For Quick Alerts
  ALLOW NOTIFICATIONS  
  For Daily Alerts

  'ಯುವರತ್ನ' ಹಾಡಿನಲ್ಲಿ ಕಾಣಿಸಿಕೊಂಡ ದಿಗ್ಗಜರು: ಪುನೀತ್ ಸಿನಿಮಾದಲ್ಲಿ ಸಚಿನ್, ಪಿ ವಿ ಸಿಂಧು

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾದ ಪ್ರಮುಖ ಹಾಡು ರಿಲೀಸ್ ಆಗಿದೆ. ಸೋಲ್ ಆಫ್ ಯುವರತ್ನ ಅಂತನೇ ಹೇಳುತ್ತಿದ್ದ ಪಾಠಶಾಲಾ ಹಾಡು ಪವರ್ ಸ್ಟಾರ್ ಅಭಿಮಾನಿಗಳ ಮನಗೆದ್ದಿದೆ. ಕಾಲೇಜು ದಿನಗಳ ಬ್ಯಾಕ್ ಡ್ರಾಪ್ ನಲ್ಲಿ ಬರುವ ಈ ಹಾಡು ಯುವಕರ ಗಮನ ಸೆಳೆಯುತ್ತಿದೆ.

  ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಯುವರತ್ನ ಸಿನಿಮಾ ಈಗಾಗಲೇ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿದೆ. ಸದ್ಯ ರಿಲೀಸ್ ಆಗಿರುವ ಪಾಠಶಾಲಾ ಹಾಡು ಅಭಿಮಾನಿಗಳಿಗೆ ಮತ್ತಷ್ಟು ಇಷ್ಟವಾಗಿದ್ದು, ಯುವರತ್ನನನ್ನು ತೆರೆಮೇಲೆ ನೋಡಲು ಕಾತರರಾಗಿದ್ದಾರೆ. ಮುಂದೆ ಓದಿ..

  ಮತ್ತೆ ಕಿರುತೆರೆಯಲ್ಲಿ ಪುನೀತ್ ರಾಜ್ ಕುಮಾರ್: ಪವರ್ ಸ್ಟಾರ್ ಶೋ ಯಾವುದು?

  ಸಂತೋಷ್ ಆನಂದ್ ರಾಮ್ ಸಾಹಿತ್ಯ, ವಿಜಯ್ ಪ್ರಕಾಶ್ ಧ್ವನಿ

  ಸಂತೋಷ್ ಆನಂದ್ ರಾಮ್ ಸಾಹಿತ್ಯ, ವಿಜಯ್ ಪ್ರಕಾಶ್ ಧ್ವನಿ

  ಪಾಠಶಾಲಾ ಹಾಡಿಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಹಿತ್ಯ ರಚಿಸಿದ್ದಾರೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ. ತೆಲುಗಿನ ಸಂಗೀತ ನಿರ್ದೇಶಕ ಎಸ್ ತಮನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಹಾಡಿನ ವಿಶೇಷ ಎಂದರೆ ಹಾಡಿನಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಸೇರಿದಂತೆ ಅನೇಕ ದಿಗ್ಗಜರು ಕಾಣಿಸಿಕಂಡಿದ್ದಾರೆ.

  ಪುನೀತ್ 'ಯುವರತ್ನ' ಸಿನಿಮಾದಲ್ಲಿ 'ರಾಧಾ ರಮಣ' ಖ್ಯಾತಿಯ ನಟಿ ಶ್ವೇತಾ ಪ್ರಸಾದ್

  ಪಾಠಶಾಲಾ ಹಾಡಿನಲ್ಲಿ ದಿಗ್ಗಜರು

  ಪಾಠಶಾಲಾ ಹಾಡಿನಲ್ಲಿ ದಿಗ್ಗಜರು

  ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಎನ್ನುವ ಸಾಲುಗಳು ಪಾಠಶಾಲಾ ಹಾಡಿನಲ್ಲಿದ್ದು, ಖ್ಯಾತ ನಾಮರು ಕಾಣಿಸಿಕೊಳ್ಳುತ್ತಾರೆ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸ, ಉಪೇಂದ್ರ ಮತ್ತು ಕಾಶಿನಾಥ್, ಹಂಸಲೇಖ ಮತ್ತು ವಿ ಮನೋಹರ್ ಸೇರಿದಂತೆ ಖ್ಯಾತನಾಮರ ಫೋಟೋಗಳು ಹಾಡಿನಲ್ಲಿ ಕಾಣಿಸಿಕೊಂಡಿದೆ.

  ಸಚಿನ್ ಮತ್ತು ಪಿವಿ ಸಿಂಧು

  ಸಚಿನ್ ಮತ್ತು ಪಿವಿ ಸಿಂಧು

  ಅದೇ ಸಮಯದಲ್ಲಿ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಮತ್ತು ಕೋಚ್ ಗೋಪಿಚಂದ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ರಾಮಕಾಂತ್ ಅಚ್ರೆಕರ್ ಫೋಟೋಗಳು ಸಹ ಕೊಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

  ಏಪ್ರಿಲ್ 1ಕ್ಕೆ ರಿಲೀಸ್

  ಏಪ್ರಿಲ್ 1ಕ್ಕೆ ರಿಲೀಸ್

  ಯುವರತ್ನ ಸಿನಿಮಾದಲ್ಲಿ ಪ್ರಕಾಶ್ ರೈ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿಗಂತ್, ಧನಂಜಯ್ ಮತ್ತು ರಾಧಿಕಾ ಶರತ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ. ಚಿತ್ರದಲ್ಲಿ ಪುನೀತ್ ಗೆ ನಾಯಕಿಯಾಗಿ ಸಯೇಶಾ ಕಾಣಿಸಿದ್ದಾರೆ. ಬಹುನಿರೀಕ್ಷೆಯ ಯುವರತ್ನ ಸಿನಿಮಾ ಏಪ್ರಿಲ್ 1ಕ್ಕೆ ರಿಲೀಸ್ ಆಗುತ್ತಿದೆ.

  English summary
  Power star Puneeth Rajkumar starrer Yuvarathnaa Patashala song released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X