»   » 'ಈ ದಿಲ್ ಹೇಳಿದೆ ನೀ ಬೇಕಂತ' ಹೊಸ ದಾಖಲೆ

'ಈ ದಿಲ್ ಹೇಳಿದೆ ನೀ ಬೇಕಂತ' ಹೊಸ ದಾಖಲೆ

By: ಜೀವನರಸಿಕ
Subscribe to Filmibeat Kannada

ನರಸಿಂಹರಾಜು ಮೊಮ್ಮಗ ಅವಿನಾಶ್ ಅಭಿನಯದ ಚಿತ್ರವೊಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿಯಾಗಿದೆ. ಆಡಿಯೋ ರಿಲೀಸ್ ಮಾಡಿದ ಸಿನಿಮಾ ತಂಡ ಸಿಡಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಮಾರಾಟವಾದ್ರೆ ಪ್ಲಾಟೀನಂ ಡಿಸ್ಕ್ ಕೊಡೋದು ಮಾಮೂಲು. ಆದ್ರೆ 'ಈ ದಿಲ್ ಹೇಳಿದೆ ನೀ ಬೇಕಂತ' ಚಿತ್ರತಂಡ ಆಡಿಯೋ ರಿಲೀಸ್ ದಿನಕ್ಕೂ ಮೊದಲೇ 25 ಸಾವಿರ ಆಡಿಯೋ ಸಿಡಿ ಮಾರಾಟ ಮಾಡಿದೆ.

ಮೂಲತಃ ಚಿತ್ರದುರ್ಗದವರಾದ ನಿರ್ಮಾಪಕ ಶ್ರೀಧರ್ ಆಡಿಯೋ ಸಿಡಿ ಮಾರಾಟದ ಜೊತೆಗೆ ಚಿತ್ರದ ಪ್ರಚಾರಕ್ಕೆ ಜಿಲ್ಲೆ ಜಿಲ್ಲೆಗಳನ್ನ ಸುತ್ತಾಡಿದ್ದಾರೆ. ಈಗ ಈ ದಿಲ್ ಹೇಳಿದೆ ನೀ ಬೇಕಂತ ಚಿತ್ರತಂಡ 25 ಸಾವಿರ ಆಡಿಯೋ ಸಿಡಿಗಳನ್ನ ಮಾರಾಟ ಮಾಡಿದೆ. [ಲಿರಿಕ್ಸ್ ಬರೆಯೋಕೆ 2 ಕೋಟಿ ಖರ್ಚು ಮಾಡಿದ ಟೆಕ್ಕಿ]

ಈ ಹಿಂದೆ 'ಪದೇ ಪದೇ' ಸಿನಿಮಾಗೆ ಸಂಗೀತ ನೀಡಿ ಯಶಸ್ವಿಯಾಗಿದ್ದ ಸತೀಶ್ ಆರ್ಯನ್ ಸಂಗೀತದ ಹಾಡುಗಳು ಸಿನಿಪ್ರೇಮಿಗಳಿಗೆ ಇಷ್ಟವಾಗ್ತಿವೆ. ವಿಶೇಷ ಅಂದ್ರೆ ಸಾಹಿತ್ಯ ಪ್ರಿಯ ನಿರ್ಮಾಪಕ ಎಸ್ ಶ್ರೀಧರ್ ಎಲ್ಲ ಹಾಡುಗಳನ್ನ ಬರೆದಿದ್ದು ಸಾಹಿತ್ಯ ಕೂಡ ಸಂಗೀತಕ್ಕೆ ತಕ್ಕ ಸಾಥ್ ಕೊಡ್ತಿದೆ.

ಇಂದು (ಜು.24) ಆಡಿಯೋ ರಿಲೀಸ್ ಮಾಡಿಕೊಳ್ತಿರೋ ಚಿತ್ರತಂಡ ಈಗಾಗ್ಲೇ 25,000 ಸಿಡಿ ಮಾರಾಟ ಮಾಡಿರೋದು ನಿಜಕ್ಕೂ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಬೆಳವಣಿಗೆ. ಜಿಲ್ಲೆ ಜಿಲ್ಲೆಗಳಿಗೆ ಹೋಗಿ ಆಡಿಯೋ ಸಿಡಿ ಮಾರಾಟ ಮಾಡಿ ವಿಭಿನ್ನ ಪ್ರಯತ್ನ ಮಾಡ್ತಿರೋ ಚಿತ್ರತಂಡಕ್ಕೆ ನಾವು ಮೆಚ್ಚುಗೆ ಸೂಚಿಸಲೇಬೇಕು.

ಕೆ.ಟಿ.ಎಂ ಶ್ರೀನಿವಾಸ ಆಕ್ಷನ್ ಕಟ್ ಹೇಳಿರುವ ಚಿತ್ರದ ಪಾತ್ರವರ್ಗದಲ್ಲಿ ಅವಿನಾಶ್ ನರಸಿಂಹರಾಜು, ಶ್ರೀ ಶ್ರುತಿ, ಸುರೇಶ್ ಮಂಗಳೂರು, ವಿದ್ಯಾ ಮೂರ್ತಿ, ನಾಗೇಂದ್ರ ಶಾ, ಕುಮುದಾ ಹಾಗೂ ಮಿತ್ರ ಮುಂತಾದವರಿದ್ದಾರೆ. ಹೊಸಬರ ರೊಮ್ಯಾಂಟಿಕ್ ಚಿತ್ರ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ.

English summary
Upcoming Kannada movie 'Ee Dil Helidhe Ni Benkantha' creates new record. Before audio cd release 25,000 cd's are sold out says the team. Music by Satish Aaryan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada