»   » ಯಶ್ ರಿಲೀಸ್ ಮಾಡಿದ್ದ 'ರಾಜರಥ' ಹಾಡಿಗೆ ಸಿಕ್ಕಿದೆ ದೊಡ್ಡ ರೆಸ್ಪಾನ್ಸ್

ಯಶ್ ರಿಲೀಸ್ ಮಾಡಿದ್ದ 'ರಾಜರಥ' ಹಾಡಿಗೆ ಸಿಕ್ಕಿದೆ ದೊಡ್ಡ ರೆಸ್ಪಾನ್ಸ್

Posted By:
Subscribe to Filmibeat Kannada

'ರಾಜರಥ' ಸಿನಿಮಾದ ಮೂರನೇ ಹಾಡು ಕೆಲ ದಿನಗಳ ಹಿಂದೆಯಷ್ಟೆ ರಿಲೀಸ್ ಆಗಿತ್ತು. ನಟ ಯಶ್ ಈ ಹಾಡನ್ನು ಬಿಡುಗಡೆ ಮಾಡಿದ್ದರು. ಈಗ ಆ ಹಾಡು ಯೂ ಟ್ಯೂಬ್ ನಲ್ಲಿ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದಿದೆ.

'ಬೆಂಕಿಯಲ್ಲಿ ಅರಳಿದ ಹೂ' ಚಿತ್ರದ 'ಮುಂದೆ ಬನ್ನಿ..' ಎಂಬ ಸೂಪರ್ ಹಿಟ್ ಹಾಡನ್ನು ಮತ್ತೆ ರೀಕ್ರಿಯೇಟ್ ಮಾಡಲಾಗಿದೆ. ಈ ಹಾಡಿಗೆ ಹೊಸ ಮ್ಯೂಸಿಕ್ ಟಚ್ ನೀಡಿದ್ದು, ಹಾಡು ಕೇಳುವುದಕ್ಕೆ ಹಿತವಾಗಿದೆ. ಅಂದು ಕಮಲ್ ಹಾಸನ್ ಹಾಡಿದ್ದ ಈ ಹಾಡನ್ನು ಇಂದು ನಿರೂಪ್ ಬಂಡಾರಿ ಮತ್ತೆ ಹಾಡಿದ್ದಾರೆ. ಈ ಹಾಡಿನಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಅವರ ಧ್ವನಿ ಇದೆ. ಜೊತೆಗೆ ಸಿನಿಮಾದ ಸಂಗೀತವನ್ನು ಅನೂಪ್ ನಿರ್ವಹಿಸಿದ್ದಾರೆ.

Rajaratha kannada 3rd song getting positive response

'ರಾಜರಥ' ಸಿನಿಮಾ 'ರಂಗಿತರಂಗ' ನಂತರ ಭಂಡಾರಿ ಸಹೋದರರು ಮಾಡುತ್ತಿರುವ ಎರಡನೇ ಸಿನಿಮಾವಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಪುನೀತ್ ರಾಜ್ ಕುಮಾರ್ ಸಿನಿಮಾದ ಒಂದು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅವಂತಿಕಾ ಶೆಟ್ಟಿ, ರವಿಶಂಕರ್, ತಮಿಳು ನಟ ಆರ್ಯ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ತಿಂಗಳ 23 'ರಾಜರಥ' ಪ್ರಯಾಣ ಶುರು ಆಗಲಿದೆ.

English summary
Kannada actor Nirup Bhandari's Rajaratha kannada 3rd song getting positive response. The movie directed by 'Rangitaranga' fame Anup Bandari.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada