twitter
    For Quick Alerts
    ALLOW NOTIFICATIONS  
    For Daily Alerts

    ಆಡಿಯೋ: 'ಕೆಜಿಎಫ್ 2'ಗೂ ದುಪ್ಪಟ್ಟು ಮೊತ್ತಕ್ಕೆ ಮಾರಾಟವಾದ 'ಪೊನ್ನಿಯಿನ್ ಸೆಲ್ವನ್'!

    |

    ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಈಗ ದಾಖಲೆಗಳ ಪರ್ವ ಶುರುವಾಗಿದೆ. ಒಂದು ಸಿನಿಮಾ ನಿರ್ಮಿಸಿದ ದಾಖಲೆಯನ್ನು ಮತ್ತೊಂದು ಸಿನಿಮಾ ಮುರಿಯುತ್ತಿದೆ. ಅದನ್ನು ಮುರಿದು ಮತ್ತೊಂದು ದಾಖಲೆ ನಿರ್ಮಿಸುತ್ತಿದೆ ಇನ್ನೊಂದು ಸಿನಿಮಾ.

    ಸಿನಿಮಾಗಳ ನಡುವೆ ಒಂದು ರೀತಿಯ ಸ್ಪರ್ಧೆಯೇ ಏರ್ಪಟ್ಟಿದೆ ದಕ್ಷಿಣ ಭಾರತ ಚಿತ್ರರಂಗದಲ್ಲಿ. ಆದರೆ ಇದು ಆರೋಗ್ಯಕರ ಸ್ಪರ್ಧೆಯೇ ಆಗಿದೆ.

    'ಪುಷ್ಪ' ಮಾಡಿದ ದಾಖಲೆಯನ್ನು 'RRR' ಮುರಿಯಿತು, ನಂತರ ಬಂದರ 'ಕೆಜಿಎಫ್ 2' 'RRR'ನ ದಾಖಲೆಗಳನ್ನು ಅಳಿಸಿ ಹಾಕಿತು. ಈಗ ಮತ್ತೊಂದು ದಕ್ಷಿಣ ಭಾರತದ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ಸುಳಿವು ಕೊಟ್ಟಿದೆ. ಅದುವೇ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್'.

    ಐಶ್ವರ್ಯಾ ರೈ, ವಿಕ್ರಂ, ಕಾರ್ತಿ, ತ್ರಿಶಾ ಸೇರಿದಂತೆ ಬಹುತಾರಾಗಣವುಳ್ಳ ಐತಿಹಾಸಿಕ ಕತೆ ಹೊಂದಿದ 'ಪೊನ್ನಿಯಿನ್ ಸೆಲ್ವನ್' ಸಿನಿಮಾವನ್ನು ಭಾರತದ ಜನಪ್ರಿಯ ನಿರ್ದೇಶಕ ಮಣಿರತ್ನಂ ನಿರ್ದೇಶಿಸಿದ್ದು, ಸಂಗೀತ ನೀಡಿರುವುದು ಆಸ್ಕರ್ ವಿಜೇತ ಎ.ಆರ್.ರೆಹಮಾನ್. ಈ ಸಿನಿಮಾದ ಮೊದಲ ಭಾಗ ಬಿಡುಗಡೆ ಆಗಲು ಇನ್ನೂ ಎರಡು ತಿಂಗಳು ಬಾಕಿ ಇದೆ. ಈಗಲೇ ಸಿನಿಮಾದ ಬಿಡುಗಡೆಪೂರ್ವ ವ್ಯಾಪಾರ ಆರಂಭವಾಗಿದ್ದು ಭಾರಿ ಮೊತ್ತಕ್ಕೆ ಹಕ್ಕುಗಳ ಮಾರಾಟ ನಡೆದಿದೆ.

    ಕೆಜಿಎಫ್ 2 ಆಡಿಯೋ ಹಕ್ಕು ಖರೀದಿಸಿದ್ದ ಲಹರಿ ಸಂಸ್ಥೆ

    ಕೆಜಿಎಫ್ 2 ಆಡಿಯೋ ಹಕ್ಕು ಖರೀದಿಸಿದ್ದ ಲಹರಿ ಸಂಸ್ಥೆ

    'ಕೆಜಿಎಫ್ 2' ಸಿನಿಮಾದ ಆಡಿಯೋ ಹಕ್ಕುಗಳು ಬರೋಬ್ಬರಿ 10 ಕೋಟಿ ರುಪಾಯಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿದ್ದವು. ಎಷ್ಟೋ ಬಾಲಿವುಡ್ ಸಿನಿಮಾಗಳ ಮ್ಯೂಸಿಕ್ ಹಕ್ಕುಗಳು ಸಹ ಇಷ್ಟು ಬೆಲೆಗೆ ಮಾರಾಟವಾಗಿರಲಿಲ್ಲ. ಭಾರಿ ದುಬಾರಿ ಮೊತ್ತ ನೀಡಿ ಲಹರಿ ವೇಲು ಅವರು 'ಕೆಜಿಎಫ್ 2' ಸಿನಿಮಾದ ಎಲ್ಲ ಭಾಷೆಯ ಆಡಿಯೋ ಹಕ್ಕುಗಳನ್ನು ಖರೀದಿ ಮಾಡಿದ್ದರು. ಅದರಿಂದ ಉತ್ತಮ ಲಾಭವನ್ನೂ ಪಡೆದುಕೊಂಡರು. ಆದರೆ ಈಗ ಆ ದಾಖಲೆಯನ್ನು 'ಪೊನ್ನಿಯಿನ್ ಸೆಲ್ವನ್' ಮುರಿದಿದೆ.

    27 ಕೋಟಿಗೆ ಮಾರಾಟವಾದ ಆಡಿಯೋ ಹಕ್ಕು

    27 ಕೋಟಿಗೆ ಮಾರಾಟವಾದ ಆಡಿಯೋ ಹಕ್ಕು

    'ಪೊನ್ನಿಯಿನ್ ಸೆಲ್ವನ್' ಸಿನಿಮಾದ ಆಡಿಯೋ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಈ ಸಿನಿಮಾದ ಆಡಿಯೋ ಹಕ್ಕನ್ನು ಪ್ರಖ್ಯಾತ ಸಂಗೀತ ಸಂಸ್ಥೆ ಟಿಪ್ಸ್ ಬರೋಬ್ಬರಿ 24 ಕೋಟಿ ರುಪಾಯಿ ನೀಡಿ ಖರೀದಿ ಮಾಡಿದೆ. ಎ.ಆರ್.ರೆಹಮಾನ್ ಈ ಸಿನಿಮಾಕ್ಕೆ ಸಂಗೀತ ನೀಡಿರುವ ಕಾರಣ ಸಿನಿಮಾದ ಹಾಡುಗಳಿಗೆ ಭಾರಿ ಪ್ರಮಾಣದ ಬೇಡಿಕೆ ಇದೆ. ಹಾಗಾಗಿ ಟಿಪ್ಸ್ ಸಂಸ್ಥೆ ಇಷ್ಟು ದೊಡ್ಡದ ಮೊತ್ತ ನೀಡಿ ಆಡಿಯೋ ಹಕ್ಕನ್ನು ಖರೀದಿ ಮಾಡಿದೆ.

    ಎರಡು ವರ್ಷ ಸಂಶೋಧನೆ ಮಾಡಿ ಸಿನಿಮಾ ಮಾಡಿರುವ ರೆಹಮಾನ್

    ಎರಡು ವರ್ಷ ಸಂಶೋಧನೆ ಮಾಡಿ ಸಿನಿಮಾ ಮಾಡಿರುವ ರೆಹಮಾನ್

    ಎ.ಆರ್.ರೆಹಮಾನ್-ಮಣಿರತ್ನಂ ಜೋಡಿ ಭಾರತದ ಸಿನಿಪ್ರಿಯರು, ಸಂಗೀತಪ್ರಿಯರು ಎಂದೂ ಮರೆಯದ ಹಾಡುಗಳನ್ನು ಈವರೆಗೆ ನೀಡುತ್ತಾ ಬಂದಿದ್ದಾರೆ. 'ಪೊನ್ನಿಯಿನ್ ಸೆಲ್ವನ್' ಸಿನಿಮಾದಲ್ಲಿಯೂ ಈ ಮ್ಯಾಜಿಕ್ ಮುಂದುವರೆಯಲಿದೆ ಎನ್ನಲಾಗುತ್ತಿದೆ. ಅದರಲ್ಲಿಯೂ ಈ ಸಿನಿಮಾಕ್ಕೆ ಸಂಗೀತ ನೀಡಲು ಎ.ಆರ್.ರೆಹಮಾನ್ ಎರಡು ವರ್ಷ ಸಂಶೋಧನೆ ಮಾಡಿ ತಮಿಳುನಾಡು, ಬಾಲಿಯಲ್ಲಿನ ಹಳೆಯ ಸಂಗೀತ ವಾದ್ಯಗಳನ್ನು ಹುಡುಕಿ ಅವುಗಳನ್ನೇ ಬಳಸಿ ಸಂಗೀತ ಒದಗಿಸಿದ್ದಾರೆ ಎನ್ನಲಾಗುತ್ತಿದೆ.

    ಸೆಪ್ಟೆಂಬರ್ 30 ರಂದು ಸಿನಿಮಾ ಬಿಡುಗಡೆ

    ಸೆಪ್ಟೆಂಬರ್ 30 ರಂದು ಸಿನಿಮಾ ಬಿಡುಗಡೆ

    ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ದೃಶ್ಯ ವೈಭವದ ಜೊತೆಗೆ ಸಂಗೀತ ವೈಭವವೂ ಇರಲಿದೆ ಎನ್ನಲಾಗುತ್ತಿದೆ. 'ಪೊನ್ನಿಯಿನ್ ಸೆಲ್ವನ್' ಹೆಸರಿನ ಸರಣಿ ಕತೆಗಳನ್ನು ಆಧರಿಸಿ ಸಿನಿಮಾ ಇದಾಗಿದ್ದು, ಚೋಳರ ಸಾಮ್ರಾಜ್ಯದ ಕತೆಯನ್ನು ಸಿನಿಮಾ ಒಳಗೊಂಡಿರಲಿದೆ. ಸಿನಿಮಾದಲ್ಲಿ ಐಶ್ವರ್ಯಾ ರೈ, ನಟ ವಿಕ್ರಮ್, ಜಯಂ ರವಿ, ಕಾರ್ತಿ, ತ್ರಿಶಾ, ಐಶ್ವರ್ಯ ಲಕ್ಷ್ಮಿ, ಶರತ್ ಕುಮಾರ್, ವಿಕ್ರಂ ಪ್ರಭು, ಸೋಭಿತಾ ಧುಲಿಪಾಲ, ಪ್ರಭು, ಪ್ರಕಾಶ್ ರಾಜ್, ಪಾರ್ಥಿಬನ್, ಕಿಶೋರ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್ 30 ರಂದು ಬಿಡುಗಡೆ ಆಗಲಿದೆ.

    English summary
    Tamil Movie Ponniyin Selvan 1's audio rights sold to TIPS company for 24 crore rs. This is huge amount for audio rights.
    Saturday, July 9, 2022, 9:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X