»   » ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದನೆ ಹಾಡು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದನೆ ಹಾಡು

Posted By:
Subscribe to Filmibeat Kannada

ಸಿಗರೇಟ್ ಗೆ ನಮೋ ನಮಃ ಎಂದು ಹೇಳಿರುವವರು ಬೇಜಾನ್ ಜನ ಇದ್ದಾರೆ. ಆದರೆ ಇಲ್ಲಿ ಸಿಗರೇಟ್ ಸಿನಿಮಾ ತಂಡದಿಂದ 'ನಮೋ' ಅರ್ಥಾತ್ ಸೋಮವಾರ 26ರ ಸಂಜೆ ಪ್ರಮಾಣವಚನ ಸ್ವೀಕರಿಸುತ್ತಿರುವ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಒಂದು ಅಭಿನಂದನಾ ಗೀತೆಯನ್ನು ಸಿದ್ಧ ಮಾಡಲಾಗಿದೆ.

ಈ ಹಿಂದೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕುರಿತಾಗಿ 'ಟೀ' ಬಗ್ಗೆ ಹಾಡು ರಚಿಸಲಾಗಿತ್ತು. ಕನ್ನಡ ಸಿನಿಮಾ ರಂಗ ಶೀಘ್ರವಾಗಿ ದೇಶದ ನೂತನ ಪ್ರಧಾನ ಮಂತ್ರಿಗೆ ಅಭಿನಂದನೆ ಹೇಳುತ್ತಿರುವುದು ಇದೇ ಮೊದಲು. [ಖಾಲಿ ಕ್ವಾಟ್ರು ಆಯ್ತು ಈಗ ವಿಜಯ್ ಕೈಲಿ ಸಿಗರೇಟ್!]

Narendra Modi

ನಿರ್ದೇಶಕ ಲಕ್ಕಿ ಶಂಕರ್ ಅವರೇ ರಚಿಸಿರುವ "ಸ್ವಾರ್ಥ ವೇಷ, ಸರ್ವನಾಶ, ರಾಹುದೋಷ ಎಲ್ಲ ಮೋಸ, ಕ್ರೇಜ್ ಇಂದ ಯಾಕೆ ಗೂಸಾ, ಮೋದಿ ಒಬ್ರೆ ಇಲ್ಲಿ ಭಾಷಾ, ಮೋದಿ ಸೂಪರ್ ಹೊಡೆದ್ರು ಬಂಪರ್, ಮೋದಿ ಸೂಪರ್ ಆದ್ರೂ ಲೀಡರ್..." ಎಂಬ ಗೀತೆಯನ್ನು ಸಂಗೀತ ನಿರ್ದೇಶಕ ಕೆ ಎಂ ಇಂದ್ರ ಹಾಗೂ ಲಕ್ಕಿ ಶಂಕರ್ ಅವರೇ ಹಾಡಿದ್ದಾರೆ.

'ಸಿಗರೇಟ್' ಚಿತ್ರದಲ್ಲಿ ಎಲ್ಲ ಕಲಾವಿದರೂ ಸೇರಿ ಈ ನರೇಂದ್ರ ಮೋದಿ ಅಭಿನಂದನಾ ಗೀತೆಯಲ್ಲಿ ಪಾಲ್ಗೊಳ್ಳುವವರು ಎಂದು ನಿರ್ದೇಶಕ ಲಕ್ಕಿ ಶಂಕರ್ ತಿಳಿಸಿದ್ದಾರೆ. ಶಿವ ಶಂಕರ್ ಫಿಲ್ಮ್ ಫ್ಯಾಕ್ಟರಿ ಯಲ್ಲಿ ತಯಾರಾಗುತ್ತಿರುವ 'ಸಿಗರೇಟ್' ಕನ್ನಡ ಚಿತ್ರದಲ್ಲಿ ಹಾಸ್ಯ, ರೊಮಾನ್ಸ್, ಮನ ತಟ್ಟುವ ಸನ್ನಿವೇಶಗಳನ್ನು ನಿರ್ದೇಶಕರು ಹದವಾಗಿ ಬೆರೆಸಿಸಿದ್ದಾರೆ.

ಬೆಂಗಳೂರಿನ ಮಾನ್ಯತ ಟೆಕ್ ಪಾರ್ಕ್, ಶಿರ್ಕಿ ಅಪಾರ್ಟ್ ಮೆಂಟ್ ಕೆಂಗೇರಿ, ಸದಾಶಿವನಗರ, ವಿಮಾನ ನಿಲ್ದಾಣ ಸುತ್ತಮುತ್ತ, ನಾಗರಭಾವಿ, ಒರಿಯನ್ ಮಾಲ್ ಹಾಗೂ ಇನ್ನಿತರ ಕಡೆ ಶೇ.60ರಷ್ಟು ಚಿತ್ರೀಕರಣ ಮಾಡಲಾಗಿದೆ. ನಿರ್ದೇಶಕ ಹಾಗೂ ನಟ ನಾಗಶೇಖರ್ ಅವರು ಪ್ರಮುಖ ಪಾತ್ರದಾರಿ.

ನಾಗೇಂದ್ರ, ರೂಪಶ್ರೀ, ರಕ್ಷಿತಾ ಪೊನ್ನಮ್ಮ, ಸಾಧು ಕೋಕಿಲ, ಗಿರಿಜಾ ಲೋಕೇಶ್, ಸುಧಾಕರ್, ಸುಧಾ ಬೆಳವಾಡಿ, ಲಕ್ಕಿ, ಕುರಿ ಪ್ರತಾಪ್, ಮಿತ್ರ, ವಿಜಯ್ ಚೆಂಡೂರ್ ಸಹ ಇದ್ದಾರೆ. ಶಿವು ಕಬ್ಬಿಣ ಅವರು ಈ ಸಿನನಿಮಾದ ನಿರ್ಮಾಪಕರು. ರಮೇಶ್ ರಾಜ್ ಅವರ ಛಾಯಾಗ್ರಹಣ, ಇಂದ್ರಸೇನ ಅವರ ಸಂಗೀತ. ಸುಪ್ರೀತ್ ಅವರ ಸಂಕಲನ, ಮಾಲೂರ್ ಶ್ರೀನಿವಾಸ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)

English summary
A Kannada film 'Cigarette' by Shivshanker Film Factory in the direction of Lucky Shanker (who directed '90' and 'Devraane' and found success) is giving a salutation to Prime Minister Narendra Modi in a song. 
Please Wait while comments are loading...