For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರ ಹಾಡಿಗೆ ಹೆಜ್ಜೆ ಹಾಕಲು ತಯಾರಾದ ಮೊಮ್ಮಗ ವಿನಯ್ ರಾಜ್ ಕುಮಾರ್

  By Harshitha
  |

  ''ಮೈ ಲಾರ್ಡ್ ನನ್ನ ವಾದ... ಕೇಳಿ.. ಕೇಳಿ..'' - 1982 ರಲ್ಲಿ ಬಿಡುಗಡೆ ಆದ 'ಚಲಿಸುವ ಮೋಡಗಳು' ಚಿತ್ರದ ಈ ಹಾಡು ಯಾರಿಗ್ತಾನೆ ಗೊತ್ತಿಲ್ಲ ಹೇಳಿ.? ಪುಟಾಣಿ ನ್ಯಾಯಾಧೀಶರ ಮುಂದೆ ಡಾ.ರಾಜ್ ಕುಮಾರ್ ಹಾಗೂ ಅಂಬಿಕಾ ಹೆಜ್ಜೆ ಹಾಕಿರುವ ಹಾಡು ಅಣ್ಣಾವ್ರ ಅಭಿಮಾನಿಗಳಿಗೆ ಅಚ್ಚುಮೆಚ್ಚು.

  36 ವರ್ಷಗಳ ನಂತರ ಈಗ ಇದೇ ಹಾಡು ಕನ್ನಡ ಬೆಳ್ಳಿಪರದೆ ಮೇಲೆ ಬರಲಿದೆ. ಅದು ವರನಟ ಡಾ.ರಾಜ್ ಕುಮಾರ್ ಮೊಮ್ಮಗ ವಿನಯ್ ರಾಜ್ ಕುಮಾರ್ ಅಭಿನಯದ ಚಿತ್ರದಲ್ಲಿ.!

  ಹೌದು, ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ 'ಅನಂತು v/s ನುಸ್ರತ್' ಚಿತ್ರದಲ್ಲಿ ನಟಿಸುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಇದೇ ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ಲಾಯರ್ ಪಾತ್ರ ನಿರ್ವಹಿಸುತ್ತಿದ್ದಾರೆ.

  ವಿನಯ್ ರಾಜ್ ಕುಮಾರ್ ಚಿತ್ರದ ವಿರುದ್ಧ ಹೈಕೋರ್ಟ್ ನಲ್ಲಿ ಅರ್ಜಿವಿನಯ್ ರಾಜ್ ಕುಮಾರ್ ಚಿತ್ರದ ವಿರುದ್ಧ ಹೈಕೋರ್ಟ್ ನಲ್ಲಿ ಅರ್ಜಿ

  'ಅನಂತು v/s ನುಸ್ರತ್' ಚಿತ್ರಕಥೆಗೆ ''ಮೈ ಲಾರ್ಡ್ ನನ್ನ ವಾದ... ಕೇಳಿ.. ಕೇಳಿ..'' ಹಾಡು ಸರಿಹೊಂದುವುದರಿಂದ, ಅದನ್ನ ರೀಕ್ರಿಯೇಟ್ ಮಾಡಲು ಚಿತ್ರತಂಡ ತೀರ್ಮಾನಿಸಿದೆ.

  ತಾತನ ಹಾಡಿಗೆ ಹೆಜ್ಜೆ ಹಾಕಲು ವಿನಯ್ ರಾಜ್ ಕುಮಾರ್ ಅಂತೂ ಉತ್ಸುಕರಾಗಿದ್ದಾರೆ. ಮೂವತ್ತಾರು ವರ್ಷಗಳ ಬಳಿಕ 'ಮೈ ಲಾರ್ಡ್' ಹಾಡು ಹೇಗೆ ರೀಕ್ರಿಯೇಟ್ ಆಗುತ್ತೆ ಅಂತ ನೋಡಲು ಅಣ್ಣಾವ್ರ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ.

  ಅಂದ್ಹಾಗೆ, 'ಅನಂತು v/s ನುಸ್ರತ್' ಚಿತ್ರಕ್ಕೆ ಸುಧೀರ್ ಶಾನುಭೋಗ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿನಯ್ ರಾಜ್ ಕುಮಾರ್ ಗೆ ನಾಯಕಿ ಆಗಿ ಲತಾ ಹೆಗಡೆ ಕಾಣಿಸಿಕೊಂಡಿದ್ದಾರೆ.

  English summary
  Dr Rajkumar's 'My Lord' song from Kannada Movie 'Chelisuva Modagalu' to be recreated for Vinay Rajkumar's 'Ananthu v/s Nusrath' film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X