For Quick Alerts
  ALLOW NOTIFICATIONS  
  For Daily Alerts

  ಶರಣ್ ಗೆ ಸರ್ವಿಸ್ ಮಾಡಿದ ಪವರ್ ಸ್ಟಾರ್ ಪುನೀತ್

  By Suneetha
  |

  ಪವನ್ ಒಡೆಯರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ನಟರಾಜ ಸರ್ವಿಸ್' ಬಹುತೇಕ ತೆರೆ ಕಾಣಲು ಸಜ್ಜಾಗಿ ನಿಂತಿದೆ. ಆರಂಭದಿಂದಲೂ ಒಂದಲ್ಲಾ ಒಂದು ವಿಶೇಷತೆಗಳಿಂದ ಸುದ್ದಿ ಮಾಡುತ್ತಾ ಬಂದಿದ್ದ ಈ ಚಿತ್ರದ ಟೈಟಲ್ ಸಾಂಗ್ ಗೆ ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ‍ಕುಮಾರ್ ಧ್ವನಿ ನೀಡಿದ್ದಾರೆ.

  "ಪೆಟ್ರೋಲ್ ಮುಗಿದರೆ ನಟರಾಜ ಸರ್ವೀಸ್, ಪಂಕ್ಚರ್ ಆದ್ರೆ ನಟರಾಜ ಸರ್ವಿಸ್, ಲವ್ ಕೈ ಕೊಟ್ಟು ಹೋದ್ರೆ ನಟರಾಜ ಸರ್ವಿಸ್' ಎಂಬ ಹಾಡನ್ನು ಪುನೀತ್ ರಾಜ್ ‍ಕುಮಾರ್ ಅವರು ಸಖತ್ ಎಂಜಾಯ್ ಮಾಡುತ್ತಾ ಹಾಡಿದ್ದಾರೆ. ಜೊತೆಗೆ ಈ ಹಾಡು ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.[ಭಿಕ್ಷುಕರಾಗಿ 128 ರೂಪಾಯಿ ಸಂಪಾದಿಸಿದ ಕಾಮಿಡಿ ಕಿಂಗ್ ಶರಣ್]

  ಪ್ರೀತಿಯ ಸುತ್ತ ಸುತ್ತುವ ಮನುಷ್ಯನ ಜೀವನ ಚಕ್ರವನ್ನು ತೆಳು ಹಾಸ್ಯದ ಸ್ಪರ್ಶದೊಂದಿಗೆ ಧ್ವನಿಸುವಂತಹ ಈ ಹಾಡನ್ನು ನಿರ್ದೇಶಕ ಪವನ್ ಒಡೆಯರ್ ಅವರೇ ಬರೆದಿದ್ದಾರೆ. ಈ ಹಾಡಿಗೆ ಅನೂಪ್ ಸಿಳೀನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

  Making of Kannada Movie 'Nataraja Service' title song

  ಕಾಮಿಡಿ ನಟ ಶರಣ್ ಹಾಗೂ ಗ್ಲಾಮರ್ ಡಾಲ್ ಮಯೂರಿ ಅಭಿನಯದ ಈ ಚಿತ್ರಕ್ಕೆ ಎನ್.ಎಸ್ ರಾಜ್ ‍ಕುಮಾರ್ ಬಂಡವಾಳ ಹೂಡಿದ್ದು, ಪುನೀತ್ ರಾಜ್ ಕುಮಾರ್ ಅರ್ಪಿಸುತ್ತಿದ್ದಾರೆ.

  ಇನ್ನೇನು ಸದ್ಯದಲ್ಲಿಯೇ ಆಡಿಯೋ ಬಿಡುಗಡೆ ಸಮಾರಂಭ ನಡೆಯಲಿದೆ. ಆ ಬಳಿಕ ಶೀಘ್ರದಲ್ಲಿಯೇ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲು ನಿರ್ದೇಶಕ ಪವನ್ ತಯಾರಿ ನಡೆಸುತ್ತಿದ್ದಾರೆ.[125 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ ಸರ್ವಿಸ್ ಮಾಡಿದ ಶರಣ್-ಮಯೂರಿ]

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹಾಡಿರುವ ಚಿತ್ರದ ಟೈಟಲ್ ಸಾಂಗ್ ನ ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ.....

  English summary
  Watch the Making Of Nataraja Service Title Song sung by Power Star Puneeth Rajkumar, starring Actor Sharan Hruday, Actress Mayuri Kyatari and others. Music Composed by J Anoop Seelin. The movie is Directed by Pawan Wadeyar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X