For Quick Alerts
  ALLOW NOTIFICATIONS  
  For Daily Alerts

  ನಟ ಪುನೀತ್ ರಾಜ್ ಕುಮಾರ್ ಗೆ 'ಜನನಿ ಜನ್ಮ ಭೂಮಿ' ಅರ್ಪಣೆ ಮಾಡಿದ BAAFTA

  |

  ಬೆಂಗಳೂರು, ಮಾ. 21: ಬೆಂಗಳೂರು ಅಕಾಡೆಮಿ ಆಫ್ ಆಕ್ಟಿಂಗ್, ಫಿಲ್ಮ್ ಮೇಕಿಂಗ್ ಥಿಯೇಟರ್ ಅಂಡ್ ಆಂಕರಿಂಗ್ ಸಂಸ್ಥೆ ತನ್ನ ಮೊಲದ ವರ್ಷದ ವಾರ್ಷಿಕೋತ್ಸವ ಅಂಗವಾಗಿ ದಿವಂಗತ ನಟ ಪುನೀತ್ ರಾಜ್ ಕುಮಾರ್‌ಗೆ ಜನನಿ ಜನ್ಮ ಭೂಮಿ ಹಾಡನ್ನು ಅರ್ಪಿಸಿದೆ.

  ಬೆಂಗಳೂರಿನ ಸೆಂಚುರಿ ಕ್ಲಬ್‌ನಲ್ಲಿ ಆಯೋಜಿಸಿದ್ದ ಬೆಂಗಳೂರು ಅಕಾಡೆಮಿ ಆಫ್ ಆಕ್ಟಿಂಗ್ ಫಿಲ್ಮ್ ಮೇಕಿಂಗ್ ಥೀಯೇಟರ್ ಅಂಡ್ ಆಂಕರಿಂಗ್ ಸಂಸ್ಥೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಪಾಲ್ಗೊಂಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಜನನಿ ಜನ್ಮ ಭೂಮಿ ಹಾಡು ಬಿಡುಗಡೆ ಮಾಡಿ ಅರ್ಪಣೆ ಮಾಡಲಾಯಿತು.

  ಈ ವೇಳೆ ಮಾತನಾಡಿದ ಡಾ. ಕೆ. ಸುಧಾಕರ್, ನಟ ಪುನೀತ್ ಸಮಾಜಕ್ಕೆ ಅಮೂಲ್ಯ ಸೇವೆ ಕೊಟ್ಟಿದ್ದಾರೆ. ನಟನೆ ಮೂಲಕ ಜನ ಮನ ಗೆದ್ದಿದ್ದಾರೆ. ಅವರು ನಮ್ಮನ್ನು ಅಗಲಿಲ್ಲ. ನಮ್ಮೊಂದಿಗೆ ಇದ್ದಾರೆ. ಪುನೀತ್ ಅವರಿಗೆ ಜನನಿ ಹಾಡು ಅರ್ಪಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಸ್ಮರಿಸಿದರು.

  ಇದೇ ವೇಳೆ ಬಾಫ್ತಾ ಸಂಸ್ಥೆಯ ಸಾಧನೆಯನ್ನು ಸಚಿವರು ಪ್ರಶಂಸೆ ಮಾಡಿದರು. ಬಾಫ್ತಾ ಸಂಸ್ಥೆಯಲ್ಲಿ ಕಲಿತು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಇದೇ ವೇಳೆ ಪ್ರಶಂಶನಾ ಪತ್ರಗಳನ್ನು ನಟ ಶ್ರೀಮುರಳಿ ವಿತರಣೆ ಮಾಡಿದರು.

  BAAFTA presents Janani Janmabhoomi song to actor Puneeth Raj Kumar

  ವರ್ಲ್ ಮ್ಯೂಸಿಕ್ ಕನ್ಸರ್ವೇಟರಿ ಅಂಗ ಸಂಸ್ಥೆಯಾಗಿರುವ ಬಾಫ್ತಾ ಸಂಸ್ಥೆಯನ್ನು ಕೆ.ಎಂ. ಗೋಪಿನಾಥ್ ಮತ್ತು ಸಂಗೀತ ಕಿಶನ್ ಹುಟ್ಟುಹಾಕಿದ್ದಾರೆ. ಕೆ. ಎಂ. ಗೋಪಿನಾಥ್ ಅಂತಾರಾಷ್ಟ್ರೀಯ ಖ್ಯಾತಿ ಡ್ರಮ್ಮರ್, ಸಂಗೀತ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಲು ಹದಿನೆಂಟು ವರ್ಷಗಳ ಹಿಂದೆ ಬಾಫ್ತಾ ಸಂಸ್ಥೆ ಹುಟ್ಟು ಹಾಕಿದ್ದರು. ಈ ಮೂಲಕ ಹೊಸ ಕಲಾವಿದರನ್ನು ಹುಟ್ಟುಹಾಕುವ ಕಾರ್ಯದಲ್ಲಿ ನಿರತವಾಗಿದೆ.

  English summary
  BAAFTA 1st Year Anniversary: Health Minister Dr K Sudhakar launched janani janma bhoomi song for actor Punith rajkumar know more
  Monday, March 21, 2022, 19:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X