»   » ಅಪ್ರೈಸಲ್ ಟೈಮ್ನಲ್ಲಿ ಕತ್ತಲಲ್ಲಿ ಕರಡಿಗೆ ನೆನಪಾಯ್ತು

ಅಪ್ರೈಸಲ್ ಟೈಮ್ನಲ್ಲಿ ಕತ್ತಲಲ್ಲಿ ಕರಡಿಗೆ ನೆನಪಾಯ್ತು

By: * ಅಮರನಾಥ್ ವಿ.ಬ್ಯಾಡಗಿ, ಬೆಂಗಳೂರು
Subscribe to Filmibeat Kannada
Kathlalli Karadige remix lyrics
ಅಪ್ರೈಸಲ್ ಟೈಮಲ್ಲಿ ಯಾವ ತಪ್ಪನ್ನು ಮಾಡೋಕೆ ಯಾವತ್ತೂ ಹೋಗ್-ಬಾರ್ದು ರೀ...

ಅತ್ಲಾಗೆ ಆ ಮ್ಯಾನೇಜರ್ ಇತ್ಲಾಗೆ ಈ ಮ್ಯಾನೇಜರ್ ಯಾವತ್ತೂ ಇರಬಾರ್ದು ರೀ...

ಹೊಸ ಮ್ಯಾನೇಜರ್ ಮನ್ಸಲ್ಲಿ ಇಂಪ್ರೆಶನ್ ಮೂಡಿದ್ರೂ ಗ್ಯಾರಂಟಿ
ಹಳೆ ಮ್ಯಾನೇಜರ್ ಕೆಮ್ಮಿದಿರೆ ಸ್ಲಿಪ್ಪೇ ಗ್ಯಾರಂಟಿ
ಒಬ್ಬರನ್ನೆ ನಂಬ್ಕೊಂಡು ಚೆನ್ನಾಗಿರೀ...
ಇನ್ನೊಂದು ಕೆಲ್ಸ ಯಾವ್ದಕ್ಕೂ ಹುಡ್ಕೊಂಡಿರೀ...

ಆತ್ಲಾಗೆ ಆ ಮ್ಯಾನೇಜರ್ ಇತ್ಲಾಗೆ ಈ ಮ್ಯಾನೇಜರ್ ಯಾವತ್ತೂ ಇರಬಾರ್ದು ರೀ
ಅಪ್ರೈಸಲ್ ಟೈಮಲ್ಲಿ ಯಾವ ತಪ್ಪನ್ನು ಮಾಡೋಕೆ ಯಾವತ್ತೂ ಹೋಗ್-ಬಾರ್ದು ರೀ...

ಮ್ಯಾನೇಜರ್ ಮನ್ಸಲ್ಲಿ ಏನೇನಿದೆ... ತಿಳ್ಕೊಳ್ಳೋ ತಾಕತ್ ನಮಗೆಲ್ಲಿದೆ
ತಪ್ಪು ಮಾಡದ ಎಂಪ್ಲಾಯಿ ಇಲ್ಲ
ಪ್ರಮೋಶನ್ ಗಳಿಸೋಲ್ಲ ಕೆಲ್ಸ ಮಾಡಿದ್ದರೂ
ಇಂಪ್ರೆಶನ್ ಆಗಲ್ಲ ಡೌಟಿಲ್ಲದೆ
ಅನುಮಾನವಿರದ ಮ್ಯಾನೇಜರ್ ಇಲ್ಲ

ಹಾ... ನಿಯತ್ತಿಗೆ ಮೈಲೇಜು ಕಮ್ಮಿ
ಬೆಣ್ಣೆ ಹಚ್ಚೋ ಮಂದಿ ಬಂದ್ಮೇಲೆ ಹಿಂಗಾಯ್ತು ಸ್ವಾಮಿ
ಪಿ.ಎಂ.ಎಸ್-ನಿಂದ ನೋವು ಕಂಪಲ್ಸರಿ
ಯಾವುದಕ್ಕೂ ಸೈಡ್ ಬಿಸಿನೆಸ್ ಇಟ್ಕೊಂಡಿರಿ

ಅಪ್ರೈಸಲ್ ಟೈಮಲ್ಲಿ ಯಾವ ತಪ್ಪನ್ನು ಮಾಡೋಕೆ ಯಾವತ್ತೂ ಹೋಗ್-ಬಾರ್ದು ರೀ...
ಅತ್ಲಾಗೆ ಆ ಮ್ಯಾನೇಜರ್ ಇತ್ಲಾಗೆ ಈ ಮ್ಯಾನೇಜರ್ ಯಾವತ್ತೂ ಇರಬಾರ್ದು ರೀ

ರೇಟಿಂಗ್ ಕಡಿಮೆ ಬಂದ್ರೆ ಪಾರ್ಟಿ ಕೊಡಿ
ಬೇರೊಂದು ಯೋಚನೆಗೆ ನಿಮ್ಗೆ ಅವಕಾಶ ಕೊಡಿ
ಮನಸಲ್ಲಿ ವಿಷಾದ ಬರಬಾರ್ದು ಕಣ್ರಿ
ಟೈಮಿದ್ರೆ ಒಂದ್ಚೂರು ಇಂಟರ್ವ್ಯೂ ಕೊಡಿ
ಕಾಲ್ ಬರಬಹುದು ಕಾಯ್ತಾ ಇರಿ
ಕೆಲ್ಸಕ್ಕೆ ಗ್ಯಾಪು ಕೊಡಬಾರದು ಕಣ್ರೀ
ಮೆಳ್ಳುಗಣ್ಣಂತೆ ನಮ್ಮ ಈ ಅಪ್ರೈಸಲ್ಲು
ಯಾಮಾರಿ ನಮಗೆ ಅನ್ಕೊಂಡ್ರೆ ನೋವು
ಎಲ್ಲಾ ನಂಬೋಕೆ ಹೋಗ್-ಬಾರ್ದು ರೀ
ನಂಬೋಕೆ ಬಾಸೊಬ್ರು ಇರಬೇಕು ಕಣ್ರೀ

ಅಪ್ರೈಸಲ್ ಟೈಮಲ್ಲಿ ಯಾವ ತಪ್ಪನ್ನು ಮಾಡೋಕೆ ಯಾವತ್ತೂ ಹೋಗ್-ಬಾರ್ದು ರೀ...
ಬಾಕಿ ಜೀವನಕ್ಕೆ ನಂಬ್ಕೊಂಡು ಇರಬಾರದು ಅಂತೈತಿ ಅಪ್ರೈಸಲ್ಲು ಕಣ್ರೀ

ಅಸಲಿ ಹಾಡಿನ ಬಗ್ಗೆ : ಪಡ್ಡೆ ಹುಡುಗರಿಗೆ ಮತ್ತು ಅಪ್ಪಟ ಸಂಗೀತ ಪ್ರಿಯರಿಗೆ ಸಮವಾಗುವಂತೆ ಆಲ್ಬಮ್‌ನಲ್ಲಿ ಹರಿಕೃಷ್ಣ ಸಂಗೀತ ನೀಡಿದ್ದರು.

ಕತ್ಲಲ್ಲಿ ಕರಡಿಗೆ... ಜಾಮೂನು ತಿನಿಸೋಕೆ ಯಾವತ್ತೂ ಹೋಗಬಾರ್ದೂರಿ (ಹಾಡಿರುವವರು: ಹರಿಕೃಷ್ಣ) ಸಾಹಿತ್ಯ: ಯೋಗರಾಜ್ ಭಟ್

ಜಾನಪದ ಬಿಟ್‌ನಲ್ಲಿ ಸಾಗುವ ಹಾಡು. ಎರಡೆರಡು ಹುಡುಗಿಯರನ್ನು ಪ್ರೀತಿಸಿದರೆ ಜೀವನ ಎಲ್ಲಿಗೆ ಸಾಗುತ್ತದೆ ಎನ್ನುವುದನ್ನು ಭಟ್ರು ತಮ್ಮ ಎಂದಿನ ಶೈಲಿಯಲ್ಲಿ ಹೇಳಿದ್ದಾರೆ ಮತ್ತು ಹಾಡಿದ್ದರು. ಆದರೆ, ಭಟ್ಟರಿಗೆ ತಮ್ಮ ಗಾಯನ ಇಷ್ಟವಾಗದೆ ಕೊನೆಗೆ ಹರಿಕೃಷ್ಣ ಅವರ ದನಿ ನೀಡಿದ ಟ್ರ್ಯಾಕ್ ಅನ್ನೆ ಉಳಿಸಿಕೊಂಡು ಚಿತ್ರದಲ್ಲೂ ಅದನ್ನೇ ಬಳಸಿಕೊಂಡರು.

ಹಾಡಿನ ಟ್ಯೂನ್ ಅಷ್ಟಕಷ್ಟೇ ಆದರೂ ಸಾಹಿತ್ಯದ ಮೂಲಕ ಹಿಟ್ ಆದ ಈ ಗೀತೆ ಹಲವು ರೀತಿ ರಿಮೀಕ್ಸ್ ಗೀತ ಸಾಹಿತ್ಯ ಪಡೆದು ಈಗಲೂ ಜನಪ್ರಿಯತೆ ಉಳಿಸಿಕೊಂಡಿದೆ.

English summary
Popular song 'Kattalali Karadina..' from Paramathma movie is now gets software company appraisal remix by techie Amarnath VB. This remix song describes how software engineers should behave at apraisal time. Original Song lyrics penned by Yograj Bhat.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada