»   » ಇಡ್ಲಿ-ವಡೆಯಿಂದ 'ಜಾನು'ಗೆ ಹಾಡು ಬರೆದ ಭಟ್ಟರು

ಇಡ್ಲಿ-ವಡೆಯಿಂದ 'ಜಾನು'ಗೆ ಹಾಡು ಬರೆದ ಭಟ್ಟರು

Posted By:
Subscribe to Filmibeat Kannada

ಜಾನು ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಿದೆ. ಅದನ್ನೇ ಬಿಡುಗಡೆ ಮಾಡಿದ್ದು ಯೋಗರಾಜ್ ಭಟ್. ಹಾಡುಗಳು ತುಂಬಾ ಚೆನ್ನಾಗಿವೆ ಎಂಬ ಪ್ರತಿಕ್ರಿಯೆ ಎಲ್ಲೆಡೆ ಕೇಳಿಬರುತ್ತಿದೆ. ಪ್ರೀತಂ ಗುಬ್ಬಿಯ ಈ ಚಿತ್ರಕ್ಕೆ ಹಾಡು ಬರೆದಿದ್ದು 'ಜಾನಿ ಮೇರಾ ನಾಮ್' ನಂತರ ಮತ್ತೊಮ್ಮೆ ಅದೇ ಭಟ್ಟರು. ಅವರು ಹಾಡು ಬರೆಯುವುದರಲ್ಲಿ ಎತ್ತಿದ ಕೈ ಎಂಬುದು ಎಲ್ಲರಿಗೂ ಗೊತ್ತು. ಅವರ ಹಾಡುಗಳೇ ಪರಸ್ಪರ ಪೈಪೋಟಿ ನೀಡಿ ಒಂದು ಮೇಲೆ, ಇನ್ನೊಂದು ಕೆಳಗೆ ಆಗಿವೆ ಅಷ್ಟೇ.

ಇಂಥಹ ಭಟ್ಟರು ಯಶ್ ಹಾಗೂ ದೀಪಾ ಸನ್ನಿಧಿ ಜೋಡಿಯ ಜಾನು ಚಿತ್ರಕ್ಕೆ ಹಾಡುಬರೆದು ಕೊಟ್ಟಿದ್ದೂ ನಿಜ, ಹಾಡುಗಳು ತೀರಾ ಚೆನ್ನಾಗಿರುವುದೂ ನಿಜ. ಆದರೆ ಅಷ್ಟೊಂದು ಚೆನ್ನಾಗಿ ಹಾಡುಬರೆಯಲು ಭಟ್ಟರಿಗೆ ಸ್ಪೂರ್ತಿಯಾದದ್ದು ಇಡ್ಲಿ-ವಡೆಯಂತೆ. ಇದನ್ನು ಸ್ವತಃ ಭಟ್ಟರೇ ಆಡಿಯೋ ರಿಲೀಸ್ ವೇಳೆ ಬಹಿರಂಗವಾಗಿಯೇ ಹೇಳಿದ್ದಾರೆ. ಆದರೆ ಇಡ್ಡಿ-ವಡೆ ತಿಂದವರೆಲ್ಲಾ ಭಟ್ಟರಂತೆ ಹಾಡುಬರೆಯಲಾಗುವುದಿಲ್ಲ, ಅದನ್ನು ಮರೆಯಲಾಗುವುದಿಲ್ಲ.

ಅದೇನೆ ಇರಲಿ, ಭಟ್ಟರಿಗೆ ಅಷ್ಟೊಂದು ಮೂಡ್ ಚೆನ್ನಾಗಿ ಬರಲು ಕಾರಣವಾದ ಆ ಇಡ್ಡಿ-ವಡೆಯನ್ನು ಅಶ್ವಿನಿ ಸ್ಟುಡಿಯೋದಲ್ಲಿ ಹಾಡು ಬರೆಯುವುದಕ್ಕೆ ಕೂತಾಗ ಅಲ್ಲಿಯೇ ಸಮೀಪವಿರುವ 'ಭೂಪತಿ' ಅನ್ನುವವರು ಮಾಡಿ ತಂದುಕೊಟ್ಟರಂತೆ. ಹೀಗೆ, ಚೆನ್ನಾಗಿರುವ ಇಡ್ಲಿ-ವಡೆಯಿಂದ ಸಖತ್ ಹಾಡುಗಳು ಮೂಡಿಬಂದಿವೆಯಂತೆ. ಹಾಡುಗಳ ಕ್ರೆಡಿಟ್ಟು ಅವರಿಗೇ ಸಲ್ಲಬೇಕೆಂದು ಭಟ್ಟರು ಹೇಳಿದಲ್ಲಿಗೆ ಇಡ್ಡಿ-ವಡೆ ಕಥೆ ಮುಕ್ತಾಯ. (ಒನ್ ಇಂಡಿಯಾ ಕನ್ನಡ)

English summary
Jaanu Kannada Movie Audio Released. Yograj Bhat wrote Songs for this and Preetham Gubbi directed. Yash and Deepa Sannidh are in lead role. It will releases very shortly. 
 
Please Wait while comments are loading...