For Quick Alerts
  ALLOW NOTIFICATIONS  
  For Daily Alerts

  ಯೂಟ್ಯೂಬ್ ನಲ್ಲಿ ದಾಖಲೆ ಮಾಡಿದ ಕನ್ನಡ ಹಾಡುಗಳು

  |

  PayPall ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಉದ್ಯೋಗಿಗಳು ಫೆಬ್ರವರಿ 2005ರಲ್ಲಿ ಹುಟ್ಟು ಹಾಕಿದ ಸಾಮಾಜಿಕ ಅಂತರ್ಜಾಲ ವಿಡಿಯೋ ತಾಣ ಯೂಟ್ಯೂಬ್, ಇಂದು ಪ್ರಮುಖವಾಗಿ ಚಿತ್ರರಂಗಕ್ಕೆ ತಮ್ಮ ಹಾಡುಗಳನ್ನು ಮತ್ತು ಟ್ರೈಲರ್ ಗಳನ್ನು ವೀಕ್ಷಕರಿಗೆ ತಲುಪಿಸಲು ಇರುವ ಪ್ರಮುಖ ತಾಣವಾಗಿದೆ.

  ಯೂಟ್ಯೂಬ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಕನ್ನಡ ಹಾಡುಗಳು ಭಾರೀ ಸದ್ದು ಮಾಡುತ್ತಿರುವುದು ಸಂತೋಷದ ವಿಚಾರ. ಬರೀ ಹಿಂದಿ, ತಮಿಳು ಮತ್ತು ತೆಲುಗು ಚಿತ್ರಗಳ ಹಾಡಿಗಿದ್ದ ಈ ಟ್ರೆಂಡ್ ಕನ್ನಡದ ಹಾಡುಗಳಿಗೂ ವಿಸ್ತರಿಸಿಕೊಂಡಿದೆ.

  ಅದೆಷ್ಟೋ ಚಿತ್ರಗಳ ಹಾಡುಗಳು ಯೂಟ್ಯೂಬ್ ನಲ್ಲಿ upload ಮಾಡಿದ ತಕ್ಷಣ ವೈರಲ್ ನಂತೆ ಹರಡಿ ಜನಪ್ರಿಯತೆ ಗಳಿಸುತ್ತದೆ. ಹಾಡಿನಿಂದಲೇ ಪ್ರೇಕ್ಷಕರು ಚಿತ್ರಮಂದಿರದತ್ತ ಮುಖಮಾಡಿದ ಉದಾಹರಣೆಗಳಿವೆ.

  ಕೇವಲ ನಾಲ್ಕು ದಿನಗಳ ಹಿಂದೆ ಅಪ್ಲೋಡ್ ಮಾಡಿದ 'ಉಳಿದವರು ಕಂಡಂತೆ' ಚಿತ್ರದ ಟ್ರೈಲರಿಗೆ ಒಂದು ಲಕ್ಷಕ್ಕೂ ಹೆಚ್ಚಿನ views ಬಂದಿದೆ (ಎಂಥದಾ ಟ್ರೇಲರ್ ನೋಡಿಲ್ವ.. ಶೂಟ್ ಮಾಡ್ಬೇಕಾ!). ಅದೇ ರೀತಿ 'ಲೂಸಿಯಾ' ಚಿತ್ರದ ತಿನ್ ಬೇಡ ಕಮ್ಮಿ ಹಾಡೂ ಯೂಟ್ಯೂಬ್ ನಲ್ಲಿ ಭಾರೀ ಜನಪ್ರಿಯತೆ ಗಳಿಸಿತ್ತು.

  ಯೂಟ್ಯೂಬ್ ನಲ್ಲಿ ಸೂಪರ್ ಹಿಟ್ ಆದ ಟಾಪ್ ಟೆನ್ ಕನ್ನಡ ಹಾಡುಗಳು (as on 3.45PM, 13.12.13)

  ಗಂಡ ಹೆಂಡತಿ

  ಗಂಡ ಹೆಂಡತಿ

  ಶೈಲೇಂದ್ರ ಬಾಬು ನಿರ್ಮಿಸಿದ, ರವಿ ಶ್ರೀವತ್ಸ ನಿರ್ದೇಶನದ ಈ ಚಿತ್ರ ಸಂಜನಾಗೆ 'ಗಂಡ ಹೆಂಡತಿ ಸಂಜನಾ' ಎನ್ನುವ ಹೆಸರು ತಂದು ಕೊಟ್ಟಿತ್ತು. ಜುಲೈ 2006ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ತಿಲಕ್, ವಿಶಾಲ್ ಹೆಗ್ಡೆ, ಮಂಜು ಭಾಷಿಣಿ ಪ್ರಮುಖ ತಾರಾಗಣದಲ್ಲಿದ್ದರು. ಈ ಚಿತ್ರದ 'ನಿದೆರೆಗು ರಜಾ' ಹಾಡಿಗೆ ಇದುವರೆಗೆ 53,31,454 views ಬಂದಿದೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ.

  ಜೂಲಿ

  ಜೂಲಿ

  ಕೆಸಿಎನ್ ಮೋಹನ್ ನಿರ್ಮಿಸಿದ ಈ ಚಿತ್ರವನ್ನು ಪೂರ್ಣಿಮಾ ಮೋಹನ್ ನಿರ್ದೇಶಿಸಿದ್ದರು. ನಟಿ ಕಮ್ ಸಂಸದೆ ರಮ್ಯಾ, ಡಿನೊ ಮರಿಯೋ, ಸಂದೀಪ್ ಮಲಾನಿ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರ 2006ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ 'ಢವಢವ ಎದೆಯಲಿ' ಹಾಡಿಗೆ ಇದುವರೆಗೆ 19,26,872 views ಬಂದಿದೆ. ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ.

  ಗೋವಿಂದಾಯ ನಮಃ

  ಗೋವಿಂದಾಯ ನಮಃ

  ಪವನ್ ಒಡೆಯರ್ ನಿರ್ದೇಶಿಸಿ ಸುರೇಶ್ ನಿರ್ಮಿಸಿದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಕೋಮಲ್ ಕುಮಾರ್, ಪರುಲ್ ಯಾದವ್, ರೇಖಾ ವೇದವ್ಯಾಸ್ ಇದ್ದಾರೆ. 2012ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಗುರುಕಿರಣ್ ಅವರ ಸಂಗೀತವಿದೆ. ಈ ಚಿತ್ರದ 'ಪ್ಯಾರ್ಗೆ ಆಗ್ಬಿಟ್ಟೈತೆ' ಹಾಡಿಗೆ 10,30,086 views ಬಂದಿದೆ.

  ಮುರಳಿ ಮೀಟ್ಸ್ ಮೀರಾ

  ಮುರಳಿ ಮೀಟ್ಸ್ ಮೀರಾ

  ಮಹೇಶ್ ರಾವ್ ನಿರ್ದೇಶನದ ಈ ಚಿತ್ರವನ್ನು ಯೋಗೀಶ್ ಹುಣಸೂರು ನಿರ್ಮಿಸಿದ್ದಾರೆ. ಪ್ರಜ್ವಲ್ ದೇವರಾಜ್, ಹರ್ಷಿಕಾ ಪೂಣಚ್ಚ, ರೀಮಾ ವೋಹ್ರಾ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರ 2011ರಲ್ಲಿ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಅಭಿಮಾನ್ ರಾಯ್ ಸಂಗೀತ ನೀಡಿದ್ದಾರೆ. ಈ ಚಿತ್ರದ 'ನೀ ನಾನದೇ ನಾ' ಹಾಡಿಗೆ ಇದುವರೆಗೆ 8,75,150 views ಬಂದಿದೆ.

  ಮುಂಗಾರು ಮಳೆ

  ಮುಂಗಾರು ಮಳೆ

  ನಿರ್ದೇಶಕ ಯೋಗರಾಜ್ ಭಟ್ ಅವರ ಸಿನಿಮಾ ಜೀವನಕ್ಕೆ ಹೊಸ ಆಯಾಮವನ್ನು ನೀಡಿದ ಚಿತ್ರ. ಕೃಷ್ಣಪ್ಪ ನಿರ್ಮಿಸಿದ್ದ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡಿದ್ದರು. 2006ರಲ್ಲಿ ಬಿಡುಗಡೆಯಾದ ಈ ಚಿತ್ರದ 'ಅನಿಸುತಿದೆ ಯಾಕೋ ಇಂದು' ಹಾಡಿಗೆ 7,28,458 views ಬಂದಿದೆ.

  ಕರೋಡ್ ಪತಿ

  ಕರೋಡ್ ಪತಿ

  ಎಸ್ ಎನ್ ಸುರೇಶ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಸಿ ರಮೇಶ್ ನಿರ್ದೇಶಿಸುತ್ತಿದ್ದಾರೆ. ಆದಿಯಮಾನ್ ಸಂಗೀತ ನೀಡಿರುವ ಈ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಕೋಮಲ್ ಕುಮಾರ್ ನಾಯಕನಾಗಿ ನಟಿಸಿದ ಈ ಚಿತ್ರದ 'ಸರಳ..ಸರಳಾ' ಹಾಡಿಗೆ ಇದುವರೆಗೆ 6,81,573 views ಬಂದಿದೆ.

  ಆಪ್ತಮಿತ್ರ

  ಆಪ್ತಮಿತ್ರ

  ಪಿ ವಾಸು ನಿರ್ದೇಶನದ ದ್ವಾರಕೀಶ್ ನಿರ್ಮಿಸಿದ ಈ ಚಿತ್ರಕ್ಕೆ ಗುರುಕಿರಣ ಸಂಗೀತ ನೀಡಿದ್ದಾರೆ. ಡಾ. ವಿಷ್ಣುವರ್ಧನ್, ರಮೇಶ್, ಸೌಂದರ್ಯ, ಪ್ರೇಮಾ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರ 2004ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ 'ರಾ..ರಾ..ಸರಸಕು ರಾ' ಹಾಡಿಗೆ 6,21,876 views ಬಂದಿದೆ.

  ಪಾರಿಜಾತ

  ಪಾರಿಜಾತ

  ಪರಮೇಶ್ ನಿರ್ಮಿಸಿದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ದಿಗಂತ್, ಐಂದ್ರಿತಾ ರೇ ಇದ್ದಾರೆ. ಪ್ರಭು ಶ್ರೀನಿವಾಸ್ ನಿರ್ದೇಶನದ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. 2012ರಲ್ಲಿ ಬಿಡುಗಡೆಯಾದ ಈ ಚಿತ್ರದ 'ನೀ ಮೋಹಿಸು' ಹಾಡಿಗೆ ಇದುವರೆಗೆ 5,84,446 views ಬಂದಿದೆ.

  ಸವಾರಿ

  ಸವಾರಿ

  ಜೇಕಬ್ ವರ್ಗೀಸ್ ನಿರ್ದೇಶನದ ಈ ಚಿತ್ರದ ನಿರ್ಮಾಪಕರು ರಾಮೋಜಿ ರಾವ್. ಮಣಿಕಾಂತ್ ಕದ್ರಿ ಸಂಗೀತ ನೀಡಿದ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ರಘು ಮುಖರ್ಜಿ, ಕಾಮ್ಲಿನಿ ಮುಖರ್ಜಿ, ಸಾಧು ಕೋಕಿಲ ಇದ್ದಾರೆ. ಈ ಚಿತ್ರದ 'ಮರಳಿ ಮರೆಯಾಗಿ' ಹಾಡಿಗೆ ಇದುವರೆಗೆ 5,15,980 views ಬಂದಿದೆ.

  ಪ್ರೇಮಲೋಕ

  ಪ್ರೇಮಲೋಕ

  ರವಿಚಂದ್ರನ್ ನಿರ್ದೇಶಿಸಿ, ನಿರ್ಮಿಸಿ, ನಾಯಕನಾಗಿ ನಟಿಸಿದ್ದ ಈ ಚಿತ್ರ 1987ರಲ್ಲಿ ಬಿಡುಗಡೆಯಾಗಿತ್ತು. ಜೂಹಿ ಚಾವ್ಲಾ, ಲೀಲಾವತಿ, ಲೋಕೇಶ್ ಪ್ರಮುಖ ತಾರಾಗಣದಲ್ಲಿದ್ದ ಈ ಚಿತ್ರಕ್ಕೆ ಹಂಸಲೇಖಾ ಸಂಗೀತ ನೀಡಿದ್ದರು. ಈ ಚಿತ್ರದ 'ನೋಡಮ್ಮ ಹುಡುಗಿ' ಹಾಡಿಗೆ ಇದುವರೆಗೆ 4,72,123 view ಬಂದಿದೆ.

  English summary
  The list of highest viewed Kannada songs in Youtube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X