For Quick Alerts
  ALLOW NOTIFICATIONS  
  For Daily Alerts

  'ದಯವಿಟ್ಟು ಗಮನಿಸಿ' ಈ ನಾಲ್ವರು ನಟಿಯರು ಯಾರು?

  By Bharath Kumar
  |

  ಟೈಟಲ್ ಮೂಲಕವೇ ವಿಶೇಷವೆನಿಸಿಕೊಂಡಿರುವ ಚಿತ್ರ 'ದಯವಿಟ್ಟು ಗಮನಿಸಿ'. ಟೈಟಲ್ ಗೆ ತಕ್ಕಂತೆ ಈಗಾಗಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಕುತೂಹಲ ಕೆರಳಿಸಿರುವ ಈ ಸಿನಿಮಾ, ಇದೀಗ ಮತ್ತೊಂದು ಹೊಸ ಪೋಸ್ಟರ್ ರಿಲೀಸ್ ಮಾಡಿದೆ.

  ಮೊದಲ ಪೋಸ್ಟರ್ ನಲ್ಲಿ ಚಿತ್ರದಲ್ಲಿ ಅಭಿನಯಿಸಲಿರುವ ನಾಯಕ ನಟರ ಅರ್ಧಮುಖವನ್ನ ಪರಿಚಯಿಸಿದ್ದ ಚಿತ್ರತಂಡ, ಈಗ ನಾಯಕಿಯರನ್ನ ಪರಿಚಯಿಸಿದೆ. ಮುಂದೆ ಓದಿ.....

  'ದಯವಿಟ್ಟು ಗಮನಿಸಿ' ಹೊಸ ಪೋಸ್ಟರ್

  'ದಯವಿಟ್ಟು ಗಮನಿಸಿ' ಹೊಸ ಪೋಸ್ಟರ್

  ಟೈಟಲ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ 'ದಯವಿಟ್ಟು ಗಮನಿಸಿ' ಚಿತ್ರದ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಈ ಬಾರಿ ಪೋಸ್ಟರ್ ನಲ್ಲಿ ನಾಲ್ಕು ನಟಿಯರನ್ನ ಪರಿಚಯ ಮಾಡಿದೆ.

  ನಾಲ್ಕು ನಟಿಯರು ಯಾರು?

  ನಾಲ್ಕು ನಟಿಯರು ಯಾರು?

  ನಟಿ ಭಾವನಾ ರಾವ್, ಸುಕೃತಾ ವಾಗ್ಲೆ, ಸಂಗೀತ ಭಟ್ ಮತ್ತು ಸಂಯುಕ್ತ ಹೊರನಾಡು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಮೊದಲ ನೋಟ ಗಮನ ಸೆಳೆದಿದೆ.

  ಕುತೂಹಲ ಮೂಡಿಸಿದ್ದ ಮೊದಲ ಪೋಸ್ಟರ್

  ಕುತೂಹಲ ಮೂಡಿಸಿದ್ದ ಮೊದಲ ಪೋಸ್ಟರ್

  ಇದಕ್ಕೂ ಮುಂಚೆ 'ದಯವಿಟ್ಟು ಗಮನಿಸಿ' ಚಿತ್ರದ ಮೊದಲ ಪೋಸ್ಟರ್ ನ್ನ ಡಾ.ಶಿವಕುಮಾರ ಸ್ವಾಮಿಗಳು ಬಿಡುಗಡೆ ಮಾಡಿದ್ದರು. ರಘು ಮುಖರ್ಜಿ, ವಸಿಷ್ಠ ಸಿಂಹ ಮುಖ್ಯ ಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದು, ಪ್ರಕಾಶ್ ಬೆಳವಾಡಿ, ರಾಜೇಶ್ ನಟರಾಜ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

  ರೋಹಿತ್ ಪದಕಿ ನಿರ್ದೇಶನ

  ರೋಹಿತ್ ಪದಕಿ ನಿರ್ದೇಶನ

  ಈ ಚಿತ್ರವನ್ನ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವುದು ರೋಹಿತ್ ಪದಕಿ. ನಾಲ್ಕು ಪಾತ್ರಗಳನ್ನಿಟ್ಟುಕೊಂಡು ಕಥೆ ಮಾಡಿರುವ ರೋಹಿತ್ ಪದಕಿಗೆ ಇದು ಚೊಚ್ಚಲ ಸಿನಿಮಾ. ಇದಕ್ಕು ಮುಂಚೆ ಚಿತ್ರ ಸಾಹಿತಿ ಮತ್ತು ಸಂಭಾಷಣೆಕಾರನಾಗಿ ರೋಹಿತ್ ಕೆಲಸ ಮಾಡಿದ್ದಾರೆ. ಕಳೆದ ವರ್ಷ ತೆರೆಕಂಡ 'ಆಟಗಾರ' ಚಿತ್ರಕ್ಕೆ ರಿಸೆಂಟ್ ಆಗಿ ಸಂಭಾಷಣೆ ಬರೆದಿದ್ದರು ರೋಹಿತ್.

  ರಿಲೀಸ್ ಗೆ ರೆಡಿ

  ರಿಲೀಸ್ ಗೆ ರೆಡಿ

  ಕೃಷ್ಣ ಸಾರ್ಥಕ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದು, ಅರವಿಂದ್ ಕಶ್ಯಪ್ ಕ್ಯಾಮೆರಾ ಹಿಂದೆ ಕೆಲಸ ಮಾಡಿದ್ದಾರೆ. ಸದ್ಯ, ಚಿತ್ರೀಕರಣ ಕಂಪ್ಲೀಟ್ ಮಾಡಿರುವ 'ದಯವಿಟ್ಟು ಗಮನಿಸಿ' ಬಿಡುಗಡೆಗೆ ಸಜ್ಜಾಗಿದೆ.

  English summary
  'Dayavittu Gamanisi' New Poster Released. Directed by Rohith Padaki. Raghu Mukherjee, Samyuktha Hornad, Bhavana Rao, Vasishta N Simha, Sangeetha Bhatt, Rajesh Nataranga, Prakash Belavadi and Sukrutha Wagle Play Prominent roles in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X