»   » ದರ್ಶನ್ 'ಅಂಬರೀಶ' ಹಾಡಿಗೆ ರು.80 ಲಕ್ಷ

ದರ್ಶನ್ 'ಅಂಬರೀಶ' ಹಾಡಿಗೆ ರು.80 ಲಕ್ಷ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಮತ್ತೊಂದು ಅದ್ದೂರಿ ಚಿತ್ರ 'ಅಂಬರೀಶ'. ಈ ಚಿತ್ರಕ್ಕೆ ಅದ್ದೂರಿ ಹಾಡನ್ನು ಇತ್ತೀಚೆಗೆ ಬೆಂಗಳೂರಿನ ಬಂಗಾರಪ್ಪ ನಗರದಲ್ಲಿ ಚಿತ್ರೀಕರಿಸಲಾಯಿತು. ಈ ಹಾಡಿನಲ್ಲಿ 100 ಜನ ಸಹ ನರ್ತಕಿಯರು 500 ಜನ ಸಹಕಲಾವಿದರು ಪಾಲ್ಗೊಂಡಿದ್ದದ್ದು ವಿಶೇಷ.

ಇನ್ನೂ ವಿಶೇಷ ಎಂದರೆ ಈ ಹಾಡಿಗಾಗಿ 25 ಲಾರಿಗಳು, 25 ಜೆ.ಸಿ.ಬಿ. ಸ್ಟಡಿಕಾಂ, ಜಿಮ್ಮಿ ಜಿಪ್, ಅಲೆಕ್ಸಾ ಜೊತೆಗೆ 10 ಕ್ಯಾಮೆರಾಗಳನ್ನು ಬಳಸಿ ಕಲೈ ನೃತ್ಯ ನಿರ್ದೇಶನದೊಂದಿಗೆ ಸತ್ಯ ಛಾಯಾಗ್ರಹಣದಲ್ಲಿ ನಿರ್ದೇಶಕ ಮಹೇಶ್ ಸುಖಧರೆ ಚಿತ್ರಿಸಿಕೊಂಡರು.


"ಸಲಾಂ... ಸಲಾಂ... ವಾಲೆಕ್ಕೂ ಸಲಾಂ...ಈ ಮಣ್ಣಿಗೊಂದು ಸಲಾಂ...ಹೆತ್ತೊರಿಗೊಂದು ಸಲಾಂ...ಬೆನ್ ತಟ್ಟಿದೋರ್ಗೋಂದು ಸಲಾಂ..." ಎಂದು ಸಾಗುವ ಹಾಡಿನಲ್ಲಿ ದರ್ಶನ್, ಪ್ರಿಯಾಮಣಿ, ಬುಲೆಟ್ ಪ್ರಕಾಶ್, ನೆ.ಲ.ನರೇಂದ್ರ ಬಾಬು ಹೆಜ್ಜೆ ಹಾಕಿದ್ದಾರೆ. ಚಿತ್ರೀಕರಣವು ಡಿಸೆಂಬರ್ ಅಂತ್ಯದವರೆವಿಗೂ ನಡೆಯಲಿದೆ ಎಂದು ನಿರ್ಮಾಪಕ ಕಮ್ ನಿರ್ದೇಶಕ ಸುಖಧರೆ ತಿಳಿಸಿದ್ದಾರೆ.

ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅತಿಥಿ ಪಾತ್ರ ಪೋಷಿಸುತ್ತಿದ್ದಾರೆ. ಈಗಾಗಲೆ ಅವರ ಪಾತ್ರದ ಫೋಟೋ ಶೂಟ್ ಸಹ ಸದ್ದಿಲ್ಲದಂತೆ ಮುಗಿದಿದೆ. ಚಿತ್ರದಲ್ಲಿ ಅಂಬರೀಶ್ ಅವರು ಕೆಂಪೇಗೌಡ ಗೆಟಪ್ ನಲ್ಲಿ ದರ್ಶನ ನೀಡುತ್ತಿರುವುದು ವಿಶೇಷ.

ತಾರಾಗಣದಲ್ಲಿ ದರ್ಶನ್, ಪ್ರಿಯಾಮಣಿ, ಡಾ.ಅಂಬರೀಶ್, ಸುಮಲತಾ, ಉಮಾಶ್ರೀ, ಸಾಧುಕೋಕಿಲ, ಶರತ್ ಲೋಹಿತಾಶ್ವ, ರವಿಕಾಳೆ, ಬುಲೆಟ್ ಪ್ರಕಾಶ್, ರವಿಶಂಕರ್, ರಾಜೇಂದ್ರ ಕಾರಂತ್, ಸಿದ್ಧಾರ್ಥ (ಬಾಂಬೆ), ಬಿರಾದಾರ್, ರೋಹಿತ್, ಭರತ್, ಸತೀಶ್ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Costly song for the film Ambarisha was recently shot on Darshan and Rachita Ram in Bangalore. Producer Mahesh Sukhadhare almost spent around Rs 80 Lakh to shoot this song and used 25 lorries, 25 JCB's and 10 cameras.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada