»   » ರಾಧಿಕಾ ಭಾವಿ ಪತಿಯಿಂದ ರಿಲೀಸ್ ಆಯ್ತು 'ದೊಡ್ಮನೆ' 4ನೇ ಹಾಡು

ರಾಧಿಕಾ ಭಾವಿ ಪತಿಯಿಂದ ರಿಲೀಸ್ ಆಯ್ತು 'ದೊಡ್ಮನೆ' 4ನೇ ಹಾಡು

Posted By:
Subscribe to Filmibeat Kannada

ದೊಡ್ಡ ಸಮಾರಂಭ ಮಾಡಿ, ಒಂದಷ್ಟು ದೊಡ್ಡ-ದೊಡ್ಡ ಜನರನ್ನು ಕರೆತಂದು, ಆಡಿಯೋ ರಿಲೀಸ್ ಮಾಡುವ ಟ್ರೆಂಡ್ ಕನ್ನಡ ಚಿತ್ರರಂಗದಲ್ಲಿ ಕೊಂಚ ಕಮ್ಮಿ ಆಗುತ್ತಿದೆ. ಈಗೇನಿದ್ರೂ, ಸ್ಟಾರ್ ನಟ ಅಥವಾ ನಟಿಯರಿಂದ ದಿನಕ್ಕೊಂದು ಹಾಡುಗಳನ್ನು ಯುಟ್ಯೂಬ್ ನಲ್ಲಿ ರಿಲೀಸ್ ಮಾಡೋದು ಒಂಥರಾ ಫ್ಯಾಶನ್ ಆಗಿದೆ.

ಈ ಟ್ರೆಂಡ್ ಅನ್ನು 'ರಾಮ್ ಲೀಲಾ' ಚಿತ್ರತಂಡದವರು ಮಾಡಿದ್ದರು, ಇದೀಗ ಇದೇ ಸ್ಟೈಲನ್ನು ಪುನೀತ್ ರಾಜ್ ಕುಮಾರ್ ಮತ್ತು ದುನಿಯಾ ಸೂರಿ ಕಾಂಬಿನೇಷನ್ ನ 'ದೊಡ್ಮನೆ ಹುಡುಗ' ಫಾಲೋ ಮಾಡುತ್ತಿದೆ.['ದೊಡ್ಮನೆ ಹುಡ್ಗ'ನ ಗಾನ ಕಿಚ್ಚ ಸುದೀಪ್ ರಿಂದ ಅನಾವರಣ]


Listen to Dodmane Huduga 4th song 'C/O Dodmane'

ಮೊದಲ ಹಾಡನ್ನು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿ ಅವರು ಬಿಡುಗಡೆ ಮಾಡಿದ್ರು, ಎರಡನೇ ಹಾಡನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ದು, ಮೂರನೇ ಹಾಡನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ರು.


ಹೀಗೆ ಒಬ್ಬೊಬ್ಬ ಸ್ಟಾರ್ ಗಳ ಕೈಯಿಂದ ಹೊರಬರುತ್ತಿರುವ 'ದೊಡ್ಮನೆ ಹುಡುಗ'ನ ನಾಲ್ಕನೇ ಹಾಡನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ವಿಶೇಷ ಏನಪ್ಪಾ ಅಂದ್ರೆ, ಈ ಚಿತ್ರದಲ್ಲಿ ರಾಧಿಕಾ ಪಂಡಿತ್ ಅವರು ನಟಿಸುತ್ತಿದ್ದು, ಇದೀಗ ಯಶ್ ಅವರ ಹಸ್ತದಿಂದ ಭಾವಿ ಪತ್ನಿ ರಾಧಿಕಾ ಅವರ ಹಾಡು ಬಿಡುಗಡೆ ಆಗಿದೆ.['ದೊಡ್ಮನೆ ಹುಡುಗ'ನಿಗೆ ಭಾಳ 'ಥ್ರಾಸ್ ಆಕ್ಕತಿ' ನೋಡಿ...]


Listen to Dodmane Huduga 4th song 'C/O Dodmane'

ಈ ಹಾಡಿನಲ್ಲಿ ಪುನೀತ್ ಜೊತೆ ರಾಧಿಕಾ ಅವರು ಸಖತ್ ಆಗಿ ಡ್ಯಾನ್ಸ್ ಮಾಡಿದ್ದು, ರಾಧಿಕಾ ಅವರ ಡ್ಯಾನ್ಸ್ ನೋಡಿ ಭಾವಿ ಪತಿ ಯಶ್ ಅವರು ಸಿಕ್ಕಾಪಟ್ಟೆ ಹೊಗಳಿದ್ದಾರೆ.


ಅದ್ಧೂರಿ ಸೆಟ್ ನಲ್ಲಿ, ಕಲರ್ ಫುಲ್ ಕಾಸ್ಟ್ಯೂಮ್ ನಲ್ಲಿ ಶೂಟ್ ಆದ "ಬೆಡಗು ಬಿನ್ನಾಣ, ಬೂರ್ನಾಸು, ಬೂದ್ ಗುಂಬಳ, ಬೊಟ್ಟು, ಬೈತಲೆ ಮೇಕಪ್ಪು ಸಾಕೆನ್ಲಾ" ಹಾಡನ್ನು ಯೋಗರಾಜ್ ಭಟ್ರು ಬರೆದಿದ್ದು, ವಿ.ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.['ಅಭಿಮಾನಿಗಳೇ ನಮ್ಮನೆ ದೇವ್ರು...' ಹಾಡನ್ನ ಇನ್ನೂ ಕೇಳಿಲ್ವಾ.?]


ಗಾಯಕ ಟಿಪ್ಪು ಮತ್ತು ಗಾಯಕಿ ಸಂಗೀತ ರವೀಂದ್ರನಾಥ್ ಹಾಡಿರುವ 'C/O ದೊಡ್ಮನೆ' ಹಾಡನ್ನು ನೀವೂ ಕೇಳಿ...English summary
Kannada Actor Puneeth Rajkumar and Kannada Actress Radhika Pandith starrer Kannada Movie 'Dodmane Huduga' 4th song 'C/O Dodmane' has been released by Yash. Listen to the song here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada