For Quick Alerts
  ALLOW NOTIFICATIONS  
  For Daily Alerts

  ದೊಡ್ಡ ಪ್ರತಿಕ್ರಿಯೆ ಪಡೆದ 'ಹಫ್ತಾ' ಟೈಟಲ್ ಸಾಂಗ್

  |

  'ಹಫ್ತಾ ರೇ ಹಫ್ತಾ..' ಇದು 'ಹಫ್ತಾ' ಸಿನಿಮಾದ ಟೈಟಲ್ ಸಾಂಗ್. ಕೆಲ ದಿನಗಳ ಹಿಂದೆ ಬಿಡುಗಡೆಯಾದ ಈ ಹಾಡು ಈಗ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.

  ಹಾಡು ಬಿಡುಗಡೆಯಾದ ಕೆಲವೇ ದಿನದಲ್ಲಿ 1 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದಿದೆ. ದೊಡ್ಡ ಸ್ಟಾರ್ ಇಲ್ಲದೆ ಇದ್ದರೂ ಹಾಡು ಯೂ ಟ್ಯೂಬ್ ನಲ್ಲಿ ಹಿಟ್ ಆಗುತ್ತಿದೆ. ಪಕ್ಕಾ ಮಾಸ್ ಆಗಿರುವ ಈ ಹಾಡಿನ ಮ್ಯೂಸಿಕ್ ಮತ್ತು ಲಿರಿಕ್ಸ್ ಕ್ಯಾಜಿಯಾಗಿದೆ.

  'ಅಮರ್' ಚಿತ್ರದ ದರ್ಶನ್ - ರಚಿತಾ ಹಾಡಿನ ರಿಲೀಸ್ ಗೆ ಡೇಟ್ ಫಿಕ್ಸ್

  ಕವಿರಾಜ್ ಈ ಹಾಡನ್ನು ಬರೆದಿದ್ದಾರೆ. ಗೌತಂ ಶ್ರೀವತ್ಸ ಹಾಡಿಗೆ ಸಂಗೀತ ನೀಡಿದ್ದಾರೆ. ಟೈಟಲ್ ಹಾಡಿಗೆ ಮ್ಯೂಸಿಕ್ ಮಾತ್ರವಲ್ಲದೆ, ಸಿನಿಮಾಗೆ ಹಿನ್ನಲೆ ಸಂಗೀತವನ್ನೂ ಅವರು ನೀಡಿದ್ದಾರೆ. 50ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿರುವ ಗೌತಂ ಶ್ರೀವತ್ಸ ಹಂಸಲೇಖ ಹಾಗೂ ರವಿಚಂದ್ರನ್ ರ ಜೊತೆಗೆ ಕೆಲಸ ಮಾಡಿದ್ದಾರೆ.

  ಇದೊಂದು ಭೂಗತ ಲೋಕದ ಹಿನ್ನಲೆಯಲ್ಲಿ ನಡೆಯುವ ಕಥೆ ಹೊಂದಿದೆ. ಈಗಾಗಲೇ ಅನೇಕ ಚಿತ್ರಗಳಲ್ಲಿ ಸಣ್ಣ ಸಣ್ಣ ಪಾತ್ರ ಮಾಡಿದ್ದ ವರ್ಧನ್ ಈಗ ನಾಯಕನಾಗಿದ್ದಾರೆ. ರಾಘವ್ ನಾಗ್ ಬಿಂಬ ಶ್ರೀ ನೀನಾಸಂ ಹೀಗೆ ಸಾಕಷ್ಟು ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

  ಮೈತ್ರಿ ಮಂಜುನಾಥ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಪ್ರಕಾಶ್ ಹೆಬ್ಬಾಳ ಚಿತ್ರದ ನಿರ್ದೇಶನ ಮಾಡಿದ್ದಾರೆ.

  English summary
  'Haftha' kannada movie titel song getting good responses from audience. Gowtham Srivatsa gave music and Kaviraj wrote this song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X