»   » ಕೋಮಲ್ 'ಸರಸಕೆ ಬಾರೆ ಸರಳ' ಹಾಡು ಸೂಪರ್ ಹಿಟ್

ಕೋಮಲ್ 'ಸರಸಕೆ ಬಾರೆ ಸರಳ' ಹಾಡು ಸೂಪರ್ ಹಿಟ್

Posted By:
Subscribe to Filmibeat Kannada

'ಗೋವಿಂದಾಯ ನಮಃ' ಚಿತ್ರದ "ಪ್ಯಾರ್ ಗೆ ಆಗ್ಬಿಟ್ಟೈತೆ..." ಹಾಡು ಯೂಟ್ಯೂಬ್ ನಲ್ಲಿ ಭಾರಿ ಹಿಟ್ ಆಗಿದ್ದು ಗೊತ್ತೇ ಇದೆ. ಆ ಹಾಡು ಮಾಡಿದ ಮೋಡಿಗೆ ಮರುಳಾಗದವರಿಲ್ಲ. ಇದುವರೆಗೂ ಆ ಹಾಡನ್ನು ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಈಗ ಆ ಹಾಡನ್ನು ಮೀರಿಸುವಂತಹ ಮತ್ತೊಂದು ಹಾಡನ್ನು ಹಾಸ್ಯ ನಟ ಕೋಮಲ್ ಮಾಡಿದ್ದಾರೆ. 'ಕರೋಡ್ ಪತಿ' ಚಿತ್ರದ "ಸರಸಕೆ ಬಾರೇ ಸರಳ, ಸನಿಹಕೆ ಬಾರೇ ಸರಳ, ನಿನ್ನ ಬ್ಯೂಟಿ ಅತಿ ವಿರಳ...ಆ ಲುಕ್ಕು ಕಾಡಿತು ಬಹಳ..." ಹಾಡು ಈಗ ಎಫ್ಎಂಗಳಲ್ಲಿ, ಮೊಬೈಲ್ ರಿಂಗ್ ಟೋನ್, ಕಾಲರ್ ಐಡಿಗಳಲ್ಲಿ ಬಹಳ ಕಾಡುತ್ತಿದೆ. [ಹಾಡಿನ ವಿಡಿಯೋಗೆ ಇಲ್ಲಿ ಕ್ಲಿಕ್ಕಿಸಿ]

ಈ ಹಾಡಿನ ವಿಡಿಯೋ ಈಗ ಯೂಟ್ಯೂಬ್ ನಲ್ಲಿ ಭಾರಿ ಹವಾ ಎಬ್ಬಿಸಿದೆ. ಇದುವರೆಗೂ ಈ ಹಾಡನ್ನು 6,00000ಕ್ಕೂ ಅಧಿಕ ಸಲ ವೀಕ್ಷಿಸಲಾಗಿದೆ. ಈ ಹಾಡಿನ ಮೇಕಿಂಗ್, ಸಂಗೀತ, ಸಾಹಿತ್ಯ ಎಲ್ಲವೂ ವಿಭಿನ್ನವಾಗಿರುವುದೇ ಇದಕ್ಕೆ ಕಾರಣ.

ಅಭಿಮಾನ್ ರಾಯ್ ಸಂಗೀತ ಹಾಗೂ ಸಾಹಿತ್ಯ

ಅಭಿಮಾನ್ ರಾಯ್ ಸಂಗೀತ ಹಾಗೂ ಸಾಹಿತ್ಯ ಈ ಹಾಡಿಗಿದ್ದು ಗಮಕ ವಿದ್ವಾನ್ ಎಲ್.ಆರ್.ರಾಮಾನುಜಂ ಬಹಳ ಸೊಗಸಾಗಿ ಹಾಡಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ವಿಶೇಷ ಸೆಟ್ ಹಾಕಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಸತತ ಮೂರು ದಿನಗಳ ಕಾಲ ಹಾಡನ್ನು ಚಿತ್ರೀಕರಿಸಿದ್ದಾರೆ.

ಹಲವಾರು ಗೆಟಪ್ ಗಳಲ್ಲಿ ಕೋಮಲ್

ಈ ಹಾಡಿನಲ್ಲಿ ಕೋಮಲ್ ಅವರು ಪೂಜಾರಿ, ಮುಸ್ಲಿಂ, ಮಂಗಳಮುಖಿ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ನಟಿ ನೇಹಾ ಈ ಹಾಡಿಗೆ ಹೆಜ್ಜೆ ಹಾಕಿದ್ದು ರಾಮಾನುಜಂ ಅವರ ಗಮಕಕ್ಕೆ ತಕ್ಕಂತೆ ಸೊಂಟ ಬಳುಕಿಸಿದ್ದಾರೆ. ಡಾನ್ಸ್ ಮಾಸ್ಟರ್ ಮುರಳಿ ಅವರ ನೃತ್ಯ ಸಂಯೋಜನೆಯಲ್ಲಿ ಈ ಹಾಡು ಬಳುಕಾಡಿದೆ.

ಕೋಮಲ್ ಹಳೇ ರೆಕಾರ್ಡ್ ಮುರಿಯಲಿದೆ

ಪಿಸಿಆರ್ ರಮೇಶ್ ಆಕ್ಷನ್ ಕಟ್ ಹೇಳಿರುವ 'ಕರೋಡ್ ಪತಿ' ಚಿತ್ರವನ್ನು ಎಸ್ಎಸ್ಎಸ್ ಸುರೇಶ್ ನಿರ್ಮಿಸಿದ್ದಾರೆ. ಈ ಹಾಡಿನ ಬಗ್ಗೆ ಕೋಮಲ್ ಮಾತನಾಡುತ್ತಾ, "ಬಹುಶಃ ನನ್ನ ಹಳೆ ರೆಕಾರ್ಡ್ಸ್ ಮುರಿಯುವಂತಹ ಸಾಂಗ್ ಇದು" ಎಂದಿದ್ದಾರೆ.

ಸಾಫ್ಟ್ ವೇರ್, ಹಾರ್ಡ್ ವೇರ್ ಇಬ್ಬರಿಗೂ ಲೈಕ್

ಸಾಫ್ಟ್ ವೇರ್, ಹಾರ್ಡ್ ವೇರ್ ಇಬ್ಬರೂ ಲೈಕ್ ಮಾಡುವಂತಹ ಹಾಡಿದು. ಒಂದ್ಸಲ ಥಿಯೇಟರ್ ಗೆ ಹೋಗಿ ನೋಡೇ ಬಿಡೋಣ. ಅದೇನ್ ದಬ್ಬಾಕಿದ್ದಾರೋ ಎಂಬ ಅಭಿಪ್ರಾಯ ಹಾಡು ಕೇಳಿದ ಎಲ್ಲರಿಗೂ ಮೂಡಿದೆ.

ಪಾತ್ರವರ್ಗದಲ್ಲಿ ಮಾಳವಿಕಾ, ಗುರುಪ್ರಸಾದ್

ಎಸ್ ಎನ್ ರಮೇಶ್ ನಿರ್ಮಿಸಿರುವ ಈ ಚಿತ್ರಕ್ಕೆ ಅಭಿಮಾನ್ ರಾಯ್ ಸಂಗೀತ ನೀಡಿದ್ದಾರೆ. ಚಿತ್ರದ ಉಳಿದ ಪಾತ್ರವರ್ಗದಲ್ಲಿ ಮಾಳವಿಕಾ, ಗುರುಪ್ರಸಾದ್, ಬಿರಾದಾರ್, ಡಿಂಗ್ರಿ ನಾಗರಾಜ್, ಜಯಶ್ರೀ ಕೃಷ್ಣ, ಯತಿರಾಜ್ ಮುಂತಾದವರು ಇದ್ದಾರೆ.

ಚಿತ್ರದ ಒನ್ ಲೈನ್ ಸ್ಟೋರಿ ಏನೆಂದರೆ...

ಒಂದು ಹೊತ್ತಿನ ಊಟಕ್ಕೂ ಪರದಾಡುವವನೊಬ್ಬ 'ಕರೋಡ್ ಪತಿ' ಹೇಗಾಗುತ್ತಾನೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ. ಈ ಚಿತ್ರದಲ್ಲಿ ಸಾಕಷ್ಟು ಎಕ್ಸ್ ಪೋಸ್ ಇದ್ದ ಕಾರಣ ಪ್ರಿಯಾ ಎಂಬ ಹೊಸ ನಟಿ ಅಭಿನಯಿಸಲು ನಿರಾಕರಿಸಿದ್ದರು. ಆ ಜಾಗಕ್ಕೆ ದೆಹಲಿ ಮೂಲದ ಜಾಸ್ಮಿನ್ ಬಂದಿದ್ದರು.

English summary
Comedy Star Komal Kumar lead romantic song from Kannada movie 'Karodpathi' has crossed over 6 lakh hits in the Youtube. The song sung by Gamaka Vidvan LR Ramanujam and music composed by Abhimann Roy.
Please Wait while comments are loading...