»   » 'ಹಂಸಲೇಖ'ನಿಯಲ್ಲಿ ಮೂಡಿದ ಒಂದು ಪ್ರೇಮಗೀತೆ

'ಹಂಸಲೇಖ'ನಿಯಲ್ಲಿ ಮೂಡಿದ ಒಂದು ಪ್ರೇಮಗೀತೆ

Posted By:
Subscribe to Filmibeat Kannada

ಮನಮುಟ್ಟುವ ಸಂಗೀತ, ರಸವತ್ತಾದ ಸಾಹಿತ್ಯದ ಮೂಲಕ ಪ್ರೇಮಿಗಳ ಪಾಲಿಗೆ ಲವ್ ಗುರು ಆಗಿರುವ ಹಂಸಲೇಖ ಅವರ ಸಂಗೀತಕ್ಕೆ ಪರವಶರಾಗದವರಿಲ್ಲ. ಮೈಸೂರಿನವರಾದ ಹಂಸಲೇಖ ಅವರ ಮೂಲ ಹೆಸರು ಗೋವಿಂದರಾಜು ಗಂಗರಾಜು. 'ತ್ರಿವೇಣಿ'(1973) ಚಿತ್ರದ ಮೂಲಕ ಗೀತ ಸಾಹಿತಿಯಾಗಿ 'ರಾಮಚಂದ್ರ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಹಂಸಲೇಖ ಕನ್ನಡ ಚಿತ್ರರಂಗೆಕ್ಕೆ ಪದಾರ್ಪಣೆ ಮಾಡಿದರು.

ಕನ್ನಡ ಚಿತ್ರರಂಗದಲ್ಲಿ ಹೊಸ ಯುಗವನ್ನು ಪ್ರಾರಂಭಿಸಿದ ಮಹೋನ್ನತ ಸಂಗೀತ ನಿರ್ದೇಶಕರಲ್ಲಿ ಹಂಸಲೇಖ ಒಬ್ಬರು. ಪ್ರೇಮಲೋಕ ಚಿತ್ರದ ಮೂಲಕ ಹೊಸ ಅಲೆಯ ಸಂಗೀತವನ್ನು ಕೊಟ್ಟ ಖ್ಯಾತಿ ಹಂಸಲೇಖ ಅವರಿಗೆ ಸಲ್ಲುತ್ತದೆ. ಪ್ರೀತಿ, ಪ್ರೇಮ ಪ್ರಣಯ ಉಕ್ಕಿಸುವ ಸಾಹಿತ್ಯ ಸಂಗೀತದಿಂದ ಪ್ರೇಮಿಗಳ ಪಾಲಿನ ಲವ್ ಗುರು ಎನ್ನಿಸಿಕೊಂಡವರು. [ಹಂಸಲೇಖರ ಕಣ್ಣಲ್ಲಿ ನೀರು ತರಿಸಿದ ರವಿಚಂದ್ರನ್]

Happy birthday to musical legend Hamsalekha

ಒಂದು ದಶಕಕ್ಕೂ ಹೆಚ್ಚು ಕಾಲ 'ಪ್ರೇಮಲೋಕ' ಚಿತ್ರದ ಹಾಡುಗಳು ಪ್ರೇಮಿಗಳ ಪಾಲಿನ ಸುಪ್ರಭಾತವಾಗಿದ್ದವು. ಹಿಂದೂಸ್ತಾನಿ, ಕರ್ನಾಟಿಕ್ ಮತ್ತು ಪಾಶ್ಚಾತ್ಯ ಸಂಗೀತದ ಸಂಗಮನನ್ನು ಉಣಬಡಿಸಿ ಕನ್ನಡ ಚಿತ್ರರಸಿಕರ ಮನ ತಣಿಸಿದ ಮಹಾನ್ ಸಂಗೀತ ನಿರ್ದೇಶಕ ಹಂಸಲೇಖ. ಆಕಾಶದಾಗೆ ಯಾರೊ ಮಾಯಗಾರ ಚಿತ್ತಾರ ಮಾಡಿದಂತೆ ಹಂಸಲೇಖ ಹೀಗೆ ನೂರ್ಕಾಲ ಬರೆಯುತ್ತಿರಲಿ. ಹ್ಯಾಪಿ ಬರ್ತ್ ಡೇ ಹಂಸಲೇಖ.

ನಾದಬ್ರಹ್ಮ ಹಂಸಲೇಖ ಅವರಿಗೆ ಇಂದು (ಜೂ.23) ಹುಟ್ಟುಹಬ್ಬ ಸಂಭ್ರಮ. ಅರುವತ್ತಮೂರನೇ ವರ್ಷಕ್ಕೆ ಅಡಿಯಿಟ್ಟಿರುವ ಅವರ ಎಲ್ಲಾ ಗೀತೆಗಳು ಜನಮನವನ್ನು ರಂಜಿಸುತ್ತಿವೆ. ಅಂತಹ ಹಾಡುಗಳಲ್ಲಿ 'ನೀನು ನಕ್ಕರೆ ಹಾಲು ಸಕ್ಕರೆ' (1991) ಚಿತ್ರದ ಈ ಹಾಡು ನಿಮಗಾಗಿ.

<iframe width="600" height="360" src="//www.youtube.com/embed/LDNtrhGYW64?feature=player_detailpage" frameborder="0" allowfullscreen></iframe>
English summary
Kannada films music director and lyricist Hamsalekha celebrates 63rd birthday on 23rd June. He has composed music for over 300 feature films and has written lyrics for about the same number.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada