»   » ವಸಿಷ್ಠ ಸಿಂಹ ಧ್ವನಿಯಲ್ಲಿ ಮೂಡಿದ ಈ ಹಾಡಿಗೆ ಮರುಳಾಗದವರಿಲ್ಲ.!

ವಸಿಷ್ಠ ಸಿಂಹ ಧ್ವನಿಯಲ್ಲಿ ಮೂಡಿದ ಈ ಹಾಡಿಗೆ ಮರುಳಾಗದವರಿಲ್ಲ.!

Posted By:
Subscribe to Filmibeat Kannada

ನಾಯಕ, ಖಳ ನಾಯಕ, ಪೋಷಕ ನಟ ಹೀಗೆ ಅಭಿನಯದಲ್ಲಿ ಯಾವುದೇ ಪಾತ್ರವಿದ್ದರು ಅದಕ್ಕೆ ಸೂಕ್ತ ಅಭಿನಯ ಮಾಡುವ ಪ್ರತಿಭಾನ್ವಿತ ನಟ ವಸಿಷ್ಠ ಸಿಂಹ. ಇಷ್ಟು ದಿನ ವಸಿಷ್ಠ ಸಿಂಹ ಅವರ ಖಡಕ್ ಆಕ್ಟಿಂಗ್ ನೋಡಿ ಖುಷಿ ಪಟ್ಟಿದ್ದ ನಿಮ್ಗೆಲ್ಲಾ ಈಗೊಂದು ಸರ್ಪ್ರೈಸ್ ಸಿಕ್ಕಿದೆ.

ಹೌದು, ಯಶಸ್ವಿ ನಟ ಈಗ ಗಾಯಕನಾಗಿದ್ದಾರೆ. 'ದಯವಿಟ್ಟು ಗಮನಿಸಿ' ಚಿತ್ರದ ಮೆಲೋಡಿ ಹಾಡಿಗೆ ವಸಿಷ್ಠ ಸಿಂಹ ಧ್ವನಿಯಾಗಿದ್ದಾರೆ. ಜಯಂತ್ ಕಾಯ್ಕಿಣಿ ಅವರ ಅದ್ಭುತ ಸಾಹಿತ್ಯ ಹಾಗೂ ಅನೂಪ್ ಸೀಳಿನ್ ಮನಸೆಳೆಯುವ ಸಂಗೀತದಲ್ಲಿ ಮೂಡಿ ಬಂದಿರುವ ''ಮರೆತೇ ಹೋದೇನು, ಹೊರಟ ಕಾರಣ......'' ಈ ಹಾಡು ಈಗ ಎಲ್ಲರ ಮನಸೋರೆಗೊಳಿಸುತ್ತಿದೆ. ಈ ಹಾಡನ್ನ ಕೇಳಿದ ನಂತರ ಎಲ್ಲರೂ ವಸಿಷ್ಠ ಅವರ ಧ್ವನಿಗೆ ಅಭಿಮಾನಿಗಳಾಗುತ್ತಿದ್ದಾರೆ ಎಂದ್ರೆ ನಂಬಲೇಬೇಕು.['ದಯವಿಟ್ಟು ಗಮನಿಸಿ'.. ಇದು ಸಂಗೀತ ಭಟ್ ಸಿಹಿ ಮುತ್ತಿನ ಕಥೆ]

Marete Hodenu Unplugged Song From Vasista Simha Voice

ವಸಿಷ್ಠ ಸಿಂಹ ಅವರು ಮೂಲತಃ ಗಾಯಕರಾಗಬೇಕು ಎಂಬ ಆಸೆ ಹೊಂದಿದ್ದರು. ಆದ್ರೆ, ಗಾಯನದ ಬದಲಾಗಿ ನಟರಾದರು. ಈ ಹಿಂದೆ 'ಕಿರಿಕ್ ಪಾರ್ಟಿ' ಚಿತ್ರದಲ್ಲೂ ಕೂಡ ವಸಿಷ್ಠ ಸಿಂಹ ಅವರಿಂದ ಒಂದು ಹಾಡನ್ನ ಹಾಡಿಸಲಾಗಿತ್ತು. ಈಗ ಮತ್ತೊಂದು ಮೆಲೋಡಿ ಹಾಡು ಇವರ ಕಂಚಿನ ಕಂಠದಲ್ಲಿ ಮೂಡಿಬಂದಿದೆ.['ದಯವಿಟ್ಟು ಗಮನಿಸಿ' ಈ ನಾಲ್ವರು ನಟಿಯರು ಯಾರು?]

ಅಂದ್ಹಾಗೆ, ಚಿತ್ರ ಸಾಹಿತಿ ರೋಹಿತ್ ಪದಕಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ 'ದಯವಿಟ್ಟು ಗಮನಿಸಿ'. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬಿಡುಗಡೆಯ ಸನಿಹದಲ್ಲಿದೆ. ರಘು ಮುಖರ್ಜಿ, ಸಂಯುಕ್ತ ಹೊರನಾಡು, ರಾಜೇಶ್ ನಟರಾಜ್, ವಸಿಷ್ಠ ಸಿಂಹ, ಸಂಗೀತಾ ಭಟ್, ಸುಕೃತಾ ವಾಗ್ಲೆ, ಭಾವನಾ ರಾವ್, ಪ್ರಕಾಶ್ ಬೆಳವಾಡಿ, ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

English summary
Actor Vasista Simha Sung a Marethe Hodenu Song in Dayavittu Gamanisu Movie. Here is the Beautiful Melody song.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada