»   » ಪಬ್ಲಿಕ್ ಮ್ಯೂಸಿಕ್ ಉದ್ಘಾಟನೆಗೆ ಎಆರ್ ರೆಹಮಾನ್

ಪಬ್ಲಿಕ್ ಮ್ಯೂಸಿಕ್ ಉದ್ಘಾಟನೆಗೆ ಎಆರ್ ರೆಹಮಾನ್

By: ಜೀವನರಸಿಕ
Subscribe to Filmibeat Kannada

ಕಿರುತೆರೆಗೆ ಪ್ರಪಂಚಕ್ಕೆ ಮತ್ತೊಂದು ಚಾನೆಲ್ ಲೋಕಾರ್ಪಣೆಯಾಗ್ತಿರೋ ಸಂಗತಿ ಫಿಲ್ಮಿಬೀಟ್ ತುಂಬಾ ಮೊದಲೇ ವರದಿ ಮಾಡಿತ್ತು. ಕರ್ನಾಟಕ ರಾಜ್ಯದ ನಾಲ್ಕನೇ ಮ್ಯೂಸಿಕ್ ಚಾನೆಲ್ ಆಗಿ 'ಪಬ್ಲಿಕ್ ಮ್ಯೂಸಿಕ್' ನಿಮ್ಮ ಮನೆಮನೆಗಳನ್ನ ತಲುಪಲಿದೆ. ಮತ್ತೊಂದು ವಿಶೇಷ ಅಂದ್ರೆ ಪಬ್ಲಿಕ್ ಮ್ಯೂಸಿಕ್ ಕನ್ನಡಿಗರ ಮ್ಯೂಸಿಕ್ ಚಾನೆಲ್ ಅನ್ನೋದು ವಿಶೇಷ.

ಇದೇ ಸೆ.28ಕ್ಕೆ ರಾಜ್ಯದಾದ್ಯಂತ ಸಂಗೀತ ಪ್ರೇಮಿಗಳ ಮನತಣಿಸೋಕೆ ಬರಲಿರೋ ಪಬ್ಲಿಕ್ ಮ್ಯೂಸಿಕ್ ಪಬ್ಲಿಕ್ ಟಿವಿಯ ಮತ್ತೊಂದು ಕೊಡುಗೆ. ಪಬ್ಲಿಕ್ ಟಿವಿ ಆರಂಭವಾಗಿ ಎರಡೇ ವರ್ಷಗಳಲ್ಲಿ ಎರಡನೇ ಸ್ಥಾನದಲ್ಲಿ ಬಂದು ನಿಂತಿದೆ. ಪಬ್ಲಿಕ್ ಟಿವಿಯ ಯಶಸ್ಸು ಪಬ್ಲಿಕ್ ಮ್ಯೂಸಿಕ್ ಶುರುವಾಗೋಕೆ ಮೂಲ ಕಾರಣ. [ಪಬ್ಲಿಕ್ ಟಿವಿ ರಂಗಣ್ಣನ ಜತೆ ವೀಕೆಂಡ್ ವಿತ್ ರಮೇಶ್]

ಕನ್ನಡದ ಖ್ಯಾತ ನಿರ್ಮಾಪಕ ರಾಕಲೈನ್ ವೆಂಕಟೇಶ್, ಲಹರಿ ಆಡಿಯೋ ಸಂಸ್ಥೆಯ ಮನೋಹರ ನಾಯ್ಡು ಮತ್ತು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್ ಆರ್ ರಂಗನಾಥ್ ನಿರ್ದೇಶಕರಾಗಿರೋ ಪಬ್ಲಿಕ್ ಮ್ಯೂಸಿಕ್ ಮುನ್ನಡೆಸ್ತಿರೋದು ಹರೀಶ್ ನಾಗರಾಜು.

ಸೆ.28ರ ಭಾನುವಾರ ಸಂಜೆ 6 ಗಂಟೆಯಿಂದ 9 ಗಂಟೆಯ ವರೆಗೂ ನಡೆಯೋ ವಿಭಿನ್ನ ಸಮಾರಂಭದಲ್ಲಿ ಸಂಗೀತ ಲೋಕದ ದಿಗ್ಗಜರು ಪಬ್ಲಿಕ್ ಮ್ಯೂಸಿಕ್ ಗೆ ಶುಭಹಾರೈಸಲಿದ್ದಾರೆ. ಪಬ್ಲಿಕ್ ಮ್ಯೂಸಿಕ್ ಉದ್ಘಾಟನೆಗೆ ಯಾರೆಲ್ಲ ಬರ್ತಾರೆ ಏನ್ ವಿಶೇಷ ಅನ್ನೋ ಮತ್ತಷ್ಟು ಡೀಟೈಲ್ಸ್ ಈ ಸ್ಲೈಡ್ ನಲ್ಲಿ ಓದಿ ನೋಡಿ.

ಚೆನ್ನೈನಿಂದ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್

ಪಬ್ಲಿಕ್ ಮ್ಯೂಸಿಕ್ ಲೆಕ್ಕಾಚಾರದಂತೆ ಚೆನ್ನೈನಿಂದ ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಪಬ್ಲಿಕ್ ಟಿವಿಗೆ ಶುಭಹಾರೈಸಲಿದ್ದಾರೆ. ಪಬ್ಲಿಕ್ ಟಿವಿಗಾಗಿ ಎ ಆರ್ ರೆಹಮಾನ್ ಒಂದು ಟ್ಯೂನ್ ಮಾಡಿ ಹಾಡಿದ್ರೂ ಜೈ ಹೋ ಪಬ್ಲಿಕ್ ಮ್ಯೂಸಿಕ್ ಅನ್ನೋದು ಗ್ಯಾರಂಟಿ.

ಲತಾ ಮಂಗೇಶ್ಕರ್ ಮುಂಬೈನಿಂದ ಲೈವ್

ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್ ಮುಂಬೈನಿಂದ ಪಬ್ಲಿಕ್ ಟಿವಿಗೆ ಶುಭಹಾರೈಸೋಕೆ ತಯರಾಗ್ತಿದ್ದಾರಂತೆ. ಸಾವಿರಾರು ಸುಮಧುರ ಹಾಡುಗಳ ಗಾನಕೋಗಿಲೆ ಲತಾ ಮಂಗೇಶ್ಕರ್ ಪಬ್ಲಿಕ್ ಮ್ಯೂಸಿಕ್ ನಲ್ಲಿ ಕಾಣಿಸಿಕೊಂಡ್ರೆ ಸಂಗೀತ ರಸಿಕರಿಗೆ ರೋಮಾಂಚನ ಖಂಡಿತ.

ಅಮೀರ್ ಖಾನ್ ಕರೆಸುವ ಯೋಜನೆ

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಪಬ್ಲಿಕ್ ಮ್ಯೂಸಿಕ್ ಉದ್ಘಾಟನೆಗೆ ಬರುವ ಪ್ಲಾನ್ ಕೂಡ ಇತ್ತು. ಆದರೆ ಅಮೀರ್ ಸದ್ಯ ಫಾರೀನ್ ನಲ್ಲಿ ಇರೋದ್ರಿಂದ ಇದು ಅಸಾಧ್ಯ ಅನ್ನೋ ಮಾತು ಕೇಳಿಬರ್ತಿದೆ.

ಸೂಪರ್ ಸ್ಟಾರ್ ರಜನಿ ಶುಭಾಶಯ

ಪಬ್ಲಿಕ್ ಮ್ಯೂಸಿಕ್ ಗೆ ಸೂಪರ್ ಸ್ಟಾರ್ ರಜನಿಕಾಂತ್ ಶುಭಾಶಯ ಹೇಳ್ತಾರೆ. ಅಚ್ಚ ಕನ್ನಡದಲ್ಲಿ ರಜನಿ ಐದು ನಿಮಿಷ ಮಾತ್ನಾಡಿ ಕನ್ನಡದ ರಜನಿ ಕನ್ನಡದ ಚಾನೆಲ್ ಒಂದಕ್ಕೆ ಶುಭ ಹಾರೈಸ್ತಾರೆ. ರಜನಿ-ರಾಕ್ ಲೈನ್ ಮತ್ತು ರಜನಿ-ರಂಗನಾಥ್ ಹೆಚ್ ಆರ್ ಉತ್ತಮ ಗೆಳೆಯರಾಗಿರೋ ಕಾರಣ ರಜನಿ ರಂಗು ಪ್ರೇಕ್ಷಕರನ್ನ ಥ್ರಿಲ್ಲಾಗಿಸಲಿದೆ.

ಕನ್ನಡದ ಕ್ರೇಜಿಸ್ಟಾರ್ ಇದ್ದೇ ಇರ್ತಾರೆ

ಅಚ್ಚ ಕನ್ನಡಿಗರ ಮೊದಲ ಮ್ಯೂಸಿಕ್ ಚಾನೆಲ್ ಲಾಂಚ್ ಮಾಡೋಕೆ ಕ್ರೇಜಿಸ್ಟಾರ್ ರವಿಚಂದ್ರನ್ ಪಬ್ಲಿಕ್ ಮ್ಯೂಸಿಕ್ ಸ್ಟುಡಿಯೋದಲ್ಲಿರ್ತಾರೆ. ಕ್ರೇಜಿಸ್ಟಾರ್ ರವಿಮಾಮ ಅಲ್ಲೇ ಗಿಟಾರ್ ಹಿಡಿದು 'ಹಠವಾದಿ'ಯಂತೆ ಒಂದು ಟ್ಯೂನ್ ಮಾಡೋ ಯೋಚನೆಯೂ ಇದೆಯಂತೆ.

ಪಬ್ಲಿಕ್ ಟಿವಿ ವಿಭಿನ್ನ ಆರಂಭ ಪಡ್ಕೊಂಡಿತ್ತು.

ಪಬ್ಲಿಕ್ ಟಿವಿ ಉದ್ಘಾಟನೆ ವಿಭಿನ್ನವಾಗಿ ನಡೆದಿತ್ತು.ಅಂದು ಮುಖ್ಯಮಂತ್ರಿಯಾಗಿದ್ದ ಡಿವಿ ಸದಾನಂದಗೌಡ, ಕ್ರೇಜಿಸ್ಟಾರ್ ರವಿಚಂದ್ರನ್, ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನ್ಯೂಸ್ ಓದೋ ಮೂಲಕ ಪಬ್ಲಿಕ್ ಟಿವಿ ಆರಂಭ ಪಡ್ಕೊಂಡಿತ್ತು. ಮೊದಲ ನೊಟದಲ್ಲೇ ಗಮನ ಸೆಳೆದ ಚಿತ್ರ ಈಗ ಟಿವಿ9 ನಂತರದ ಸ್ಥಾನದಲ್ಲಿ ರಾರಾಜಿಸ್ತಿದೆ.

English summary
Karnataka-based media firm, Writemen Media which operates regional news channel, Public TV – will launch a Kannada music channel, Public Music. The channel will be launched on 28th September 2014.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada