»   » ಧ್ವನಿ ಸಾಂದ್ರಿಕೆ ವಿಮರ್ಶೆ: ಮಸ್ತ್ ಹಾಡುಗಳ ಗುಚ್ಛ 'ಕೃಷ್ಣಲೀಲಾ'

ಧ್ವನಿ ಸಾಂದ್ರಿಕೆ ವಿಮರ್ಶೆ: ಮಸ್ತ್ ಹಾಡುಗಳ ಗುಚ್ಛ 'ಕೃಷ್ಣಲೀಲಾ'

Posted By:
Subscribe to Filmibeat Kannada

'ಸ್ಯಾಂಡಲ್ ವುಡ್ ಕೃಷ್ಣ' ಅಜೇಯ್ ರಾವ್, ಲೀಲಾ ಹಿಂದೆ ಬಿದ್ದಿರುವ ಸುದ್ದಿ ಹಳೆಯದ್ದೆ. ನಾಯಕನಾಗಿದ್ದ ಅಜೇಯ್ ರಾವ್, ನಿರ್ಮಾಪಕನಾಗಿ ಬಡ್ತಿ ಪೆಡೆದಿರುವುದು ಇದೇ 'ಕೃಷ್ಣಲೀಲಾ' ಚಿತ್ರದ ಮೂಲಕ.

ಧಾರಾವಾಹಿಯಲ್ಲಿ ಬಹು ಜನಪ್ರಿಯತೆ ಗಳಿಸಿರುವ ಚೆಲುವೆ ಮಯೂರಿ ಬೆಳ್ಳಿತೆರೆ ಮೇಲೆ ಪದಾರ್ಪಣೆ ಮಾಡುತ್ತಿರುವುದು ಈ ಚಿತ್ರದಿಂದಲೇ. ನೈಜಕಥೆಯನ್ನ ಆಧರಿಸಿ 'ಕೃಷ್ಣಲೀಲಾ' ಚಿತ್ರವನ್ನು ಬೆಳ್ಳಿಪರದೆ ಮೇಲೆ ತರುತ್ತಿರುವುದು ನಿರ್ದೇಶಕ ಶಶಾಂಕ್. [ನಿರ್ಮಾಪಕ ಅಜೇಯ್ ರಾವ್ ಜೇಬು ಖಾಲಿ ಖಾಲಿ!]

ಇಷ್ಟೆಲ್ಲಾ ವಿಶೇಷತೆಗಳಿರುವ 'ಕೃಷ್ಣಲೀಲಾ' ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಶ್ರೀಧರ್.ವಿ.ಸಂಭ್ರಮ್ ಸಂಗೀತ ಸಂಯೋಜಿಸಿರುವ 'ಕೃಷ್ಣಲೀಲಾ' ಆಡಿಯೋ ಮೊನ್ನೆಯಷ್ಟೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕ್ಲಾಸ್ ಮತ್ತು ಮಾಸ್ ಸೇರಿದಂತೆ ಎಲ್ಲಾ ವರ್ಗದ ಪ್ರೇಕ್ಷಕರನ್ನ ಫಿದಾ ಮಾಡಿರುವ 'ಕೃಷ್ಣಲೀಲಾ' ಹಾಡುಗಳು ಹೇಗಿವೆ. ಅದರ ರಿಪೋರ್ಟ್ ಇಲ್ಲಿದೆ....ಮುಂದೆ ಓದಿ...[ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಹಾಡಿರುವವರು : ಉಪೇಂದ್ರ

ಸಾಹಿತ್ಯ : ಶಶಾಂಕ್
''ಫೋನ್ ಅಮ್ಮಂಗು, ಸಿಮ್ ಅಪ್ಪಂಗೂ ಹುಟ್ಟಿದ ಮಕ್ಕಳು ಇವರೇನೇ ಕಾಮನ್ ಕೃಷ್ಣಲೀಲಾ'' ಅಂತ ಶಶಾಂಕ್ ಬರೆದಿರುವ ಕ್ಯಾಚಿ ಲಿರಿಕ್ಸ್ ಗೆ ರಿಯಲ್ ಸ್ಟಾರ್ ಉಪೇಂದ್ರ ದನಿಯಾಗಿದ್ದಾರೆ. 'ಕೃಷ್ಣಲೀಲಾ' ಚಿತ್ರದ ಮುಖ್ಯ ಪಾತ್ರಗಳ ಕಥಾನಕ ಹೇಳುವ ಈ ಹಾಡು, ಕೇಳೋಕೆ ಮಜವಾಗಿರುವುದಕ್ಕೆ ಕಾರಣ ರಿಯಲ್ ಸ್ಟಾರ್ ಉಪ್ಪಿ ವಾಯ್ಸ್. ಶೃತಿ, ರಾಗ, ತಾಳ ಎಲ್ಲವನ್ನೂ ಪಕ್ಕಕ್ಕಿಟ್ಟು, ಮಾಸ್ ಪ್ರೇಕ್ಷಕರಿಗಾಗೇ ಸಿದ್ಧ ಮಾಡಿರುವ ಈ ಹಾಡು, ಪಡ್ಡೆಗಳ ಸುಪ್ರಭಾತವಾಗುವುದರಲ್ಲಿ ಅನುಮಾನವಿಲ್ಲ.

ಹಾಡಿರುವವರು : ಶಶಾಂಕ್ ಶೇಷಗಿರಿ

ಸಾಹಿತ್ಯ : ಶಿವ ತೇಜಸ್ವಿ
'ಕೃಷ್ಣಲೀಲಾ' ಆಲ್ಬಂ ನಲ್ಲಿರುವ ಸ್ಪೆಷಲ್ ಹಾಡು ಅಂದ್ರೆ ಇದೆ. 'ಮಾತಾಡ್ರೋ...ಮಾತಾಡ್ರೀ...' ಅನ್ನುವ ಲೋಕಲ್ ಲಿರಿಕ್ಸ್ ಗೆ ಟ್ರೆಡಿಷನಲ್ ಟಚ್ ಕೊಟ್ಟು ಶ್ರೀಧರ್ ಮಾಡಿರುವ ಪ್ರಯೋಗ ಯಶಸ್ವಿಯಾಗಿದೆ. ಇನ್ನೂ, ಒಂದೇ ಉಸಿರಲ್ಲಿ ಹಾಡಿರುವ ಶಶಾಂಕ್ ಶೇಷಗಿರಿ ಗಾಯನ ಗಮನ ಸೆಳೆಯುವಂತಿದೆ. ಪ್ರೀತಿಯ ನಶೆಯಲ್ಲಿ ತೇಲುತ್ತಿರುವವರಿಗೆ 'ಮಾತೇ ಮಾಣಿಕ್ಯ' ಅನ್ನುವ ಹಳೇ ವೇದಾಂತವನ್ನು ಶಿವ ತೇಜಸ್ವಿ ಕಲರ್ ಫುಲ್ ಆಗಿ ಬರೆದಿರುವ ಸಾಹಿತ್ಯ ಎಲ್ಲರಿಗೂ ಕಿಕ್ ಕೊಡುತ್ತೆ.

ಹಾಡಿರುವವರು : ನವೀನ್ ಸಜ್ಜು

ಸಾಹಿತ್ಯ : ಶ್ರೀ ಹರ್ಷ
ಎಣ್ಣೆ ಪ್ರಿಯರಿಗೆ 'ಕೃಷ್ಣಲೀಲಾ' ಆಲ್ಬಂ ನಲ್ಲಿ ಸಖತ್ ಇಷ್ಟವಾಗುವ ಹಾಡು 'ಮುಟ್ಲಿಲ್ಲ...ಮುರಿಲಿಲ್ಲ...' ಲವ್ ಫೇಲ್ಯೂರ್ ಆಗಿ ಬಾರ್ ನಲ್ಲೇ ಸೆಟ್ಲ್ ಆಗಿರುವವರಿಗೆ ಶ್ರೀ ಹರ್ಷ ಬರೆದಿರುವ ಈ ಹಾಡು ಫೇವರಿಟ್ ಆಗುವುದರಲ್ಲಿ ಡೌಟೇ ಇಲ್ಲ. ''ಲೇಡೀಸೇ ಫಸ್ಟು, ನಾವೇನೇ ಮಾಡಿದ್ರೂ ಲಾಸ್ಟು...ಹೆಣ್ಮಕ್ಕಳ ಮಾತು ಟೇಸ್ಟು, ಅದನ್ನ ಕೇಳ್ಕೊಂಡು ಹೋದ್ರೆ ಊಸ್ಟು'' ಅಂತ ನೊಂದಿರುವ ನಾಯಕನ ಗೋಳು, ಗಾಯಕ ನವೀನ್ ಸಜ್ಜು ಕಂಠದಿಂದ ಹೊರಬಂದಿದೆ.

ಹಾಡಿರುವವರು : ಪುನೀತ್ ರಾಜ್ ಕುಮಾರ್

ಸಾಹಿತ್ಯ : ಶ್ರೀಧರ್.ವಿ.ಸಂಭ್ರಮ್
'ಕೃಷ್ಣಲೀಲಾ' ಚಿತ್ರದಲ್ಲಿನ ಕೃಷ್ಣ ಪಾತ್ರಕ್ಕೆ ಬೂಸ್ಟ್ ಕೊಡುವ ಸ್ಪೆಷಲ್ ಸಾಂಗ್ 'ಪೆಸಲು ಮ್ಯಾನ್'. ಶ್ರೀಧರ್.ವಿ.ಸಂಭ್ರಮ್ ಬರೆದಿರುವ ಪಕ್ಕಾ ಲೋಕಲ್ ಲಿರಿಕ್ಸ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಪವರ್ ಫುಲ್ ಗಾಯನ ಹಾಡಿನ ಸ್ಪೆಷಾಲಿಟಿ. ಫುಲ್ ಎನರ್ಜಿ ಇರುವ ಈ ಹಾಡಿಗೆ ಅಪ್ಪು ಅಷ್ಟೇ ಜೋಷ್ ನಿಂದ ಎಂದಿನಂತೆ ಹಾಡಿದ್ದಾರೆ. [ಅಜೇಯ್ ರಾವ್ ಗೆ ಎದುರಾಗಿದೆ ಆರ್ಥಿಕ ಸಂಕಷ್ಟ]

ಹಾಡಿರುವವರು : ಶ್ರೇಯಾ ಘೋಷಾಲ್

ಸಾಹಿತ್ಯ : ಶಶಾಂಕ್
ಇಡೀ 'ಕೃಷ್ಣಲೀಲಾ' ಆಲ್ಬಂ ನಲ್ಲಿರುವ ಏಕೈಕ ಸುಮಧುರ ಹಾಡು ಇದೇ. ''ಕಾದಿರುವೆ ನಿನಗಾಗಿ...ನೋಡುವೆಯಾ ತಿರುಗಿ'' ಅನ್ನುವ ಮಧುರವಾದ ಸಾಹಿತ್ಯಕ್ಕೆ ಅಷ್ಟೇ ಸೊಗಸಾಗಿ ಗಾನಸುಧೆ ಹರಿಸಿರುವುದು ಖ್ಯಾತ ಗಾಯಕಿ ಶ್ರೇಯಾ ಘೋಷಾಲ್. ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಸಾಹಿತ್ಯ ಮತ್ತು ಸುಮಧುರ ಸಂಗೀತ ಇರುವ ಈ ಹಾಡು ಮೈಂಡ್ ರೀಫ್ರೆಶ್ ಮಾಡುವುದು ಖಂಡಿತ.

ಹಾಡಿರುವವರು : ಟಿಪ್ಪು, ಅಪೂರ್ವ ಶ್ರೀಧರ್

ಸಾಹಿತ್ಯ : ಶಿವ ತೇಜಸ್ವಿ, ಸಾಯಿ ಸರ್ವೇಶ್
'ಡಿಸ್ಕೋ ನಂಬರ್' ಅಂತ ಹೇಳೋಕೆ ಸಾಧ್ಯವಾಗದಿದ್ದರೂ, 'ಕೃಷ್ಣಲೀಲಾ' ಚಿತ್ರದ ಒಂದೊಳ್ಳೆ ಡ್ಯುಯೆಟ್ ಡ್ಯಾನ್ಸ್ ನಂಬರ್ 'ಕೃಷ್ಣ ಕಾಲಿಂಗ್...ಲೀಲಾ ಡಾರ್ಲಿಂಗ್..ಕಮ್..ಕಮ್'. ಶಿವ ತೇಜಸ್ವಿ ಮತ್ತು ಸಾಯಿ ಸರ್ವೇಶ್ ಬರೆದಿರುವ ಮಸ್ತ್ ಲಿರಿಕ್ಸ್ ಗೆ ಟಿಪ್ಪು ಗಾಯನ ಮ್ಯಾಜಿಕ್ ಮಾಡಿದೆ. ಹೆಚ್ಚೇನು ಏರಿಳಿತಗಳಿಲ್ಲದ ಈ ಹಾಡು, ತೆರೆಮೇಲೆ ಸೂಪರ್ ಸ್ಟೆಪ್ಸ್ ನಿಂದ ಕಮಾಲ್ ಮಾಡಬಹುದು.

ಕಲರ್ ಫುಲ್ ಮೇಕಿಂಗ್

ಹಾಡಿನ ಝಲಕ್ ಜೊತೆಗೆ 'ಕೃಷ್ಣಲೀಲಾ' ಚಿತ್ರದ ಕಲರ್ ಫುಲ್ ಮೇಕಿಂಗ್ ಕೂಡ ರಿಲೀಸ್ ಆಗಿದೆ. ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕೃಷ್ಣ ಅಲಿಯಾಸ್ ಅಜೇಯ್ ರಾವ್ ಮತ್ತು ಮಯೂರಿ ಕಾಂಬಿನೇಷನ್, ಫುಲ್ ಬಾಟ್ಲು ಇಳ್ಸಿ ಟೈಟ್ ಆಗಿರುವ ಅಜೇಯ್ ಆಕ್ಟಿಂಗ್ ಹೇಗಿರಬಹುದು? ಅನ್ನುವ ಕುತೂಹಲ ಇದ್ದರೆ ಈ ಮೇಕಿಂಗ್ ವೀಡಿಯೋ ನೋಡಿ....

English summary
Ajay Rao starrer Krishna Leela's Audio is out. Shridhar.V.Sambhram has composed the music for Krishna Leela, which is Directed by Shashank. Here is the review of Krishna Leela Audio, Take a look.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada