twitter
    For Quick Alerts
    ALLOW NOTIFICATIONS  
    For Daily Alerts

    2022ರಲ್ಲಿ ಅತೀ ಹೆಚ್ಚು ಆಲಿಸಿದ ಭಾರತದ ಹಾಡುಗಳ ಪಟ್ಟಿ ರಿಲೀಸ್: ಲಿಸ್ಟ್‌ನಲ್ಲಿ ಕನ್ನಡದ 'ಕಾಂತಾರ'!

    |

    2022ರ ಕೊನೆಯ ಹಂತದಲ್ಲಿ ಇದ್ದೇವೆ. ಈ ವರ್ಷ ದಕ್ಷಿಣ ಭಾರತದ ಚಿತ್ರರಂಗಕ್ಕೆ ಲಾಭದಾಯಕವೆಂದು ಸಾಬೀತಾಗಿದೆ. ಹಾಗಂತ ಕೇವಲ ಸಿನಿಮಾ ಅಷ್ಟೇ ಅಲ್ಲ. ಸಂಗೀತ ಕ್ಷೇತ್ರದಲ್ಲೂ ಸಿನಿಮಾದ ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡಿವೆ.

    ಭಾರತದ ಪ್ರಮುಖ ಮ್ಯೂಸಿಕ್ ಹಾಗೂ ಆಡಿಯೋ ಸ್ಟ್ರೀಮಿಂಗ್ ವೇದಿಕೆಯಾಗಿರುವ ಜಿಯೋಸಾವನ್ ಈ ವರ್ಷದ ಅತೀ ಹೆಚ್ಚು ಕೇಳಲ್ಪಟ್ಟ ಹಾಡುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2021ರ ಡಿಸೆಂಬರ್ ಮತ್ತು 2022ರ ನವೆಂಬರ್ ಮಧ್ಯೆ ಟ್ರೆಂಡಿಂಗ್‌ನಲ್ಲಿದ್ದ ಹಾಡುಗಳ ಡೇಟಾವನ್ನು ಕಲೆ ಹಾಕಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

    ಹೊಸಪೇಟೆ ಈವೆಂಟ್ ವಿಡಿಯೋ ಶೇರ್ ಮಾಡಿ ಹೊಸಪೇಟೆ ಈವೆಂಟ್ ವಿಡಿಯೋ ಶೇರ್ ಮಾಡಿ "ಥ್ಯಾಂಕ್ಯೂ" ಎಂದ ಚಾಲೆಂಜಿಂಗ್ ಸ್ಟಾರ್

    ಜಿಯೋ ಸಾವನ್ ವೇದಿಕೆಯಲ್ಲಿ ಭಾರತದಾದ್ಯಂತ ಕೇಳುಗರು ತಮ್ಮ ನೆಚ್ಚಿನ ಹಾಡುಗಳನ್ನು 10 ನಿಮಿಷದಿಂದ ಸುಮಾರು 2 ಗಂಟೆಯವರೆಗೆ ಟ್ಯೂನ್ ಮಾಡಿದ್ದಾರೆ. ಶನಿವಾರದಂದು ಗರಿಷ್ಠ ಸಂಖ್ಯೆಯಲ್ಲಿ ಹಾಡುಗಳನ್ನು ಸ್ಟ್ರೀಮಿಂಗ್ ಮಾಡಲಾಗಿದೆ. ಬಾಲಿವುಡ್, ಡ್ಯುಯೆಟ್, ದೇಸಿ ಹಾಗೂ ಇಂಡಿ ಪಾಪ್ ಹಾಡುಗಳು ತೆಲುಗು, ಕನ್ನಡ ಹಾಗೂ ದೇಸಿ ಹಿಪ್ ಹಾಪ್ ಮತ್ತು ತಮಿಳು ಹಾಡುಗಳನ್ನು ಹೆಚ್ಚು ಹುಡುಕಲಾಗಿದೆ.

    ಕನ್ನಡದ ಹಾಡುಗಳು ಪೈಪೋಟಿ

    ಕನ್ನಡದ ಹಾಡುಗಳು ಪೈಪೋಟಿ

    ಹಿಂದಿ ಮತ್ತು ಇಂಗ್ಲಿಷ್ ಹಾಡುಗಳ ಜೊತೆ ತೆಲುಗು ಹಾಡುಗಳನ್ನು ಕೇಳುಗರು ಹೆಚ್ಚು ಕೇಳಿದ್ದಾರೆ. 2 ಬಿಲಿಯನ್‌ಗೂ ಅಧಿಕ ಸಂಖ್ಯೆಯಲ್ಲಿ ತೆಲುಗು ಹಾಡುಗಳನ್ನು ಸ್ಟ್ರೀಮಿಂಗ್ ಮಾಡಲಾಗಿದೆ. ಹಾಗೇ ಪಂಜಾಬಿ 1 ಬಿಲಿಯನ್, ತಮಿಳು 900 ಮಿಲಿಯನ್, ಕನ್ನಡ 900 ಮಿಲಿಯನ್, ಭೋಜ್‌ಪುರಿ 850 ಮಿಲಿಯನ್ ಸ್ಟ್ರೀಮ್ ಆಗಿದೆ. ಕೇಳುಗರ ಸಂಖ್ಯೆ ಕೂಡ 100 ಮಿಲಿಯನ್‌ಗೂ ಅಧಿಕ ಇದೆ. ಹರ್ಯಾಣ್ವಿ 300 ಮಿಲಿಯನ್, ಬೆಂಗಾಲಿ 270 ಮಿಲಿಯನ್ ಹಾಗೂ ಮರಾಠಿ 250 ಮಿಲಿಯನ್‌ಷ್ಟು ಸ್ಟ್ರೀಮಿಂಗ್ ಆಗಿದೆ.

    ಟಾಪ್ ಕನ್ನಡ ಹಾಡುಗಳು ಇವೇನೆ!

    ಟಾಪ್ ಕನ್ನಡ ಹಾಡುಗಳು ಇವೇನೆ!

    ಜಿಯೋ ಸಾವನ್‌ನಲ್ಲಿ ಈ ವರ್ಷ ಕನ್ನಡದ ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡಿದೆ. ಅದರಲ್ಲಿ 'ಕಾಂತಾರ' ಸಿನಿಮಾದ ಹಾಡುಗಳು ಹೆಚ್ಚಿವೆ. 'ಕಾಂತಾರ' ಸಿನಿಮಾದಿಂದ "ಸಿಂಗಾರ ಸಿರಿಯೇ.." ಹಾಗೇ "ವರಾಹ ರೂಪಂ ದೈವ ವರಿಷ್ಟಂ.." 'ಲವ್ 360' ಸಿನಿಮಾದ " ಜಗವೇ ನೀನು ಗೆಳತಿಯೇ.." 'ವಿಕ್ರಾಂತ್ ರೋಣ' ಚಿತ್ರದ "ರಾ.. ರಾ.. ರಕ್ಕಮ್ಮ.." ಮತ್ತೆ 'ಬನಾರಸ್' ಸಿನಿಮಾದ " ಬೆಳಕಿನ ಕವಿತೆ.. " ಹಾಡುಗಳು ಟಾಪ್‌ನಲ್ಲಿವೆ.

    ತೆಲುಗು ತಮಿಳಿನ ಟಾಪ್ ಸಾಂಗ್?

    ತೆಲುಗು ತಮಿಳಿನ ಟಾಪ್ ಸಾಂಗ್?

    ತೆಲುಗಿನಲ್ಲಿ 'ಸರ್ಕಾರು ವಾರಿ ಪಾಟ'ದ "ಕಲಾವತಿ", 'ಡಿಜೆ ತಿಲ್ಲು' ಸಿನಿಮಾದ "ತಿಲ್ಲು ಅಣ್ಣಾ ಡಿಜೆ ಪೇಡಿತೆ" ಹಾಗೂ 'ಕೆಜಿಎಫ್ ಚಾಪ್ಟರ್ 2' ಸಿನಿಮಾ "ಮೆಹಬೂಬ..' ಮೊದಲ ಮೂರು ಸ್ಥಾನಗಳಲ್ಲಿದೆ. ಹಾಗೇ ತಮಿಳಿನಲ್ಲಿ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನದ "ಅರೇಬಿಕ್ ಕುತ್ತು..", "ಮೇಘಂ ಕರುಕಥಾ", 'ವಿಕ್ರಮ್' ಸಿನಿಮಾ ಟೈಟಲ್ ಟ್ರ್ಯಾಕ್ ಟಾಪ್‌ನಲ್ಲಿದೆ.

    ಅರಿಜಿತ್ ಸಿಂಗ್ ಟಾಪ್

    ಅರಿಜಿತ್ ಸಿಂಗ್ ಟಾಪ್

    ಅರಿಜಿತ್ ಸಿಂಗ್ ಅವರ 'ಧೋಖಾ' ಹಿಂದಿ ಚಾರ್ಟ್‌ನಲ್ಲಿ ಅಗ್ರಸ್ಥಾನದಲ್ಲಿದೆ. 'ಕೇಸರಿಯಾ', 'ಮೈಯ್ಯ ಮೈನು', 'ಕುಚ್ ಬಾತೇನ್' ಮತ್ತು 'ತುಮ್ಸೆ ಪ್ಯಾರ್ ಕರ್ಕೆ' ಇತರ ಜನಪ್ರಿಯ ಹಿಂದಿ ಹಾಡುಗಳಲ್ಲಿ ಸೇರಿವೆ. ಭಾರತೀಯ ಕಲಾವಿದರಾದ ಬಾದ್‌ಷಾ ಮತ್ತು ಅರ್ಮಾನ್ ಮಲಿಕ್ ಅವರು 'ವೂಡೂ' ಮತ್ತು 'ಯು'ನಂತಹ ಹಿಟ್‌ಗಳೊಂದಿಗೆ ಟಾಪ್‌ನಲ್ಲಿದ್ದಾರೆ ಎಂದು ಜಿಯೋ ಸಾವನ್ ಹೇಳಿದೆ.

    English summary
    JioSavan Releases 2022 Popular Indian Songs Kantara In The List,Know More.
    Wednesday, December 21, 2022, 23:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X