»   » 'ತಾರಕ್' ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಸೂಪರ್

'ತಾರಕ್' ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಸೂಪರ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಸಣ್ಣ ಟೀಸರ್ ಮೂಲಕ ಸಖತ್ ಸೌಂಡ್ ಮಾಡ್ತಿದ್ದ ತಾರಕ್ ಈಗ ಚಿತ್ರದ ಎಲ್ಲ ಹಾಡುಗಳ ಆಡಿಯೋ ರಿಲೀಸ್ ಮಾಡಿದೆ.

ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ಹಾಗೂ ಹರಿ ಸಂತೋಷ್ ಮೂವರು ತಲಾ ಎರಡೆರಡು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

'ತಾರಕ್' ರಿಯಲ್ ಹೀರೋಗಳ ಬಗ್ಗೆ ಖುಷಿಯಾದ ದರ್ಶನ್ ಹೇಳಿದ್ದೇನು?

Darshan Starrer tarak movie audio released

ಅರ್ಮನ್ ಮಲ್ಲಿಕ್ ಧ್ವನಿಯಲ್ಲಿ ಎರಡು ರೊಮ್ಯಾಂಟಿಕ್ ಹಾಡುಗಳು ಮೂಡಿ ಬಂದಿದೆ. ಗಾಯಕ ವ್ಯಾಸ್ ಎರಡು ಹಾಡನ್ನ ಹಾಡಿದ್ದಾರೆ. ವಿಜಯ ಪ್ರಕಾಶ್ ಕೂಡ ಒಂದು ಸೂಪರ್ ಹಾಡಿಗೆ ಧ್ವನಿಯಾಗಿದ್ದಾರೆ. ಇವರು ಜೊತೆ ಶ್ರೇಯಾ ಘೋಷಲ್, ಇಂದು ನಾಗರಾಜ್, ನೀತಿ ಮೋಹನ್ ಗಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ.

'ತಾರಕ್' ಚಿತ್ರದ ಎಣ್ಣೆ ಹಾಡಿಗೆ ದರ್ಶನ್ ತಕಧಿಮಿತಾ.!

ಅಂದ್ಹಾಗೆ, ತಾರಕ್ ಚಿತ್ರವನ್ನ ಮಿಲನ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ನಟ ದರ್ಶನ್ ಇಲ್ಲಿ ರಗ್ಬಿ ಪ್ಲೇಯರ್ ಆಗಿ ಮಿಂಚಿದ್ದಾರೆ. ಉಳಿದಂತೆ ಶಾನ್ವಿ ಶ್ರೀವಾಸ್ತವ ಮತ್ತು ಶೃತಿ ಹರಿಹರನ್ ದರ್ಶನ್ ಗೆ ಜೋಡಿಯಾಗಿದ್ದು, ದೇವರಾಜ್, ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

'ತಾರಕ್' ಚಿತ್ರದ ಎಲ್ಲಾ ಹಾಡುಗಳು ಇಲ್ಲಿದೆ ಕೇಳಿ

English summary
Challenging Star Darshan Starrer tarak movie audio released. The Movie Directed by Milana Prakash and music by arjun janya

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada