For Quick Alerts
  ALLOW NOTIFICATIONS  
  For Daily Alerts

  ಗಾಯಕಿ ಶ್ರೇಯಾಗೆ ಇಂದು ಉಲ್ಲಾಸದ ಹೂ ಮಳೆ

  By Rajendra
  |

  ಬಾಲಿವುಡ್ ನ ಸುಮಧುರ ಕಂಠ ಕನ್ನಿಕೆ ಶ್ರೇಯಾ ಘೋಷಾಲ್ ಅವರಿಗೆ ಮೂವತ್ತರ ಸಂಭ್ರಮ. ಶ್ರೇಯಾ ಘೋಷಾಲ್ ಹಾಡ್ತಿದ್ರೆ ಆ ಕಂಠಕ್ಕೆ ಕೋಗಿಲೆಯೂ ನಾಚಬೇಕು. ಬೆಂಗಾಲಿ ಬೆಡಗಿ ಶ್ರೇಯಾ ಬಹಳ ಬೇಗ ತನ್ನ ಕಂಠಸಿರಿಯಿಂದ ಗುರುತಿಸಿಕೊಂಡ ಚೆಲುವೆ. ಬಾಲಿವುಡ್ ನಲ್ಲಿ ಮೊದಲ ಸಿನಿಮಾಗೇ ರಾಷ್ಟ್ರ ಪ್ರಶಸ್ತಿ ಪಡ್ಕೊಂಡ ಗಾನಕೋಗಿಲೆ.

  ಶ್ರೇಯಾ ಹುಟ್ಟಿದ್ದು ಪಶ್ಚಿಮ ಬಂಗಾಲದಲ್ಲಿ. ಆದರೆ ಅಪ್ಪ ನ್ಯೂಕ್ಲಿಯರ್ ಎಂಜಿನಿಯರ್ ಆಗಿದ್ದರಿಂದ ರಾಜಸ್ತಾನದ ಕೋಟಾದಲ್ಲಿ ಬೆಳೆದ ಶ್ರೇಯಾ ಮುಂಬೈಗೆ ಬಂದ ನಂತರ ಸಂಗೀತ ಕಲಿಯೋಕೆ ಶುರುಮಾಡಿದ್ರು. ಶ್ರೇಯಾ ಘೋಷಾಲ್ ಹೆಸರಿಗೆ ತಕ್ಕಂತೆ ಈಗ ದೊಡ್ಡ ಶ್ರೆಯಸ್ಸನ್ನ ಪಡ್ಕೊಂಡಿರೋ ಚೆಲುವೆ.

  ನೋಡೋಕೂ ಸುಂದರವಾಗಿರೋ ಚೆಲುವೆ ಶ್ರೇಯಾ ನಟನೆಯಲ್ಲೂ ಕೂಡ ಸಿಕ್ಕ ಅವಕಾಶಗಳಲ್ಲಿ ಮಿಂಚಿದ್ದಾರೆ. ಶ್ರೇಯಾ ಘೋಷಾಲ್ ಕನ್ನಡಕ್ಕೆ ಅದ್ಭುತ ಅನ್ನಿಸೋ ಹಾಡುಗಳನ್ನ ಕೊಟ್ಟಿರೋ ಸುಮಧುರ ಸ್ವರದ ಮೋಡಿಗಾತಿ.

  ಕನ್ನಡದಲ್ಲಿ 2003ರಲ್ಲಿ 'ಪ್ಯಾರಿಸ್ ಪ್ರಣಯ' ಸಿನಿಮಾದಲ್ಲಿ ಕೃಷ್ಣ ನೀ ಬೇಗನೆ ಬಾರೋ ಅಂತ ಹಾಡೋಕೆ ಶುರು ಮಾಡಿದ ಶ್ರೇಯಾರನ್ನ ಶ್ರೇಯಾ ನೀ ಬೇಗನೆ ಬಾ ಅಂತ ಕನ್ನಡ ಮೋಸ್ಟ್ ವೆಲ್ಕಮ್ ಅಂದಿದೆ. ಈ ಚೆಲುವೆಯ ಇಂಟರೆಸ್ಟಿಂಗ್ ಸಂಗತಿಗಳು ನಿಮಗಾಗಿ.

  16ನೇ ವರ್ಷಕ್ಕೇ ರಾಷ್ಟ್ರ ಪ್ರಶಸ್ತಿ

  16ನೇ ವರ್ಷಕ್ಕೇ ರಾಷ್ಟ್ರ ಪ್ರಶಸ್ತಿ

  ಪಿಯುಸಿ ಓದ್ತಾ ಇರುವಾಗ್ಲೇ ಶ್ರೇಯಾ ಘೋಷಾಲ್ ಶಾರುಖ್, ಮಾಧುರಿ, ಐಶ್ವರ್ಯ ರೈ ಅಭಿನಯದ ಸಿನಿಮಾ ದೇವದಾಸ್ ಗೆ ಹಾಡಿದ್ದು. ಬಾಯ್ರೀ ಫೀಯಾ ಅನ್ನೋ ಆ ಮೊದಲ ಹಾಡಿಗೇ ರಾಷ್ಟ್ರ ಪ್ರಶಸ್ತಿ ಒಲಿದು ಬಂದಿತ್ತು.

  ಐಶ್ವರ್ಯಾಗೆ ಹಾಡೋದು ಅಂತ ನೆನೆದು ಥ್ರಿಲ್ಲಾಗಿದ್ರು

  ಐಶ್ವರ್ಯಾಗೆ ಹಾಡೋದು ಅಂತ ನೆನೆದು ಥ್ರಿಲ್ಲಾಗಿದ್ರು

  16 ವರ್ಷದ ಹುಡುಗಿ ಶ್ರೇಯಾ ಆಗಿನ್ನೂ ಹುಡುಗಾಟದ ವಯಸ್ಸು. ಶ್ರೇಯಾಗೆ ಮಿಸ್ ವರ್ಲ್ಡ್ ಐಶ್ವರ್ಯಾ ರೈ ಅಂದ್ರೆ ತುಂಬಾ ಇಷ್ಟ. ಐಶ್ವರ್ಯಾಗೆ ಹಾಡ್ತಿದ್ದೀನಿ ಅಂತ ಹಾಡೋ ಮೊದಲೇ ಥ್ರಿಲ್ಲಾಗಿದ್ರು ಶ್ರೇಯಾ.

  ನಾಲ್ಕು ರಾಷ್ಟ್ರ ಪ್ರಶಸ್ತಿಗಳು

  ನಾಲ್ಕು ರಾಷ್ಟ್ರ ಪ್ರಶಸ್ತಿಗಳು

  30 ವರ್ಷಕ್ಕೇ ನಾಲ್ಕು ರಾಷ್ಟ್ರಪ್ರಶಸ್ತಿಗಳನ್ನ ಪಡ್ಕೊಂಡ ಶ್ರೇಯಸ್ಸಿಗೆ ಮತ್ತೊಂದು ಉದಾಹರಣೆ ಬೇಕಿಲ್ಲ. ಶ್ರೇಯಾ 'ಸರಿಗಮಪ' ಸಿಂಗಿಂಗ್ ಕಾಂಪಿಟಿಷನ್ನಲ್ಲಿ ದೊಡ್ಡ ದೊಡ್ಡ ಸಂಗೀತ ಸಾಧಕರ ಮುಂದೆ ವಿನ್ನರ್ ಆಗಿ ಮಿಂಚಿದ ಗಾನಕೋಗಿಲೆ.

  ಅಲೋಚನೆ ಆರಾಧನೆ ಎಲ್ಲ ನಿಂದೇನೇ

  ಅಲೋಚನೆ ಆರಾಧನೆ ಎಲ್ಲ ನಿಂದೇನೇ

  ಕಳೆದ ವರ್ಷ ಬಂದ 'ರೋಮಿಯೋ' ಸಿನಿಮಾದ ಆಲೋಚನೆ ಆರಾಧನೆ ಹಾಡನ್ನ ಕೇಳಿ ನೀವು ಫಿದಾ ಆಗಿರ್ತೀರ. ಅದೂ ಕೂಡ ಶ್ರೇಯಾ ಘೋಷಾಲ್ ಕಂಠಸಿರಿಯಿಂದ ಬಂದ ಹಾಡು. ಈ ತರಹದ ಹಾಡುಗಳನ್ನ ಹಾಡೀನೇ ಕನ್ನಡದ ಸಂಗೀತ ನಿರ್ದೇಶಕರ ಆಲೋಚನೆ ಆರಾಧನೆ ಎಲ್ಲ ಶ್ರೇಯಾನೇ ಆಗಿದ್ದಾರೆ.

  ಸದಾ ನಿನ್ನ ದನಿಯಲಿ...

  ಸದಾ ನಿನ್ನ ದನಿಯಲಿ...

  ಕಳೆದ ವರ್ಷ ಬಂದ ಕಿಚ್ಚ ಸುದೀಪ್ ಅಭಿನಯದ 'ಬಚ್ಚನ್' ಸಿನಿಮಾದಲ್ಲಿ ಸದಾ ನಿನ್ನ ಕಣ್ಣಲಿ ಹಾಡನ್ನ ಹಾಡಿದ್ದ ಶ್ರೇಯಾ ಸದಾ ನಮ್ಮ ಕಿವಿಯಲ್ಲಿ ಸುಮಧುರ ಹಾಡುಗಳನ್ನ ಗುನುಗ್ತಿರ್ತಾರೆ

  ಮುಂಗಾರುಮಳೆಯಲ್ಲೂ ಶ್ರೇಯಾ ಕಮಾಲ್

  ಮುಂಗಾರುಮಳೆಯಲ್ಲೂ ಶ್ರೇಯಾ ಕಮಾಲ್

  ಮುಂಗಾರುಮಳೆ ಸಿನಿಮಾದಲ್ಲಿ ನಿಮ್ಮನ್ನ ಕಾಡೋ ಅರಳುತಿರು ಜೀವದ ಗೆಳೆಯ ಸಿನಿಮಾದಲ್ಲಿ ಕೂಡ ಶ್ರೇಯ ಕಂಠ ನಿಮ್ಮನ್ನ ಕಾಡುತ್ತೆ. ಇಂತಹಾ ಶ್ರೇಷ್ಠ ಸಂಗೀತದ ಸಾಧಕಿಗೆ ನಮ್ಮ ಕಡೆಯಿಂದ ಸಲಾಮ್. ಕನ್ನಡಕ್ಕೆ ಈ ಗಾನಕೋಗಿಲೆ ಮತ್ತಷ್ಟು ಹಾಡುಗಳನ್ನ ಕೊಡ್ಲಿ.

  English summary
  Many many Happy Returns of the day Shreya Ghoshal, the most melodious singers of this generation, the beautiful Bong babe turns 30 on 12th March. Her soulful voice will always bring life to every song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X