»   » ಪುನೀತ್ 'ರಣವಿಕ್ರಮ'ನಿಗೆ ಲಹರಿ ವೇಲು ನೋಟಿಸ್

ಪುನೀತ್ 'ರಣವಿಕ್ರಮ'ನಿಗೆ ಲಹರಿ ವೇಲು ನೋಟಿಸ್

By: ರವಿಕಿಶೋರ್
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಚಿತ್ರ ಏಪ್ರಿಲ್ ನಲ್ಲಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಆದರೆ ಈ ಚಿತ್ರದಲ್ಲಿನ ಒಂದು ರಿಮಿಕ್ಸ್ ಹಾಡು ಕಾಪಿರೈಟ್ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಲಹರಿ ಆಡಿಯೋ ಸಂಸ್ಥೆ ಚಿತ್ರದ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರಿಗೆ ನೋಟಿಸ್ ಕಳುಹಿಸಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ರಣರಂಗ' (1988) ಚಿತ್ರದಲ್ಲಿನ "ಜಗವೇ ಒಂದು ರಣರಂಗ..ಧೈರ್ಯ ಇರಲಿ ನಿನ್ನ ಸಂಗ..." ಎಂಬ ಗೀತೆಯ ಪಲ್ಲವಿಯ ಸಾಲುಗಳನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. [ರಣವಿಕ್ರಮ ಆಡಿಯೋ ವಿಮರ್ಶೆ]


Lahari Velu sends notice to 'Rana Vikrama' director

ರಣರಂಗ ಚಿತ್ರದ ಗೀತೆಗೆ ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತ ಇದೆ. ಅದೇ ಹಾಡನ್ನು ರಿಮಿಕ್ಸ್ ರೂಪದಲ್ಲಿ ರಣವಿಕ್ರಮ ಚಿತ್ರದಲ್ಲಿ ಕಾನೂನುಬಾಹಿರವಾಗಿ ಬಳಸಿಕೊಳ್ಳಲಾಗಿದೆ ಎಂದು ಲಹರಿ ವೇಲು ಆರೋಪಿಸಿದ್ದು, ಚಿತ್ರದ ನಿರ್ದೇಶಕ ಪವನ್ ಒಡೆಯರ್ ಹಾಗೂ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರಿಗೆ ಒಂದು ವಾರದಲ್ಲಿ ಉತ್ತರಿಸುವಂತೆ ನೋಟೀಸ್ ಜಾರಿ ಮಾಡಿದ್ದಾರೆ.


ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದ ಈ ಚಿತ್ರದಲ್ಲಿ ಅಂಜಲಿ ಮತ್ತು ಆದಾ ಶರ್ಮಾ ಇಬ್ಬರು ನಾಯಕಿಯರು. ವೈದಿ ಎಸ್ ಅವರ ಛಾಯಾಗ್ರಹಣ ಇದ್ದು ಉಳಿದ ಪಾತ್ರವರ್ಗದಲ್ಲಿ ಗಿರೀಶ್ ಕಾರ್ನಾಡ್, ರಂಗಾಯಣ ರಘು, ವಿಕ್ರಮ್ ಸಿಂಗ್ ಮುಂತಾದವರಿದ್ದಾರೆ. (ಏಜೆನ್ಸೀಸ್)

English summary
Lahari audio company alleges that, Puneeth Rajkumar starrer 'Rana Vikrama' breaches copyright law. Remix version of the 'Ranaranga''s (1988) "Jagave Ondu Ranaranga.." song is used without concerning the company. The audio company sends notice to music director V Harikrishna and director Pawan wadeyar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada