For Quick Alerts
  ALLOW NOTIFICATIONS  
  For Daily Alerts

  ತಂಗಿ ಆಶಾ ಭೋಸ್ಲೆ ಮೇಲಿನ ಕೋಪಕ್ಕೆ ಕಾರಣ ಹೇಳಿದ ಲತಾ ಮಂಗೇಶ್ಕರ್

  |

  ಲತಾ ಮಂಗೇಶ್ಕರ್ ಭಾರತದ ಜೀವಂತ ದಂತಕತೆ. ಲತಾ ಮಂಗೇಶ್ಕರ್ ಗಾಯನಕಕ್ಕೆ ಮನಸೋಲದವರು ಕಡಿಮೆ. 1942ರಿಂದಲೂ ಹಾಡುತ್ತಿರುವ ಲತಾ ಮಂಗೇಶ್ಕರ್ ಈವರೆಗೆ ಸಾವಿರಾರು ಸುಮಧುರ ಹಾಡುಗಳನ್ನು ಹಾಡಿದ್ದಾರೆ.

  ಲತಾ ಮಂಗೇಶ್ಕರ್‌ಗೆ ಆಶಾ ಭೋಸ್ಲೆ ಹೆಸರಿನ ಸಹೋದರಿ ಇದ್ದು ಅವರೂ ಸಹ ಭಾರತೀಯ ಸಿನಿಮಾದಲ್ಲಿ ಖ್ಯಾತ ಹಾಡುಗಾರ್ತಿಯಾಗಿ ಪರಿಚಿತರು, ಕನ್ನಡದಲ್ಲಿಯೂ ಹಾಡಿರುವ ಆಶಾ ಭೋಸ್ಲೆ ಅವರ ಹುಟ್ಟುಹಬ್ಬ ಇಂದು.

  ಇದೇ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಲತಾ ಮಂಗೇಶ್ಕರ್, ತಂಗಿ ಆಶಾ ಭೋಸ್ಲೆ ಜೊತೆಗಿನ ದ್ವೇಷ, ಸಿಟ್ಟಿಗೆ ಕಾರಣಗಳೇನು ಎಂಬುದನ್ನು ಹೇಳಿದ್ದಾರೆ. ಎಲ್ಲ ಅಕ್ಕ-ತಂಗಿಯರಿಗೆ ಇದ್ದಂತೆ ನಮ್ಮ ನಡುವೆಯೂ ಭಿನ್ನಾಭಿಪ್ರಾಯಗಳು, ಜಗಳಗಳು ಇದ್ದವು ಎಂದಿರುವ ಲತಾ, ಭಿನ್ನಾಭಿಪ್ರಾಯಗಳು ಎಂಥಹವು ಎಂದು ವಿವರಿಸಿ ಹೇಳಿದ್ದಾರೆ.

  ''ನನಗೂ ಆಶಾ ಭೋಸ್ಲೆಗೂ ವೃತ್ತಿಯಲ್ಲಿ ಯಾವುದೇ ವೈಷಮ್ಯ ಇರಲಿಲ್ಲ. ಇಬ್ಬರೂ ಯಶಸ್ವಿ ಗಾಯಕರಾಗಿದ್ದೆವು. ಆದರೆ ಬೇರೆ ಕೆಲವು ಭಿನ್ನಾಭಿಪ್ರಾಯಗಳು ಇದ್ದವು. ಆಶಾ ತನ್ನ ಹದಿವಯಸ್ಸಿನಲ್ಲಿ ಕೆಲವು ಕೆಲಸಗಳನ್ನು ಮಾಡಿದಳು. ಅಕ್ಕನಾಗಿ ನನಗೆ ಅವುಗಳನ್ನು ಒಪ್ಪಲು ಸಾಧ್ಯವಿರಲಿಲ್ಲ'' ಎಂದಿದ್ದಾರೆ ಲತಾ ಮಂಗೇಶ್ಕರ್.

  ''ಹದಿನಾರನೇ ವಯಸ್ಸಿನಲ್ಲಿ ಮದುವೆ ಆಗುವುದು ಬಹಳ ಕೆಟ್ಟ ನಡೆಯಾಗಿತ್ತು. ಆ ಮದುವೆ ಖಂಡಿತವಾಗಿ ಮುರಿದು ಬೀಳುತ್ತದೆ ಎಂಬುದು ನನಗೆ ಗೊತ್ತಿತ್ತು. ಕೊನೆಗೆ ಹಾಗೆಯೇ ಆಯಿತು. ಆಕೆಯ ಕೆಲವು ನಿರ್ಣಯಗಳು ನನಗೆ ತೀವ್ರ ಬೇಸರ ತರಿಸಿದ್ದವು. ಆದರೆ ಅದು ಆಕೆಯ ಜೀವನವಾಗಿತ್ತು, ಆಕೆ ತನಗೆ ಇಷ್ಟಬಂದುದ್ದನ್ನು ಮಾಡಲು ಸ್ವತಂತ್ರ್ಯಳಾಗಿದ್ದಳು. ಮತ್ತೊಬ್ಬರ ಜೀವನದ ಬಗ್ಗೆ ಪ್ರಶ್ನೆ ಮಾಡುವ ಸಂಪ್ರದಾಯ ನಮ್ಮ ಕುಟುಂಬದಲ್ಲಿ ಇರಲಿಲ್ಲ'' ಎಂದಿದ್ದಾರೆ ಲತಾ ಮಂಗೇಶ್ಕರ್.

  ''ಆಗಿನ ಮನಸ್ಥಾಪಗಳನ್ನು ಮರೆತು ನಾವು ಒಟ್ಟಿಗೆ ಇದ್ದೆವು. ಮುಂಬೈನ ಪೆಡ್ಡರ್‌ ರಸ್ತೆಯಲ್ಲಿ ಇಬ್ಬರೂ ಪಕ್ಕ-ಪಕ್ಕದ ಅಪಾರ್ಟ್‌ಮೆಂಟ್ ಖರೀದಿ ಮಾಡಿ ಒಟ್ಟಿಗೆ ವಾಸವಿದ್ದೆವು. ಇಬ್ಬರ ಅಪಾರ್ಟ್‌ಮೆಂಟ್‌ಗೆ ಒಂದೇ ಬಾಗಿಲು ಸಹ ಇತ್ತು. ಆದರೆ ಆ ನಂತರ ಆಕೆ ವ್ಯವಹಾರ, ಮಗ ಇನ್ನಿತರ ಕಾರಣಗಳಿಂದಾಗಿ ದೂರ ಮನೆ ಮಾಡಬೇಕಾಯಿತು'' ಎಂದಿದ್ದಾರೆ ಲತಾ ಮಂಗೇಶ್ಕರ್.

  ವೃತ್ತಿ ವೈಷಮ್ಯ ಇಲ್ಲ ಎಂದ ಲತಾ

  ವೃತ್ತಿ ವೈಷಮ್ಯ ಇಲ್ಲ ಎಂದ ಲತಾ

  ''ಇಬ್ಬರಿಗೂ ಯಾವ ಮನಸ್ಥಾಪವೂ ಈಗಿಲ್ಲ. ಇಬ್ಬರೂ ಬಹಳ ಚೆನ್ನಾಗಿದ್ದೇವೆ. ನನಗೆ ಆಕೆಯಿಂದರೆ ಬಹಳ ಪ್ರೀತಿ. ಆಕೆಗೂ ನಾನೆಂದರೆ ಬಹಳ ಗೌರವ'' ಎಂದಿರುವ ಲತಾ, ''ನಮ್ಮಿಬ್ಬರ ನಡುವೆ ವೃತ್ತಿ ವೈಷಮ್ಯ ಇತ್ತು ಎಂಬುದು ಸಂಪೂರ್ಣ ಸುಳ್ಳು. ಇಬ್ಬರಿಗೂ ಸಾಕಷ್ಟು ಅವಕಾಶಗಳು ಇದ್ದವು. ಇಬ್ಬರೂ ಬೇರೆ-ಬೇರೆ ಮಾದರಿಯ ಹಾಡುಗಾರ್ತಿಯರಾಗಿದ್ದೆವು. ನಮ್ಮ ನಡುವೆ ಎಂದೂ ವೃತ್ತಿ ವೈಷಮ್ಯ ಇರಲಿಲ್ಲ'' ಎಂದಿದ್ದಾರೆ ಲತಾ ಮಂಗೇಶ್ಕರ್.

  ಪ್ರೀತಿಸಿ ಮನೆ ಬಿಟ್ಟು ಹೋದ ಆಶಾ ಭೋಸ್ಲೆ

  ಪ್ರೀತಿಸಿ ಮನೆ ಬಿಟ್ಟು ಹೋದ ಆಶಾ ಭೋಸ್ಲೆ

  ಆಶಾ ಭೊಸ್ಲೆ ತಮ್ಮ ಹದಿನಾರನೇ ವಯಸ್ಸಿನಲ್ಲಿಯೇ ತಮಗಿಂತ ದುಪ್ಪಟ್ಟು ವಯಸ್ಸಿನ ಗಣಪತ್‌ರಾವ್ ಭೋಸ್ಲೆ ಎಂಬುವರೊಟ್ಟಿಗೆ ಓಡಿಹೋಗಿ ಮದುವೆ ಆದರು. ಆದರೆ ಆ ಮದುವೆ ಬಹಳ ಕಾಲ ಬಾಳಲಿಲ್ಲ. ಆಶಾ ಭೊಸ್ಲೆಗೆ ಒಬ್ಬ ಮಗನೂ ಸಹ ಇದ್ದಾನೆ. ಆದರೆ ಗಾಯಕಿ ಲತಾ ಮಂಗೇಶ್ಕರ್ ಮದುವೆ ಆಗದೆ ಹಾಗೆಯೇ ಉಳಿದುಬಿಟ್ಟರು.

  ಅಕ್ಕ-ತಂಗಿಯರು ಬಹಳ ಆತ್ಮೀಯರಾಗಿದ್ದರು

  ಅಕ್ಕ-ತಂಗಿಯರು ಬಹಳ ಆತ್ಮೀಯರಾಗಿದ್ದರು

  ಲತಾ ಮಂಗೇಶ್ಕರ್ ಹಾಗೂ ಆಶಾ ಭೋಸ್ಲೆ ಬಹಳ ಆತ್ಮೀಯರಾಗಿದ್ದರು. ಹಿರಿಯರಾದ ಲತಾ ಮಂಗೇಶ್ಕರ್ ಎಲ್ಲಿಗೇ ಹೋದರು ಆಶಾ ಅನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಲತಾ ಶಾಲೆಗೆ ಹೋದಲು ಆಶಾ ಅನ್ನು ಕರೆದುಕೊಂಡು ಹೋಗುತ್ತಿದ್ದರು. ಇದು ಒಬ್ಬ ಶಿಕ್ಷಕಿಗೆ ಇಷ್ಟವಾಗದೆ ಒಂದು ಶುಲ್ಕದಲ್ಲಿ ಇಬ್ಬರಿಗೆ ಕಲಿಸಲಾಗದು ಎಂದು ಹೇಳಿ ಆಶಾ ಅನ್ನು ಮನೆಯಲ್ಲಿ ಬಿಟ್ಟು ಬರುವಂತೆ ಹೇಳಿದ್ದರು. ಆದರೆ ಇದಕ್ಕೆ ಒಪ್ಪದ ಲತಾ ಮಂಗೇಶ್ಕರ್ ಶಾಲೆಯನ್ನೇ ಬಿಟ್ಟುಬಿಟ್ಟರು. ಬಹಳ ಸಣ್ಣ ವಯಸ್ಸಿಗೆ ತಂದೆಯನ್ನು ಈ ಸಹೋದರಿಯರು ಕಳೆದುಕೊಂಡರು. ಲತಾ ಅವರೇ ಹಾಡು ಹಾಡಿ, ಅಭಿನಯ ಮಾಡಿ ಕುಟುಂಬವನ್ನು ಸಾಕಿದರು. ಆದರೆ ಆಶಾ ಮಧ್ಯದಲ್ಲಿಯೇ ಕುಟುಂಬವನ್ನು ಬಿಟ್ಟು ಹೊರಟು ಬಿಟ್ಟರು ಇದು ಲತಾಗೆ ತೀವ್ರ ಆಘಾತ ತಂದಿತು.

  ಕನ್ನಡದಲ್ಲಿಯೂ ಹಾಡಿರುವ ಸಹೋದರಿಯರು

  ಕನ್ನಡದಲ್ಲಿಯೂ ಹಾಡಿರುವ ಸಹೋದರಿಯರು

  ಲತಾ ಮಂಗೇಶ್ಕರ್ ಭಾರತ ಕಂಡ ಅತ್ಯದ್ಭುತ ಹಾಡುಗಾರ್ತಿ. ಲತಾ ಮಂಗೇಶ್ಕರ್‌ಗೆ ಈಗ 91 ವರ್ಷ ವಯಸ್ಸು. 1967 ರಲ್ಲಿ ಬಿಡುಗಡೆ ಆಗಿದ್ದ ಕನ್ನಡ ಸಿನಿಮಾ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾದಲ್ಲಿ ಎರಡು ಹಾಡುಗಳನ್ನು ಲತಾ ಮಂಗೇಶ್ಕರ್ ಹಾಡಿದ್ದರು. ಇನ್ನು ಆಶಾ ಭೋಸ್ಲೆ, ಕನ್ನಡದ 'ಮತ್ತೆ ಮುಂಗಾರು' ಸಿನಿಮಾದ 'ಹೇಳದೇ ಕಾರಣ' ಹಾಡನ್ನು ಹಾಡಿದ್ದಾರೆ.

  English summary
  Singer Lata Mangeshkar talked about rivalry with sister Asha Bhosle. She said Asha did some things in her young age that as a sister could not agree.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X