For Quick Alerts
  ALLOW NOTIFICATIONS  
  For Daily Alerts

  ಬಹುಪರಾಕ್ ಹಾಡುಗಳ 'ಸಾಹಿತ್ಯ' ದರ್ಬಾರ್

  By Mahesh
  |

  ಅಬ್ ಕೀ ಬಾರ್, ಬಹುಪರಾಕ್ ದರ್ಬಾರ್‌ ಎಂಬ ಅಡಿ ಬರಹವುಳ್ಳ ಸಿಂಪಲ್ ಸುನಿ ಅವರ ಬಹುಪರಾಕ್ ಹಾಡುಗಳು 'ಮೋಡಿ' ಮಾಡುತ್ತಿವೆ. ಸಿಂಪಲ್ ಸುನಿ ಸಾಹಿತ್ಯಕ್ಕೆ ಸುಂದರ ಸಂಯೋಜನೆ ಬೆಸೆದಿರುವ ಭರತ್ ಬಿ.ಜೆ ಅವರು ರಸಿಕರ ಮನ ಗೆಲ್ಲುತ್ತಿದ್ದಾರೆ. ಚಿತ್ರದ ಹಾಡುಗಳು ಚಿತ್ರಕಥೆಗೆ ತಕ್ಕಂತೆ ಇವೆ ಎಂಬ ಮಾತುಗಳು ಕೇಳಿ ಬಂದಿವೆ. ಪುನೀತ್ ರಾಜ್‌ಕುಮಾರ್ ಬಹುಪರಾಕ್ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಲಂಕೇಶರ 'ಗೆದ್ದೇ ಗೆಲ್ತಾನಂತ' ಹಾಡು ಈಗಾಗಲೇ ಸಾಕಷ್ಟು ಸುದ್ದಿ ಮಾಡುತ್ತಿದ್ದು, ಇದರ ಜೊತೆಗೆ ಶಿಶುನಾಳ ಶರೀಫರ 'ನಾನಾರೆಂಬುದು ನಾನಲ್ಲ' ಹಾಡು ಬಳಕೆಯಾಗಿರುವುದು ಬಹುಪರಾಕ್‌ನ ವಿಶೇಷ. ಉಳಿದಂತೆ ಉಳಿದ ಎಲ್ಲ ಹಾಡುಗಳನ್ನೂ ನಿರ್ದೇಶಕ ಸುನಿ ಬರೆದಿದ್ದಾರೆ. ಚಿತ್ರಕ್ಕೆ ನಾಯಕ, ನಾಯಕಿಯರಾದ ಕಿಟ್ಟಿ ಮತ್ತು ಮೇಘನಾ 'ಸಿಂಪಲ್ ಪ್ರೀತಿ' ಎಂಬ ಹಾಡು ಹಾಡಿರುವುದು ಇನ್ನೊಂದು ವಿಶೇಷ. [ಬಹುಪರಾಕ್ ಹಾಡುಗಳ 'ವಿಡಿಯೋ' ಪರೇಡ್]

  ಈ ಚಿತ್ರದಲ್ಲಿ ಕಿಟ್ಟಿ ಅವರಿಗೆ ಮನಸ್, ಮಣಿ, ಮೌನಿ ಎಂಬ ಮೂರು ಕ್ಯಾರೆಕ್ಟರ್‌ಗಳಿದ್ದು ಈ ಚಿತ್ರದ ನಾಲ್ವರು ನಿರ್ಮಾಪಕರಾದ ಅಭಿ, ಹೇಮಂತ್, ಸುರೇಶ್ ಭೈರಸಂದ್ರ, ಉಮೇಶ್ ಬಣಕಾರ್ ಜತೆಗೆ ಸುನಿ ಕೂಡಾ ಹಣ ಸುರಿದು ಸುಂದರ ಚಿತ್ರವನ್ನು ನೀಡಲು ಸಜ್ಜಾಗಿದ್ದಾರೆ. ದೇವನಿರುವನು ನಮ್ ಒಳಗೆ ಇರುವನು ಹಾಗೂ ನಾನಾರೆಂಬುದು ನಾನಲ್ಲ, ಈ ಮಾನುಷ ಜನ್ಮವು ನಾನಲ್ಲ ಸೇರಿದಂತೆ ಇನ್ನಿತರ ಹಾಡುಗಳ ಸಾಹಿತ್ಯ ಇಲ್ಲಿದೆ ಓದಿ..

  ದೇವನಿರುವನು ನಮ್ ಒಳಗೆ ಇರುವನು

  ದೇವನಿರುವನು ನಮ್ ಒಳಗೆ ಇರುವನು

  ದೇವನಿರುವನು ನಮ್ ಒಳಗೆ ಇರುವನು

  ದೇವನಿರುವನು ನಮ್ಮೊಳಗೆ ಇರುವನು

  ಅವನ ಕಂಡ ಮನುಜಾ ಎಂದೆಂದೂ ತೃಪ್ತನು

  ದೇವನಿರುವನು ನಮ್ಮೊಳಗೆ ಇರುವನು

  ಅವನ ಕಾಣದಾ ಮನುಜ ಎಂದಿಗೂ ಅತೃಪ್ತನು.

  ಬದುಕು ಒಂದು ವಿಧಿಲಿಖಿತ ಮೂರುವರ್ ದಿನ

  ಹುಟ್ಟಿನಲ್ಲೇ ಹುಟ್ಟೋ ಪದ ಜನನ ಮರಣ

  ಮಾಡು ನಿನ್ನ ಹೃದಯರಸ್ತೆ ಅಗಲೀಕರಣ

  ನಾವು ಸಿಂಪಡಿಸುತ್ತೇವೇ ಪ್ರೀತಿದ್ರಾವಣ

  ಹೇಳುವೆ ನಾ ನೀಗ ಮೂರೂ ಕಥೆಯನ್ನು

  ದೃಶ್ಯರೂಪ ಮಾಡಿಕೊಂಡೆರೆ ಮಾಡುವೇ

  ಮನದಾ ಮನನ.

  ದೇವನಿರುವನು ನಮ್ಮೊಳಗೆ ಇರುವನು

  ಅವನ ಕಂಡ ಮನುಜಾ ಎಂದೆಂದೂ ತೃಪ್ತನು

  ದೇವನಿರುವನು ನಮ್ಮೊಳಗೆ ಇರುವನು

  ಅವನ ಕಾಣದಾ ಮನುಜ ಎಂದಿಗೂ ಅತೃಪ್ತನು.

  - ಸಿಂಪಲ್ ಸುನಿ

  ಸಂಗೀತ : ಭರತ್ ಬಿ. ಜೆ

  ನಾನಾರೆಂಬುದು ನಾನಲ್ಲ, ಈ ಮಾನುಷ ಜನ್ಮವು ನಾನಲ್ಲ

  ನಾನಾರೆಂಬುದು ನಾನಲ್ಲ, ಈ ಮಾನುಷ ಜನ್ಮವು ನಾನಲ್ಲ

  ನಾನಾರೆಂಬುದು ನಾನಲ್ಲ, ಈ ಮಾನುಷ ಜನ್ಮವು ನಾನಲ್ಲ |

  ನಾರಾಯಣವರ ಬ್ರಹ್ಮ ಸದಾಶಿವ, ನೀಯೆಣಿಸುವ ಗುಣ ನಾನಲ್ಲ ||

  ಮಾತಾ ಪಿತ ಸುತ ನಾನಲ್ಲ, ಭೂನಾಥನಾದವ ನಾನಲ್ಲ |

  ಜಾತಿಗೋತ್ರಗಳು ನಾನಲ್ಲ, ಬಹು ಪ್ರೀತಿಯ ಪತಿ ಸುತ ನಾನಲ್ಲ ||

  ವೇದ ಓದುಗಳು ನಾನಲ್ಲ, ಬರಿ ವಾದ ಮಾಡಿದವ ನಾನಲ್ಲ |

  ನಾದಬಿಂದು ಕಳಬೇಧವಸ್ತು ನಿಜ ಬೋಧದವದಲ್ಲಿದವ ನಾನಲ್ಲ ||

  ನಾನೀಬೇಧವು ನಾನಲ್ಲ, ನಾ ಶಿಶುನಾಳಧೀಶನ ಬಿಡಲಿಲ್ಲ |

  ನಾ ಅಳಿಯದೆ ನೀ ತಿಳಿಯಲುಬಾರದು ನೀಯೆಣಿಸುವ ಗುಣ ನಾನಲ್ಲ ||

  ರಚನೆ: ಸಂತ ಶಿಶುನಾಳ ಷರೀಫ

  ಹಾಡುಗಾರರು: ಭರತ್ ಬಿ.ಜೆ, ಕೌಶಿಕ್ ಐತಾಳ್, ಚೈತನ್ಯ ಭಟ್

  ಉಸಿರಾಗುವೆ...ಉಸಿರಾಗುವೆ

  ಉಸಿರಾಗುವೆ...ಉಸಿರಾಗುವೆ

  ಹಾಡಿದವರು: ರಾಜೇಶ್ ಕೃಷ್ಣನ್ ಹಾಗೂ ಅನುರಾಧ ಭಟ್

  ಗೀತ ಸಾಹಿತ್ಯ : ಸುನಿ

  ಸಂಗೀತ: ಬಿ.ಜೆ ಭರತ್

  ಇರುವೆ ಗೂಡಿಗೆ ಸಕ್ಕರೆ ಹಾಕಲು

  ಇನಿಯ ಬರುತ್ತಿಲ್ಲ

  ಕತ್ತಲ ರಾತ್ರಿಯ ಮರೆಸೋ ಚಂದಿರ

  ನಿದಿರೆ ಮುಗಿಸಿಲ್ಲ

  ಜನುಮದಿನಕೆ ಸಾವಿನ ಭಾವನೆ

  ಯಾರೂ ಉಸಿರಾಗಿಲ್ಲ

  ಉಸಿರಾಗುವೆ...ಉಸಿರಾಗುವೆ

  ಅನುಸಾರಿಣಿ ನನ್ನ ಎದೆಗೆ

  ಅಪರಾಜಿತೆ ನನ್ನ ಮನಕೆ

  ಅಧಿದೇವತೆ ನನ್ನ ಮನಕೆ

  ನನ್ನ ಸ್ನೇಹಕೆ ಸಿರಿ ಸ್ನೇಹಕೆ

  ನಿನ್ನ ಕಾಲ ಕಸವಾದ ನಾನು

  ಸೇರಿಸಿದೆ ಕಣ್ಣೊಳಗೆ ನೀನು

  ಕಣ್ಣೀರ ಹನಿಗೆ ನಾನೆ ಹೊಣೆಗಾರನು

  ಉಸಿರಾಗುವೆ...ಉಸಿರಾಗುವೆ

  ಸ್ನೇಹದ ನದಿ ದಡದಲ್ಲಿ

  ಕಾಯುವ ಸ್ನೇಹಿ ನಾನಾದೆನು

  ಪ್ರೀತಿಯ ಮಳಿಗೆಯಲ್ಲಿ

  ಕೊಳ್ಳುವ ಪ್ರೇಮಿ ನಿನಗಾದೆನು

  ಮನದ ಹಾಡಿಗೆ ರಾಗವಿಲ್ಲ

  ಜನುಮದಿನವೇ ಇನಿಯನಿಲ್ಲ

  ನನ್ನ ನೆರಳ ಛೇಡಿಸೋ ಪ್ರಿಯನು

  ಬೆಳಕಿಗೆ ಕಾಣದೆ ಇನ್ನೂ

  ನೆರಳಾಗುವೆ...ನೆರಳಾಗುವೆ

  ಚಂದಿರ ಹಠ ಮಾಡಿದ

  ತುತ್ತನು ತಾಯಿ ತಿನ್ನಿಸುವಾಗ

  ಅವಳ ಮನ ಕದಡಿದ

  ಕಾಡಿತು ಚಿಂತೆ ಅವಳಿಗೀಗ

  ಭೂಮಿ ಅತ್ತ ಕೈನೆತ್ತಿ

  ತೋರಿಸಿದಳು ಸ್ನೇಹ ಪ್ರೀತಿ

  ಚಂದಿರನ ಮನಸಿಗೆ ಖುಷಿಯು

  ಹಸಿವನು ನೀಗಿದ ಕಥೆಯೂ

  ಅನುಸಾರಿಣಿ ನನ್ನ ಎದೆಗೆ

  ಅಪರಾಜಿತೆ ನನ್ನ ಮನಕೆ

  ಅಧಿದೇವತೆ ಆದೇ ನೀ

  ಉಸಿರಾಗುವೆ ನೆರಳಾಗುವೆ

  ಉಸಿರಾಗುವೆ ನೆರಳಾಗುವೆ

  ಸ್ನೇಹ ಎಂಬುದು ಹೃದಯದ ಸ್ವಂತ ಕುಟೀರ

  ಸ್ನೇಹ ಎಂಬುದು ಹೃದಯದ ಸ್ವಂತ ಕುಟೀರ

  ಸ್ನೇಹ ಎಂಬುದು ಹೃದಯದ ಸ್ವಂತ ಕುಟೀರ

  ಎಲ್ಲರ ಹೆಸರನ್ನು ನೊಂದಾಯಿಸುವಂಥ ಶಿಬೀರ

  ಖಾತಾ ಪತ್ರವಿಲ್ಲದೆ ತನ್ನದೆನ್ನೋ ವಿಚಾರ

  ಧೂಳು ಹಿಡಿದ ಮೈಯಲ್ಲಿ ಮಿಂಚುವ ವೈಯಾರ

  ಸ್ನೇಹ ಸ್ನೇಹ ಖುಷಿಯ ಸಾಗರ (2)

  ಗೆಳೆತನದ ಕೀಟಾಣು ಸೇರಿ ಮನದೊಳಗೆ

  ನಡೆಸಿದೆ ಖುಷಿಯ ಅಧಿವೇಶನ

  ಸದಾ ಮಾತೊಂದು ಸೀದಾ ಹಿಡಿಸುತ್ತಿದೆ

  ಶುರುವಾಯಿತು ನೆನಪ ಚಲನವಲನ

  ಚೂರಾದ ಕಾಗದವ ಸೇರಿಸೋ ಚಟುವಟಿಕೆ

  ಈ ಸ್ನೇಹದ ಊರಿಗೆ ಹೃದಯವೇ ಆಟಿಕೆ

  ಸ್ನೇಹ ಸ್ನೇಹ ಖುಷಿಯ ಸಾಗರ (2)

  ಸ್ನೇಹ ಎಂಬುದು ಹೃದಯದ ತವರು ಸಿಂಗಾರ

  ತನ್ನಯ ಕನಸನ್ನು ಅವಳಂತಾಗಿಸೋ ಚೋರ

  ಮಾತಾಗಿ ಒಲ್ಲದೆ ಹಾಡದ ನವಸ್ವರ

  ಗಿಡವಾಗಿ ಬಾಗದ ಬೆಳೆಯುವ ಮಾಮರ

  ಪ್ರೀತಿ ಕನಸಾ ಸಾಗರ ....(2)

  ಪ್ರೀತಿಯ ವೈರಾಣು ಜಾರಿ ಎದೆಯೊಳಗೆ

  ಕೊಡಿಸಿದೆ ನೆನಪಿನ ಮಾಸಾಶನ

  ಎದೆಯ ಹೊಸಿಲನು ತುಳಿದು ಹೊರಡಿನ್ನು

  ಸುಮ್ಮನಿರುವಿದೆ ಈಗ ಅವಹೇಳನ

  ಪುಸಲಾಯಿಸೋ ಈ ಮನ ಬೆಳದಿದೆ ನನ್ನೊಳಗೆ

  ಬಲೆ ಹಾಕಲು ನಾನು ನಾನೇ ಸೆರೆಯಾದೆನು

  ಪ್ರೀತಿ ಕನಸಾ ಸಾಗರ ....(2)

  ರಚನೆ: ಸುನಿ

  ಹಾಡುಗಾರ: ಕೆ.ಕೆ

  English summary
  Bahuparak movie Song Lyrics : Devaniruvanu and Naanaarembudu Naanalla. directed and co-produced by Sunil Kumar (Suni of Simple Agi Ondh Love Story) who also penned the songs. BJ Bharath has composed the music.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X