For Quick Alerts
  ALLOW NOTIFICATIONS  
  For Daily Alerts

  ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಗಾಯಕ ದಲೇರ್ ಮೆಹಂದಿಗೆ ಜೈಲು ಸಜೆ

  |

  ಜನಪ್ರಿಯ ಗಾಯಕ ದಲೇರ್ ಮೆಹಂದಿಗೆ ಎರಡು ವರ್ಷ ಜೈಲು ಸಜೆ ವಿಧಿಸಲಾಗಿದೆ. 2003 ರ ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬಿನ ಪಟಿಯಾಲಾ ನ್ಯಾಯಾಲಯ ಈ ತೀರ್ಪು ನೀಡಿದೆ.

  ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2018 ರಲ್ಲಿ ಇದೇ ನ್ಯಾಯಾಲಯವು ದಲೇರ್ ಮೆಹಂದಿಗೆ ಶಿಕ್ಷೆ ವಿಧಿಸಿತ್ತು. ಆ ತೀರ್ಪಿನ ಮೇಲ್ಮನವಿಯ ವಿಚಾರಣೆ ಮುಗಿದು ಇದೀಗ ಎರಡು ವರ್ಷದ ಸಜೆಯನ್ನು ನ್ಯಾಯಾಲಯವು ಖಾಯಂಗೊಳಿಸಿದೆ.

  2003 ರಲ್ಲಿ ದಲೇರ್ ಮೆಹಂದಿ ಹಾಗೂ ಅವರ ಸಹೋದರ ಶಂಶೇರ್ ಮೆಹಂದಿ (ನಿಧನ ಹೊಂದಿದ್ದಾರೆ) ಹಾಗೂ ಇನ್ನಿಬ್ಬರ ವಿರುದ್ಧ ಮಾನವ ಕಳ್ಳಸಾಗಣೆಯ ದೂರು ದಾಖಲಾಗಿತ್ತು. ಆ ನಂತರ ಇವರ ವಿರುದ್ಧ ಇದೇ ರೀತಿಯ ಒಟ್ಟು 35 ಪ್ರಕರಣಗಳು ದಾಖಲಾದವು. ತನಿಖೆ ನಡೆಸಿದ ಸದಾರ್ ಪಟಿಯಾಲಾ ಪೊಲೀಸ್ ಠಾಣೆ ಅಧಿಕಾರಿಗಳು ಚಾರ್ಜ್‌ ಶೀಟ್ ಸಲ್ಲಿಸಿದ್ದರು.

  ದೂರುದಾರರ ಪ್ರಕಾರ, ದಲೇರ್ ಮೆಹಂದಿಯು ಹಲವು ಜನರಿಂದ ಲಕ್ಷಾಂತರ ರುಪಾಯಿ ಹಣ ಪಡೆದು ಅವರನ್ನು ಅಕ್ರಮವಾಗಿ ವಿದೇಶಗಳಿಗೆ ಕರೆದುಕೊಂಡು ಹೋಗುತ್ತಿದ್ದರಂತೆ. ತಮ್ಮ ಕಾನ್ಸರ್ಟ್‌ಗಳಿಗಾಗಿ ವಿದೇಶಗಳಿಗೆ ಹೋಗುತ್ತಿದ್ದ ದಲೇರ್ ಮೆಹಂದಿ ಕಾನ್ಸರ್ಟ್‌ನ ತಂಡದ ಸದಸ್ಯರೆಂದು ಸುಳ್ಳು ಮಾಹಿತಿ ನೀಡಿ ಇಲ್ಲಿಂದ ಅಕ್ರಮವಾಗಿ ಜನರನ್ನು ವಿದೇಶಗಳಿಗೆ ಕರೆದುಕೊಂಡು ಹೋಗುತ್ತಿದ್ದರು.

  ಸಾಮಾನ್ಯವಾಗಿ ಕೆನಡಾ, ಅಮೆರಿಕ ಇನ್ನಿತರೆ ಕಡೆಗಳಿಗೆ ಹೀಗೆ ಅಕ್ರಮವಾಗಿ ಜನರನ್ನು ಸಾಗಣೆ ಮಾಡುತ್ತಿದ್ದ ದಲೇರ್ ಮೆಹಂದಿ ಹಾಗೂ ಆತನ ಸಹೋದರ ಹಾಗೂ ಇನ್ನಿಬ್ಬರು, ಇಂಥಹವರಿಂದ 12 ಲಕ್ಷ, 15 ಲಕ್ಷ ಹೀಗೆ ದೊಡ್ಡ ಮೊತ್ತವನ್ನು ವಸೂಲಿ ಮಾಡುತ್ತಿದ್ದರಂತೆ!

  ದೂರು ದಾಖಲಾದ ಬಳಿಕ ದೆಹಲಿಯ ಕನೌಟ್‌ ಪ್ಲೇಸ್‌ನಲ್ಲಿರುವ ದಲೇರ್ ಮೆಹಂದಿಯ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. 2018 ರಲ್ಲಿಯೇ ಈ ಪ್ರಕರಣದಲ್ಲಿ ದಲೇರ್ ಮೆಹಂದಿಗೆ ಶಿಕ್ಷೆಯಾಗಿತ್ತು. ಆದರೆ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಿ ಜಾಮೀನು ಪಡೆದು ದಲೇರ್ ಮೆಹಂದಿ ಹೊರ ಬಂದಿದ್ದರು. ಈಗ ಮತ್ತೆ ಜೈಲಿಗೆ ಹೋಗಬೇಕಿದೆ ದಲೇರ್ ಮೆಹಂದಿ.

  ದಲೇರ್ ಮೆಹಂದಿ ಪಂಜಾಬ್ ಹಾಗೂ ಬಾಲಿವುಡ್‌ನ ಖ್ಯಾತ ಸಂಗೀತಗಾರರಾಗಿದ್ದಾರೆ. ದಲೇರ್ ಮೆಹಂದಿಯ 'ಬೋಲೊ ತಾರಾರಾರಾ', 'ತುಣುಕ್ ತುಣುಕ್' ಹಾಡುಗಳು ಆಲ್‌ ಟೈಮ್ ಹಿಟ್ ಲಿಸ್ಟ್‌ನಲ್ಲಿವೆ. ಆಲ್ಬಂ ಹಾಡುಗಳು ಮಾತ್ರವೇ ಅಲ್ಲದೆ ಹಲವು ಸಿನಿಮಾಗಳಲ್ಲಿಯೂ ದಲೇರ್ ಮೆಹಂದಿ ಹಾಡಿದ್ದಾರೆ. ರಾಜಕೀಯದಲ್ಲೂ ಸಕ್ರಿಯರಾಗಿರುವ ದಲೇರ್ ಮೆಹಂದಿ 2019 ರಲ್ಲಿ ಬಿಜೆಪಿ ಸೇರಿದ್ದರು.

  English summary
  Famous singer Daler Mehandi sentenced jail in 2003 human trafficking case. Punjab's Patiala court ordered to sent Daler Mehandi for 2 years of Jail.
  Friday, July 15, 2022, 9:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X