Don't Miss!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- News
ಫೆಬ್ರವರಿ 6ರಂದು 280 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇನ್ನು ಮುಂದೆ ರೇಡಿಯೋದಲ್ಲಿ ಪ್ರಸಾರವಾಗುವಂತಿಲ್ಲ ಆ ಮಾದರಿ ಹಾಡುಗಳು
ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಆದೇಶದಂತೆ ರೇಡಿಯೋಗಳಲ್ಲಿ ಇನ್ನು ಮುಂದೆ ಮದ್ಯ, ಮಾದಕ ವಸ್ತು, ಹಾಗೂ ಬಂದೂಕುಗಳನ್ನು ಪ್ರಚಾರ ಪಡಿಸುವ ಹಾಡುಗಳನ್ನು ಪ್ರಸಾರ ಮಾಡುವಂತಿಲ್ಲ.
ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಇಲಾಖೆಯು ಈ ರೀತಿಯ ಆದೇಶವೊಂದನ್ನು ರೇಡಿಯೋ ಸಂಸ್ಥೆಗಳಿಗೆ ನೀಡಿದ್ದು, ಮದ್ಯ, ಮಾದಕ ವಸ್ತು, ಬಂದೂಕುಗಳ ಬಗೆಗಿನ ಹಾಡುಗಳನ್ನು ಇನ್ನು ಮುಂದೆ ಪ್ರಸಾರ ಮಾಡುವಂತಿಲ್ಲ. ಈ ರೀತಿಯ ಹಾಡುಗಳು ಗ್ಯಾಂಗ್‌ಸ್ಟರ್, ಅಪರಾಧ ಮನೋಭಾವವನ್ನು ಮಕ್ಕಳಲ್ಲಿ ಹೆಚ್ಚು ಮಾಡುತ್ತವೆ ಎಂದು ಇಲಾಖೆಯು ಅಭಿಪ್ರಾಯ ವ್ಯಕ್ತಪಡಿಸಿದೆ. ಹರಿಯಾಣ ಹಾಗೂ ಪಂಜಾಬ್ ಹೈಕೋರ್ಟ್‌ಗಳು ಸಹ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದವು.
''ಮಾಹಿತಿ ಮತ್ತು ಪ್ರಸಾರ ಇಲಾಖೆಯ ಗಮನಕ್ಕೆ ಬಂದಿರುವಂತೆ ರೇಡಿಯೋ ಚಾನೆಲ್‌ಗಳಲ್ಲಿ ಮದ್ಯ, ಮಾದಕ ವಸ್ತು, ಬಂದೂಕು, ಭೂಗತ ಜಗತ್ತಿನ ವೈಭವೀಕರಣದ ಬಗೆಗಿನ ಹಾಡುಗಳನ್ನು ಪ್ರಸಾರ ಮಾಡಲಾಗುತ್ತಿದೆ. ಘನವೆತ್ತ ಪಂಜಾಬ್ ಹಾಗೂ ಹರಿಯಾಣಾ ಹೈಕೋರ್ಟ್‌ಗಳು ಗಮನಿಸಿರುವಂತೆ ಈ ರೀತಿಯ ಹಾಡುಗಳು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಹಾಗೂ ಭೂಗತ ಲೋಕದ ಸಂಸ್ಕೃತಿಯನ್ನು ಹೆಚ್ಚು ಮಾಡಬಹುದು'' ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆಯು ರೇಡಿಯೋ ಚಾನೆಲ್‌ಗಳಿಗೆ ನೀಡಿರುವ ಆದೇಶ ಪತ್ರದಲ್ಲಿ ಹೇಳಿದೆ.
ಎಲ್ಲ ರೇಡಿಯೋ ಚಾನೆಲ್‌ಗಳು ಕಾರ್ಯಕ್ರಮ ಹಾಗೂ ಜಾಹೀರಾತು ವಿಷಯದಲ್ಲಿ ಆಲ್ ಇಂಡಿಯಾ ರೇಡಿಯೋ ಮಾದರಿಯನ್ನು ಅನುಸರಿಸಬೇಕು ಎಂದು ಕೇಂದ್ರವು ಹೇಳಿದ್ದು, ಒಂದೊಮ್ಮೆ ಈ ರೀತಿಯ ಹಾಡುಗಳು ಮತ್ತೆ ಪ್ರಸಾರವಾದರೆ ಅವು ಎಐಆರ್‌ನ ನಿಯಮಾವಳಿಗಳ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಎಂದು ಕೇಂದ್ರವು ಎಚ್ಚರಿಸಿದೆ.
ಪರವಾನಗಿ ಹೊಂದಿರುವವರು ಪರವಾನಗಿಯ ಯಾವುದೇ ನಿಯಮಗಳು ಮತ್ತು ಷರತ್ತುಗಳನ್ನು ಅಥವಾ FM ರೇಡಿಯೊ ನೀತಿಯ ಯಾವುದೇ ಇತರ ನಿಬಂಧನೆಗಳನ್ನು ಉಲ್ಲಂಘಿಸಿದರೆ, ಪರವಾನಗಿ ರದ್ದುಗೊಳಿಸಲಾಗುವುದು ಮತ್ತು ಪ್ರಸಾರವನ್ನು ಶಾಶ್ವತವಾಗಿ ನಿಷೇಧಿಸುವ ಹಕ್ಕನ್ನು ಸಹ ಬಳಸಬೇಕಾಗಬಹುದು ಎಂಬ ಕಠಿಣ ಎಚ್ಚರಿಕೆಯನ್ನು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಇಲಾಖೆ ರೇಡಿಯೋ ಚಾನೆಲ್‌ಗಳಿಗೆ ನೀಡಿದೆ.
ಪಂಜಾಬ್ ಹಾಗೂ ಹರಿಯಾಣಾಗಳಲ್ಲಿ ಮಾದಕ ವಸ್ತು, ಬಂದೂಕು, ಭೂಗತ ಲೋಕ, ಗ್ಯಾಂಗ್‌ಸ್ಟರ್‌ಗಳನ್ನು ವೈಭವೀಕರಿಸಿ ಸಿಂಗಲ್ ಹಾಡುಗಳನ್ನು ಅನೇಕರು ಮಾಡುತ್ತಾರೆ. ಸ್ವತಃ ಗ್ಯಾಂಗ್‌ಸ್ಟರ್‌ಗಳಾಗಿದ್ದವರು ಸಹ ಹಾಡುಗಳನ್ನು ಮಾಡಿ ಬಿಡುಗಡೆ ಮಾಡುವ ಪದ್ಧತಿಯೂ ಸಹ ಅಲ್ಲಿದೆ. ಅದೇ ಹಾಡುಗಳನ್ನು ರೆಡಿಯೋ ಚಾನೆಲ್‌ಗಳು ಸಹ ಆಗಾಗ್ಗೆ ಪ್ರಸಾರ ಮಾಡುತ್ತಿರುತ್ತದೆ.