»   » ಕನ್ನಡದಲ್ಲಿ ಹೊಸ ಇತಿಹಾಸ ನಿರ್ಮಿಸಿದ 'ಕಿರಿಕ್ ಪಾರ್ಟಿ' ಹಾಡು

ಕನ್ನಡದಲ್ಲಿ ಹೊಸ ಇತಿಹಾಸ ನಿರ್ಮಿಸಿದ 'ಕಿರಿಕ್ ಪಾರ್ಟಿ' ಹಾಡು

Posted By:
Subscribe to Filmibeat Kannada
ಕನ್ನಡದಲ್ಲಿ ಹೊಸ ಇತಿಹಾಸ ನಿರ್ಮಿಸಿದ 'ಕಿರಿಕ್ ಪಾರ್ಟಿ' | Filmibeat Kannada

'ಕಿರಿಕ್ ಪಾರ್ಟಿ' ಸಿನಿಮಾ ದೊಡ್ಡ ಹಿಟ್ ಆಗಿ, ದೊಡ್ಡ ಮಟ್ಟದ ಕಲೆಕ್ಷನ್ ಮಾಡಿತ್ತು. ಇನ್ನು 'ಕಿರಿಕ್ ಪಾರ್ಟಿ' ಸಿನಿಮಾದ ಗೆಲುವಿನಲ್ಲಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕೊಟ್ಟ ಹಾಡುಗಳ ಪಾತ್ರ ಅಪಾರವಾಗಿತ್ತು. ಅದರಲ್ಲಿಯೂ ಚಿತ್ರದ 'ಬೆಳಗೆದ್ದು..' ಹಾಡು ಹುಟ್ಟಿಸಿದ್ದ ಕ್ರೇಜ್ ನ ಇಂದಿಗೂ ನಿಂತಿಲ್ಲ.

'ಕಿರಿಕ್ ಪಾರ್ಟಿ' ಸಿನಿಮಾದ 'ಬೆಳಗೆದ್ದು..' ಹಾಡು ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ಬಾರಿ ಕೇಳಿರುವ ಕನ್ನಡದ ಹಾಡಾಗಿದೆ. ಸಿನಿಮಾದ ಈ ಹಾಡು ಸದ್ಯ 50 ಮಿಲಿಯನ್ ಹಿಟ್ಸ್ ಪಡೆದಿದೆ. ಈ ಹಾಡಿನ ಹೊರತಾಗಿ ಇಡೀ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಯಾವ ಹಾಡು ಕೂಡ ಯ್ಯೂಟೂಬ್ ನಲ್ಲಿ 50 ಮಿಲಿಯನ್ ಹಿಟ್ಸ್ ಪಡೆದಿಲ್ಲ. ಪುನೀತ್ ರಾಜ್ ಕುಮಾರ್ ಅವರ 'ರಾಜಕುಮಾರ' ಸಿನಿಮಾದ 'ಬೊಂಬೆ ಹೇಳುತೈತೆ..' ಹಾಡು ಎರಡನೇ ಸ್ಥಾನದಲ್ಲಿ ಇದ್ದು 49 ಮಿಲಿಯನ್ ಜನರು ಆ ಹಾಡನ್ನು ನೋಡಿದ್ದಾರೆ.

'ರಾಜಕುಮಾರ' ಜೊತೆ 'ಕಿರಿಕ್ ಪಾರ್ಟಿ' ಸಾಧನೆಯೂ ನೆನಪಿರಲಿ !

ಇಂತಹ ಸೂಪರ್ ಹಾಡನ್ನು ನೀಡಿದ್ದು ಕನ್ನಡ ಪ್ರತಿಭಾವಂತ ಸಂಗೀತ ನಿರ್ದೇಶಕರಾದ ಅಜನೀಶ್ ಲೋಕನಾಥ್. ಇನ್ನು 'ಬೆಳಗೆದ್ದು..' ಹಾಡಿನ ದೊಡ್ಡ ಯಶಸ್ಸಿನ ನಂತರ ಅಜನೀಶ್ ಸಾಕಷ್ಟು ಸಿನಿಮಾಗಳಲ್ಲಿ ಬಿಜಿ ಇದ್ದಾರೆ. ತಮಿಳು, ತೆಲುಗಿನ ಸಿನಿಮಾಗಳಿಗೂ ಅಜನೀಶ್ ಸಂಗೀತ ನೀಡುತ್ತಿದ್ದಾರೆ.

Kirik Party movie Belageddu song has reached 50 million views in Youtube.

ಅಂದಹಾಗೆ, 'ಬೆಳಗೆದ್ದು..' ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದರು. ಧನಂಜಯ್ ರಂಜನ್ ಹಾಡಿಗೆ ಸಾಹಿತ್ಯ ಬರೆದಿದ್ದರು. ನವೆಂಬರ್ 25, 2016 ರಲ್ಲಿ ಈ ಹಾಡು ಬಿಡುಗಡೆಯಾಗಿತ್ತು.

English summary
Actor Rakshit Shetty's 'Kirik Party' kannada movie 'Belageddu' song has reached 50 million views in Youtube.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X