»   » ಬಸವನಗುಡಿಯಲ್ಲಿ ವಿಷ್ಣುವರ್ಧನ್ ಚಿತ್ರಗೀತೆಗಳು

ಬಸವನಗುಡಿಯಲ್ಲಿ ವಿಷ್ಣುವರ್ಧನ್ ಚಿತ್ರಗೀತೆಗಳು

Posted By:
Subscribe to Filmibeat Kannada
Dr.Vishnuvardhan
ಕನ್ನಡ ಚಿತ್ರರಸಿಕರ ಹೃದಯ ಸಿಂಹಾಸನ ಅಲಂಕರಿಸಿದ ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ವನ್ನು ಬಸವನಗುಡಿಯಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ 'ನೀ ಮೀಟಿದ ನೆನಪೆಲ್ಲವು' ಎಂದು ಹೆಸರಿಡಲಾಗಿದೆ.

ಭಾನುವಾರ (ಅ.27) ಸಂಜೆ 5.30ಕ್ಕೆ ಗಾಯನ ಕಾರ್ಯಕ್ರಮ. ಕಲಾ ನಮನ ಸಂಗೀತ ತಂಡ ಆಯೋಜಿಸಿರುವ ಈ ಕಾರ್ಯಕ್ರಮ ಬಸವನಗುಡಿಯ ಬ್ಯೂಗಲ್ ರಾಕ್ ನಲ್ಲಿ ನಡೆಯಲಿದೆ. ದಿ.ವಿಷ್ಣುವರ್ಧನ್ ಅವರು ಅಭಿನಯಿಸಿದ ಚಲನಚಿತ್ರಗಳ ಸುಮಧುರ ಗೀತೆಗಳನ್ನು ಕೇಳುತ್ತಾ ರಜಾದಿನವನ್ನು ಕಳೆಯಬಹುದು.

ಕಲಾನಮನ ಸಂಸ್ಥೆಯ ಎಚ್.ಎಸ್.ಸುಜನ್ ಅವರ ಸಾರಥ್ಯದಲ್ಲಿ ಖ್ಯಾತ ಗಾಯಕರಾದ ರಮೇಶ್ ಚಂದ್ರ, ಎಚ್.ಎಸ್.ಶ್ರೀನಿವಾಸಮೂರ್ತಿ, ವ್ಯಾಸರಾಜ್, ನಾಗಚಂದ್ರಿಕಾ ಭಟ್, ಎಸ್.ಸುನೀತಾ, ಸಾರ್ಥವಳ್ಳಿ ನಾರಾಯಣಸ್ವಾಮಿ, ಸತೀಶ್ ಅರವಿಂದ್ ಮತ್ತು ಎಚ್.ಬಿ.ಜಯರಾಂ ಹಾಡಲಿದ್ದಾರೆ.

ಈ ಗಾಯನ ಕಾರ್ಯಕ್ರಮದಲ್ಲಿ ನಿರ್ದೇಶಕ ಭಾರ್ಗವ, ಸಂಗೀತ ನಿರ್ದೇಶಕ ರಾಜನ್-ನಾಗೇಂದ್ರ, ನಟ ಅನಿರುದ್ಧ, ವಿಷ್ಣು ಪುತ್ರಿ ಕೀರ್ತಿ ವಿಷ್ಣುವರ್ಧನ್, ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ಹಾಗೂ ಮೇಯರ್ ಬಿ.ಎಸ್.ಸತ್ಯನಾರಾಯಣ ಪಾಲ್ಗೊಳ್ಳಲಿದ್ದಾರೆ. (ಏಜೆನ್ಸೀಸ್)

English summary
Dr.Vishnuvardhan film songs programme held at Basavanagudi Bugle Rock on 27th October at 5.30 pm. The programme named 'Nee Meetida Nenapellavu' organized by Namana music team. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada