»   » ಗಣೇಶನ ಮುಂದೆ ಭಟ್ಟರ ಡ್ರಾಮಾ ಧ್ವನಿಸುರಳಿ

ಗಣೇಶನ ಮುಂದೆ ಭಟ್ಟರ ಡ್ರಾಮಾ ಧ್ವನಿಸುರಳಿ

Posted By:
Subscribe to Filmibeat Kannada
ಬಹುನಿರೀಕ್ಷಿತ ಭಟ್ಟರ 'ಡ್ರಾಮಾ' ಆಡಿಯೋ ರಿಲೀಸ್ ಗೆ ಕ್ಷಣಗಣನೆ ಆರಂಭವಾಗಿದೆ. ಈ ತಿಂಗಳಲ್ಲಿ (ಸೆಪ್ಟೆಂಬರ್) ಆಡಿಯೋ ಬಿಡುಗಡೆ ಮಾಡಿ ಮುಂದಿನ ತಿಂಗಳೇ ತೆರೆಗೆ ಬರುವ ಪ್ರಯತ್ನದಲ್ಲಿದೆ ಎಂದು ಡ್ರಾಮಾ ತಂಡ ಕೊಟ್ಟ ವಚನವನ್ನು ಉಳಿಸಿಕೊಳ್ಳುವತ್ತ ಹೆಜ್ಜೆ ಇರಿಸಿದೆ.

ಸೆ.21ರಂದು ಅಧಿಕೃತವಾಗಿ ಡ್ರಾಮಾದ ಧ್ವನಿಸುರಳಿ ಹೊರಬರುತ್ತಿದೆ. ಅದರೆ, ಇದಕ್ಕೂ ಮುನ್ನ ಬಸವನಗುಡಿ ಗಣೇಶೋತ್ಸವದಲ್ಲಿ ಚಿತ್ರದ ಹಾಡುಗಳ ಝಲಕ್ ನೀಡುವ ಭರವಸೆಯನ್ನು ಸಂಗೀತ ನಿರ್ದೇಶಕ ವಿ ಹರಿಕೃಷ್ಣ ನೀಡಿದ್ದಾರೆ.

ನಗರದ ಎಪಿಎಸ್ ಕಾಲೇಜು ಮೈದಾನದಲ್ಲಿ ನಡೆದಿರುವ 50ನೇ ವರ್ಷದ ಗಣೇಶೋತ್ಸವದಲ್ಲಿ ಗುರುವಾರ ವಿ ಹರಿಕೃಷ್ಣ ಸಂಗೀತ ಸಂಜೆಯಲ್ಲಿ ಯಶ್, ರಾಧಿಕಾ ಪಂಡಿತ್ ಅಭಿನಯದ ಡ್ರಾಮಾ ಸಂಗೀತ ಸುರಳಿ ಲೋಕಾರ್ಪಣೆ ಮಾಡಲಾಗುತ್ತದೆ.

ಕೆಲ ಕಾಲ ಇದೇ ಏರಿಯಾದಲ್ಲೇ ಇದ್ದ ಭಟ್ಟರು, ಹರಿಕೃಷ್ಣ ಪ್ಲ್ಯಾನ್ ಗೆ ಓಕೆ ಎಂದಿದ್ದಾರೆ. ಗಣೇಶೋತ್ಸವದಲ್ಲಿ ಯೋಗರಾಜ್ ಭಟ್ ಸೇರಿದಂತೆ ಹಲವಾರು ಸಿನಿ ತಾರೆಗಳು ಗಣೇಶನಿಗೆ ತಲೆಬಾಗಿ ಅಭಿಮಾನಿಗಳಿಗೆ ಆಡಿಯೋ ಮುದ್ರಿಕೆ ನೀಡುವ ಸಾಧ್ಯತೆಯಿದೆ.

ಸೆ.21 ರಂದು ಮತ್ತೊಮ್ಮೆ ಆಡಿಯೋ ರಿಲೀಸ್ ಮಾಡುತ್ತಾರೋ ಅಥವಾ ಬರೀ ಪತ್ರಿಕಾಗೋಷ್ಠಿ, ಗೆಟ್ ಟು ಗೆದರ್ ಪಾರ್ಟಿ ಮಾಡುತ್ತಾರೋ ಇನ್ನೂ ತಿಳಿದು ಬಂದಿಲ್ಲ.

ಭಟ್ಟರು ತಮ್ಮ ಎಂದಿನ ಶೈಲಿಗೆ ತಿಲಾಂಜಲಿ ನೀಡಿ ಹೊಸ ಬಗೆಯಲ್ಲಿ ಜನರ ಮುಂದೆ ಫ್ರೆಶ್ ಕತೆ ನೀಡುವ ಭರವಸೆ ನೀಡಿದ್ದಾರೆ. ಇನ್ನೂ ಹಾಡಿನ ವಿಷಯಕ್ಕೆ ಬಂದರೆ, ಹರಿಕೃಷ್ಣ ಎಂದಿನಂತೆ ಫಾರ್ಮುಲಕ್ಕೆ ತಕ್ಕಂತೆ ಸಾಂಗ್ಸ್ ನೀಡಿದ್ದಾರೆ.

ಆಡಿಯೋ ರಿಲೀಸ್ ಗೂ ಮುನ್ನ ಯುಟ್ಯೂಬ್ ನಲ್ಲಿ ಅಂಬರೀಷಣ್ಣ ಇರೋ ತತ್ವಪದ ಸದ್ದು ಮಾಡಿದ್ದಂತೂ ದಿಟ. ಗಣೇಶ ಕೃಪೆ ಭಟ್ಟರ ಡ್ರಾಮಾ ಕಂಪನಿಗೂ ಇರಲಿ.. ಹರಿಕೃಷ್ಣ ಸಂಗೀತ ಮತ್ತೊಮ್ಮೆ ಜನಮೆಚ್ಚುವಂತಾಗಲಿ ಎಂಬುದು ನಮ್ಮ ಹಾರೈಕೆ.

ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಡ್ರಾಮಾ ಚಿತ್ರದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿಯಲ್ಲದೇ ನೀನಾಸಂ ಸತೀಶ್ ಹಾಗೂ ಸಿಂಧು ಲೋಕನಾಥ್ ಕೂಡ ಇದ್ದಾರೆ.

ರಾಧಿಕಾ ಪಂಡಿತ್ ಹಾಗೂ ಯಶ್ ಇದೇ ಮೊದಲ ಬಾರಿಗೆ ಹಾಡೊಂದಕ್ಕೆ (ಬಿಟ್ಸ್ ಸಾಂಗ್) ಧ್ವನಿ ಕೊಟ್ಟಿರುವುದು ವಿಶೇಷ. ಮಂಡ್ಯ ಭಾಷೆಯನ್ನು ತಮ್ಮ ಡ್ರಾಮಾ ಚಿತ್ರದಲ್ಲಿ ಹೆಚ್ಚಾಗಿ ಬಳಸಿರುವ ಭಟ್ಟರು ಮೈಸೂರು ಭಾಷೆಗೂ ಅಲ್ಲಲ್ಲಿ ಜಾಗ ನೀಡಿದ್ದಾರಂತೆ.

English summary
The audio of Yogaraj Bhat's 'Drama' will be released in the 50th Ganesha festival celebrations to be held in Basavanagudi on 20th Evening where Hari Krishna and team is giving live music performance. Yograj bhat is likely to attend the audio release function.
Please Wait while comments are loading...