For Quick Alerts
  ALLOW NOTIFICATIONS  
  For Daily Alerts

  ಶ್ರೇಯಾ ಘೋಷಾಲ್ ಮೊದಲ ಕನ್ನಡ ಹಾಡು ಯಾವುದು ಗೊತ್ತೆ?

  |

  ಗಾಯಕಿ ಶ್ರೇಯಾ ಘೋಷಾಲ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಪ್ರೀತಿಯ ಗಾಯಕಿಗೆ ಶುಭಾಶಯವನ್ನು ತಿಳಿಸುತ್ತಿದ್ದಾರೆ.

  ಶ್ರೇಯಾ ಘೋಷಾಲ್ ಮೂಲತಃ ಹಿಂದಿ ಗಾಯಕಿ ಆಗಿದ್ದರು ಕನ್ನಡದಲ್ಲಿ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಅವರ ಧ್ವನಿ ಕನ್ನಡದವರೇ ಎನ್ನುವ ಮಟ್ಟಗೆ ಹತ್ತಿರ ಆಗಿಬಿಟ್ಟಿದೆ. ಇಂತಹ ಗೋಲ್ಡನ್ ವಾಯ್ಸ್ ಗಾಯಕಿ ಕನ್ನಡದಲ್ಲಿ ಮೊದಲು ಹಾಡಿದ್ದು ಯಾವ ಹಾಡು ಗೊತ್ತೆ.

  ಶ್ರೇಯಾ ಘೋಷಾಲ್ ಕಂಠದ 'ಮುಗುಳು ನಗೆ' ಹಾಡು ಕೇಳಿ ಶ್ರೇಯಾ ಘೋಷಾಲ್ ಕಂಠದ 'ಮುಗುಳು ನಗೆ' ಹಾಡು ಕೇಳಿ

  2003 ರಲ್ಲಿ ಬಿಡುಗಡೆಯಾದ 'ಪ್ರಾರಿಸ್ ಪ್ರಣಯ' ಚಿತ್ರದ ಮೂಲಕ ಕನ್ನಡದಲ್ಲಿ ಶ್ರೇಯಾ ಖಾತೆ ತೆರೆದರು. 'ಕೃಷ್ಣ ನೀ ಬೇಗನೇ ಬಾರೋ..' ಹಾಡಿನ್ನು ಅದ್ಬುತವಾಗಿ ಹಾಡುವ ಮೂಲಕ ಕನ್ನಡಗರ ಮನಸ್ಸಿನಲ್ಲಿ ಜಾಗ ಪಡೆದರು.

  ಮೊದಲ ಕನ್ನಡ ಸಿನಿಮಾದಲ್ಲಿಯೇ ಎರಡು ಹಾಡನ್ನು ಹಾಡಿದರು. 'ರೋಮ್ ರೋಮ್..' ಹಾಡಿಗೆ ಸೋನು ನಿಗಮ್ ಜೊತೆಗೆ ಶ್ರೇಯಾ ಧ್ವನಿಗೂಡಿಸಿದರು. ಕನ್ನಡದಲ್ಲಿ ಇವರಿಬ್ಬರ ಕಾಂಬಿನೇಶನ್ ಹಾಡುಗಳು ಶುರು ಆಗಿದ್ದು ಇಲ್ಲಿಂದಲೇ.

  ಅಂದಹಾಗೆ, 'ಪ್ಯಾರಿಸ್ ಪ್ರಣಯ' ಚಿತ್ರದ ನಿರ್ದೇಶಕರಾಗಿದ್ದ ನಾಗತಿಹಳ್ಳಿ ಚಂದ್ರಶೇಖರ್ ಅವರೇ ಸಿನಿಮಾದ ಎಲ್ಲ ಹಾಡುಗಳನ್ನು ಬರೆದಿದ್ದರು. ಸ್ಟೆಫನ್ ಪ್ರಯೋಗ್ ಸಂಗೀತ ನೀಡಿದ್ದರು. ಶ್ರೇಯಾ ಘೋಷಾಲ್ ರನ್ನು ಕನ್ನಡಕ್ಕೆ ಕರೆ ತಂದ ಖ್ಯಾತಿ ಇವರಿಗೆ ಸಲ್ಲಬೇಕು.

  ಈ ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಶುರುವಾದ ಶ್ರೇಯಾ ಜರ್ನಿ ಇಂದಿಗೂ ಮುಂದುವರೆದಿದೆ. ಕನ್ನಡದಲ್ಲಿ ಅವರು ಹಾಡಿರುವ ಬಹುಪಾಲು ಹಾಡುಗಳು ಗೆದ್ದಿವೆ.

  English summary
  Krishna Nee Begane Baro from 'Paris Pranaya' movie is 1st kannada song of Shreya Ghoshal. The song is written by Nagathihalli Chandrashekar and music by Stephen Prayog.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X