ ಕಾಯ್ಕಿಣಿ ಅವರು ಸಾಹಿತ್ಯ ಬರೆದಿದ್ದಾರೆ. ತುಂಬಾ ಮೆಲೋಡಿ ಹಾಡಿಗೆ ಅರ್ಜುನ್ ಜನ್ಯ ಅವರು ಅಷ್ಟೇ ಚೊಕ್ಕದಾಗಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.['ಮುಂಗಾರು ಮಳೆ 2' ನಲ್ಲಿ ಗಣಿಗೆ ಎಷ್ಟು ಜನ ನಾಯಕಿಯರು.?]

  'ನೀನು ಇರದೆ'

  'ನೀನು ಇರದೆ'

  ಗಾಯಕರು: ಅರ್ಮಾನ್ ಮಲ್ಲಿಕ್ ಮತ್ತು ಅನುರಾಧ ಭಟ್

  'ನೀ ಎದೆಯೊಳಗೆ ಬಂದ ಮೇಲೆ ಹೃದಯಾ...... ಕನಸುಗಳಾ ಪಾಕಶಾಲೆ...' ಎಂಬ ರೋಮ್ಯಾಂಟಿಕ್, ಡ್ಯುಯೆಟ್ ಹಾಡನ್ನು ಗಾಯಕರಾದ ಅರ್ಮಾನ್ ಮಲ್ಲಿಕ್ ಮತ್ತು ಅನುರಾಧ ಭಟ್ ಚೊಕ್ಕವಾಗಿ ಹಾಡಿದ್ದಾರೆ. ಹೆಚ್ಚು ಕಿರಿ-ಕಿರಿ ಎನಿಸಿದ ಇಬ್ಬರ ಧ್ವನಿಯೂ ಕೇಳುಗರ ಮನಸ್ಸಿಗೆ ಹಿತವೆನಿಸುತ್ತದೆ. ಸಾಹಿತ್ಯ ಬರಹಗಾರ ಕವಿರಾಜ್ ಬರೆದಿರುವ ಸಾಹಿತ್ಯ ಮ್ಯೂಸಿಕ್ ಮತ್ತು ಧ್ವನಿ ಎರಡಕ್ಕೂ ಮ್ಯಾಚ್ ಆಗುವಂತಿದೆ.

  'ಕನಸಲು'

  'ಕನಸಲು'

  ಗಾಯಕಿ: ಶ್ರೇಯಾ ಘೋಷಾಲ್

  ರೋಮ್ಯಾಂಟಿಕ್ ಹಾಗೂ ತುಂಟ ಸ್ವರದ ಗಾಯಕಿ ಶ್ರೇಯಾ ಘೋಷಾಲ್ ಹಾಡಿರುವ 'ಕನಸಲೂ ನೂರು ಬಾರಿ..ಕರೆಯುವೆ ನಿನ್ನೇ ನಾನು..' ಎಂಬ ಹಾಡು ಪ್ರೇಮಿಗಳನ್ನು ಎತ್ತಲೋ ಕೊಂಡೊಯ್ಯುವಂತಿದೆ. ಚಿತ್ರದ ನಿರ್ದೇಶನ ಶಶಾಂಕ್ ಅವರೇ ಸಾಹಿತ್ಯ ಬರೆದಿರುವ ಈ ಹಾಡಿನಲ್ಲಿ ಜನ್ಯ ಅವರ ಮ್ಯೂಸಿಕ್ ಕೂಡ ಹದವಾಗಿ ಬೆರೆತಿದೆ.

  'ಒಂಟೆ ಸಾಂಗ್'

  'ಒಂಟೆ ಸಾಂಗ್'

  ಗಾಯಕರು: ಅರ್ಮಾನ್ ಮಲ್ಲಿಕ್, ಸ್ವರೂಪ್ ಖಾನ್, ಶ್ರೇಯಾ ಘೋಷಾಲ್

  ಮರುಭೂಮಿಯಲ್ಲಿ ಚಿತ್ರೀಕರಣ ನಡೆಸಿರುವ 'ಒಂಟೆ ಸಾಂಗ್' ಸಖತ್ ಚೆನ್ನಾಗಿದ್ದು, ಒಳ್ಳೆ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡಲು ಸೂಕ್ತವಾಗುವ ಹಾಡು. ಸ್ವರೂಪ್ ಖಾನ್ ಪಂಜಾಬಿ ಶೈಲಿಯಲ್ಲಿ, ಅರ್ಮಾನ್ ಮತ್ತು ಶ್ರೇಯಾ ಘೋಷಾಲ್ ಜುಗಲ್ ಬಂದಿಯಲ್ಲಿ 'ಒಂಟೆ ಸಾಂಗ್' ಅಚ್ಚುಕಟ್ಟಾಗಿ ಮೂಡಿಬಂದಿದೆ. ಗೋಪಿ ಐಯ್ಯಂಗಾರ್ ಹಾಗೂ ಡಾ.ಉಮೇಶ್ ಪಿಲಿಕುಡೇಲು ಬರೆದಿರುವ ಸಾಹಿತ್ಯ ಮತ್ತು ಅರ್ಜುನ್ ಜನ್ಯ ಅವರ ಮ್ಯೂಸಿಕ್ ಎರಡೂ ಚಿಂದಿ ಉಡಾಯಿಸಿದೆ.

  'ಗಮನಿಸು'

  'ಗಮನಿಸು'

  ಗಾಯಕ: ಸೋನು ನಿಗಮ್

  ರೋಮ್ಯಾಂಟಿಕ್ ಹಾಡುಗಳ ರಾಜ ಅಂತಾನೇ ಫೇಮಸ್ ಆಗಿರುವ ಗಾಯಕ ಸೋನು ನಿಗಮ್ ಅವರ ಧ್ವನಿಯಲ್ಲಿ 'ಗಮನಿಸು ಒಮ್ಮೆ ನೀನು..ಬಯಸಿಹೇ ನಿನ್ನ ನಾನು...' ಎಂಬ ಹಾಡಿಗೂ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಎರಡೂ, ಬ್ರೆಡ್ ಗೆ ಜಾಮ್ ಹಾಕಿದಂತಾಗಿದೆ. ಈ ಬ್ರೆಡ್ ಜಾಮ್ ಗೆ ಅರ್ಜುನ್ ಜನ್ಯ ಅವರು ಮ್ಯೂಸಿಕ್ ಅನ್ನು ಹದವಾಗಿ ಮೆತ್ತಿದ್ದಾರೆ. ಸದಾ ಹೃದಯಲ್ಲಿ ಉಳಿಯುವ ಹಾಡು ಗಮನಿಸು ಒಮ್ಮೆ ನೀನು...

  'ಮೈ ಡ್ಯಾಡಿ'

  'ಮೈ ಡ್ಯಾಡಿ'

  ಗಾಯಕರು: Rap King ಚಂದನ್ ಶೆಟ್ಟಿ, ಬೆನ್ನಿ ದಯಾಲ್

  Rap King ಚಂದನ್ ಶೆಟ್ಟಿ ಮತ್ತು ಬೆನ್ನಿ ದಯಾಲ್ ಹಾಡಿರುವ 'ಅಪ್ಪ ಇಲ್ಲದೆ ನಾನಿಲ್ಲ..ನಮ್ಮಪ್ಪ ಇಲ್ಲದೆ ಏನಿಲ್ಲ...' ಅನ್ನೋ Rap ಸಾಂಗ್ ಗೆ ಚಂದನ್ ಶೆಟ್ಟಿ ಅವರೇ ಸಾಹಿತ್ಯ ಬರೆದಿದ್ದಾರೆ. ಧಮಾಕೇದಾರ್ ಮ್ಯೂಸಿಕ್ ನಲ್ಲಿ ಗಣೇಶ್ ಮತ್ತು ರವಿಚಂದ್ರನ್ ಸಖತ್ ಆಗಿ ಮಿಂಚಿದ್ದಾರೆ. 'ರಣಧೀರ' ಚಿತ್ರದ ಕೊಳಲು ಮ್ಯೂಸಿಕ್ ಅನ್ನು ಜನ್ಯ ಅವರು ಮತ್ತೆ ಈ ಹಾಡಿನಲ್ಲಿ ಬಳಸಿಕೊಂಡಿರೋದು ಇನ್ನೊಂದು ವಿಶೇಷ.

  ಹಾಡು ಕೇಳಿ ಕಳೆದು ಹೋಗಿ

  ಹಾಡು ಕೇಳಿ ಕಳೆದು ಹೋಗಿ

  ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನೇಹಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಮುಂಗಾರು ಮಳೆ 2' ಚಿತ್ರದ ಎಲ್ಲಾ ಆಡಿಯೋ ಸಾಂಗ್ ಗಳನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ....ಹಾಡು ಕೇಳಿ-ಕೇಳಿಸಿ ಎಂಜಾಯ್ ಮಾಡಿ....

  English summary
  Audio Review of Kannada actor Ganesh, Kannada Actress Neha Shetty starrer 'Mungaru Male 2'. The movie is directed by Shashank and Music composed by noted Musician Arjun Janya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X