»   » ಗ್ರ್ಯಾಮಿ ಪ್ರಶಸ್ತಿ ರಿಕ್ಕಿ ಕೇಜ್, ಕೀರ್ತಿ ನಾಮಿನೇಟ್

ಗ್ರ್ಯಾಮಿ ಪ್ರಶಸ್ತಿ ರಿಕ್ಕಿ ಕೇಜ್, ಕೀರ್ತಿ ನಾಮಿನೇಟ್

Posted By:
Subscribe to Filmibeat Kannada

ಬೆಂಗಳೂರು ಮೂಲದ ಸಂಗೀತ ನಿರ್ದೇಶಕ ರಿಕ್ಕಿ ಕ್ರೇಜ್​ ಅವರ ಮ್ಯೂಸಿಕ್ ಆಲ್ಬಂ ಈ ಬಾರಿಯ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಸುತ್ತಿಗೆ ನಾಮನಿರ್ದೇಶನಗೊಂಡಿದೆ. ರಿಕ್ಕಿ ಜೊತೆಗೆ ಬೆಳಗಾವಿಯ ಪ್ರತಿಭೆ ಕೀರ್ತಿ ನಾರಾಯಣ್ ಕೂಡಾ ಪ್ರಶಸ್ತಿಯ ಕನಸು ಹೊತ್ತಿದ್ದಾರೆ.

ಭಾರತದ ರಿಕ್ಕಿ ಹಾಗೂ ದಕ್ಷಿಣ ಆಫ್ರಿಕಾದ ಕೊಳಲುವಾದಕ ವೊಟರ್ ಕೆಲ್ಲರ್ ಮನ್ ಅವರ ಹೊಸ ಆಲ್ಬಂ ‘ವಿಂಡ್ಸ್ ಆಫ್ ಸಂಸರ‘ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನವಾಗಿದೆ. ಬೆಸ್ಟ್​ ನ್ಯೂ ಏಜ್​ ಆಲ್ಬಂ ವಿಭಾಗದಲ್ಲಿ ಕ್ರೇಜ್​​ ಆಲ್ಬಂ ಸ್ಪರ್ಧಿಸುತ್ತಿದೆ. ಕೇಜ್ ಅವರ ಸಂಗೀತ ಸಂಯೋಜನೆಯ ಭಾಗವಾಗಿರುವ ಕೀರ್ತಿ ನಾರಾಯಣ್ ಅವರು ಕೀ ಬೋರ್ಡ್ ವಾದಕ ಹಾಗೂ ಸಂಗೀತ ಪರಿಕರ ಸಂಯೋಜನೆಯ ಹೊಣೆಹೊತ್ತಿದ್ದರು.

ಯುಎಸ್​​​​ ಬಿಲ್​ಬೋರ್ಡ್​ ಚಾಟ್​​​ನಲ್ಲಿ ಅಗ್ರಸ್ಥಾನ ಪಡೆದಿರುವ ಈ ಆಲ್ಬಂ 2015ರ ಬೆಸ್ಟ್​ ನ್ಯೂ ಏಜ್​ ಆಲ್ಬಂ ವಿಭಾಗಕ್ಕೆ ನಾಮನಿರ್ದೇಶನವಾಗಿದೆ. ಇದೇ ಮೊದಲ ಬಾರಿಗೆ ಈ ವಿಭಾಗಕ್ಕೆ ಭಾರತದ ಆಲ್ಬಂ ಆಯ್ಕೆಯಾಗಿದೆ.

ಸುಮಾರು 10 ವರ್ಷಗಳ ಪರಿಶ್ರಮ ಈಗ ಫಲ ನೀಡುತ್ತಿದೆ. ರಿಕ್ಕಿ ಅವರ ಸ್ವರಜ್ಞಾನಕ್ಕೆ ತಕ್ಕಂತೆ ಸಂಯೋಜನೆ ಮಾಡುವ ಹೊಣೆ ನಮ್ಮ ಮೇಲಿತ್ತು. ನಾನು ಅದನ್ನು ಉಳಿಸಿಕೊಂಡ ನಂಬಿಕೆಯಿದೆ ಎಂದು ಕೀರ್ತಿ ಹೇಳಿದ್ದಾರೆ.

Album Winds of Samsara Ricky Kej and Wouter Kellerman with Keerthy Narayan

ಕಳೆದ ಹತ್ತು ವರ್ಷಗಳಿಂದ ರಿಕ್ಕಿ ಕೇಜ್ ಹಾಗೂ ಕೀರ್ತಿ ಜೊತೆ ಜೊತೆಯಾಗಿ ರಾಗ ತಾಳ ಸ್ವರ ಶ್ರುತಿ ಮೇಳದಲ್ಲಿ ಮುಳುಗಿದ್ದಾರೆ. ನನ್ನ ಎಲ್ಲಾ ಯೋಜನೆಗಳಿಗೆ ಕೀರ್ತಿ ಬೆನ್ನೆಲುಬು ಎಂದು ರಿಕ್ಕಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕೇರಳ ಮೂಲದ ಕೀರ್ತಿ ಅವರು ತಮ್ಮ ನೆಲೆಯನ್ನು ಬೆಳಗಾವಿಯಲ್ಲಿ ಕಂಡುಕೊಂಡಿದ್ದಾರೆ. ರಿಕ್ಕಿಯಂತೆ ಕೀರ್ತಿ ಕೂಡಾ ಸಂಗೀತ ಸಂಯೋಜನೆಯಲ್ಲಿ ಪಳಗಿದ್ದಾರೆ. ಕನ್ನಡ, ಹಿಂದಿ, ಮಲಯಾಳಂ ಚಿತ್ರಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ.

ಇನ್ನು ಬೆಂಗಳೂರಿನ ಪ್ರತಿಭೆ ರಿಕ್ಕಿ ಕೇಜ್ ನಿಮಗೆಲ್ಲ ಗೊತ್ತೇ ಇದೆ. ರಮೇಶ್ ಅರವಿಂಡ್ ಮೂಲಕ ಆಕ್ಸಿಡೆಂಟ್‌ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ರಿಕ್ಕಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು, ನಂತರ ವೆಂಕಟ ಇನ್ ಸಂಕಟ, ಕ್ರೇಜಿ ಕುಟುಂಬ, ಒಂದು ರುಪಾಯಿಯಲ್ಲಿ ಎರಡು ಪ್ರೀತಿ ಚಿತ್ರಗಳಿಗೆ ಸಂಗೀತ ನೀಡಿದ್ದರು.

Keerthy Narayan

3 ಸಾವಿರಕ್ಕೂ ಅಧಿಕ ರೇಡಿಯೋ ಹಾಗೂ ಟಿವಿ ಜಿಂಗಲ್ಸ್ ಗೆ ಸಂಗೀತ ನೀಡಿದವರು. 2011ರ ವಿಶ್ವಕಪ್ ಉದ್ಘಾಟನಾ ಸಮಾರಂಭಕ್ಕೂ ರಿಕ್ಕಿದೇ ಮ್ಯೂಸಿಕ್. ಸುಮಾರು 13ಕ್ಕೂ ಅಧಿಕ ಅಲ್ಬಂ ಹೊರ ತಂದಿರುವ ರಿಕ್ಕಿಗೆ ಈಗ 57ನೇ ಗ್ರ್ಯಾಮಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ.

2002ರಲ್ಲಿ ಸಂಗೀತ ಜಗತ್ತಿನಲ್ಲಿ ಸಿತಾರ್‌ ವಾದನದ ಮೂಲಕ ತಮ್ಮದೇ ಛಾಪು ಮೂಡಿಸಿರುವ ಪಂಡಿತ್‌ ರವಿಶಂಕರ್‌ಗೆ ಸಂಗೀತ ಕ್ಷೇತ್ರದ ಹೆಮ್ಮೆಯ ಗ್ರ್ಯಾಮಿ ಪ್ರಶಸ್ತಿ ಸಂದಿದ್ದನ್ನು ಇಲ್ಲಿ ಸ್ಮರಿಸಬಹುದು. ನಂತರ ತಬಲಾ ಮಾಂತ್ರಿಕ ಝಾಕೀರ್ ಹುಸೇನ್, ವಿಶ್ವ ಮೋಹನ್, 2010ರಲ್ಲಿ ಎ.ಆರ್ ರೆಹಮಾನ್ ಈ ಪ್ರಶಸ್ತಿ ಗೆದ್ದಿದ್ದಾರೆ. 57ನೇ ಗ್ರ್ಯಾಮಿ ಪ್ರಶಸ್ತಿ ನಾಮಿನೇಷನ್ ಪೂರ್ಣ ಪಟ್ಟಿ ಇಲ್ಲಿದೆ ಓದಿ

English summary
The Album Winds of Samsara is an album of Ricky Kej and Wouter Kellerman has been nominated for the Grammy awards 2015 under the New Age music category, and Keerthy Narayan, from Belagavi is also was part of the team.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada