For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ವುಡ್ನಲ್ಲೊಂದು ಭರ್ಜರಿ ಆಡಿಯೋ ರಿಲೀಸ್ಗೆ ಸಿದ್ಧತೆ

  By ಜೀವನರಸಿಕ
  |

  ಸದ್ದಿಲ್ಲದಂತೆ ಸ್ಯಾಂಡಲ್ವುಡ್ನಲ್ಲಿ ಹೊಸಬರ ಸಿನಿಮಾವೊಂದು ಆಡಿಯೋ ರಿಲೀಸ್ಗೆ ಸಿದ್ಧತೆ ಮಾಡಿಕೊಳ್ತಿದೆ. ಚಿತ್ರ ಹೊಸಬರದ್ದೇ ಆದ್ರೂ ಆಡಿಯೋ ರಿಲೀಸ್ ಅಬ್ಬರ ಮಾತ್ರ ನಾವೂ ನೀವೂ ನಿರೀಕ್ಷೆ ಮಾಡಿದ್ದಕ್ಕಿಂತ ಒಂದು ರೇಂಜ್ ಮೇಲಿರುತ್ತೆ.

  ಎ.ಆರ್.ಮುರುಗದಾಸ್ ಅವರ ಶಿಷ್ಯ ಅಶ್ರಫ್ ಆಕ್ಷನ್ ಕಟ್ ಹೇಳುತ್ತಿರುವ 'ರಾಕ್ಷಸಿ' ಅನ್ನೋ ಚಿತ್ರ ಶೂಟಿಂಗ್ ಮುಗಿಸಿದೆ. ಚಿತ್ರದ ಟೈಟಲ್ ಅಷ್ಟೇನೂ ವಿಶೇಷ ಅನ್ನಿಸದೇ ಇರಬಹುದು. ಆದ್ರೆ ಇದೊಂಥರಾ ವಿಭಿನ್ನ ಸಿನಿಮಾ ಅಂತಿದೆ ಚಿತ್ರತಂಡ. ಹಾರರ್ ಸಸ್ಪೆನ್ಸ್ ಟಚ್ ಇರೋ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿರೋದು 'ಲವ್ ಇನ್ ಮಂಡ್ಯ' ಹುಡುಗಿ ಸಿಂಧು ಲೋಕನಾಥ್. [ಕಳಸಾ-ಬಂಡೂರಿಗೆ ಸ್ಯಾಂಡಲ್ ವುಡ್ ಕಿಚ್ಚು ; ಯಾರು ಏನು ಹೇಳಿದರು?]

  ಹೊಸಬರೊಬ್ಬರು ನಾಯಕರಾಗಿ ಅಭಿನಯಿಸಿರೋ 'ರಾಕ್ಷಸಿ' ಚಿತ್ರದ ಆಡಿಯೋ ರಿಲೀಸ್ ಬಗ್ಗೆ ಇಷ್ಟೊಂದು ನಿರೀಕ್ಷೆ ಹುಟ್ಟೋಕೆ ಕಾರಣ ಏನು? ಹಾಗಾದ್ರೆ ಇದೂ ಕೂಡ 'ಮುದ್ದು ಮನಸೇ' ಚಿತ್ರದಲ್ಲಿ `ಬಾಸ್' ಆಡಿಯೋ ರಿಲೀಸ್ ಮಾಡ್ತಾರೆ ಅಂತ ಹೇಳಿ ಗಣೇಶನ ಕೈಲಿ ಆಡಿಯೋ ರಿಲೀಸ್ ಮಾಡಿಸೋ ತರಹದ್ದೇ ಗಿಮಿಕ್ಕಾ ಅನ್ಕೊಂಡ್ರೆ ಖಂಡಿತಾ ಅಲ್ಲ..

  ಹಾಗಾದ್ರೆ ಏನಿರುತ್ತೆ ಆಡಿಯೋ ರಿಲೀಸ್ನಲ್ಲಿ? ಯಾರ್ ಬರ್ತಾರೆ.. ನೋಡ್ತಾ ಹೋಗಿ.. ಅಂದ ಹಾಗೆ ಈ ರಾಕ್ಷಸಿ ಸ್ವಮೇಕ್ ಸಿನೆಮಾ ಏನಲ್ಲ. 2014ರಲ್ಲಿ ತಮಿಳಿನಲ್ಲಿ ಬಿಡುಗಡೆಯಾಗಿದ್ದ 'ಪಿಸಾಸು' ಚಿತ್ರದ ಪಡಿಯಚ್ಚು. ಸಿಂಧು ಲೋಕನಾಥ್ ಜೊತೆಯಾಗಿ ನವರಾಸನ್ ಎಂಬಾತ ನಟಿಸುತ್ತಿದ್ದಾರೆ.

  ವಿಶಾಲ್ ಜೊತೆ ತಮಿಳು ನಟರ ದಂಡು

  ವಿಶಾಲ್ ಜೊತೆ ತಮಿಳು ನಟರ ದಂಡು

  ತಮಿಳಿನ ಖ್ಯಾತ ನಟ ವಿಶಾಲ್ ಅವ್ರ ತಂದೆ ಜಿಕೆ ರೆಡ್ಡಿ ಈ ಚಿತ್ರದಲ್ಲೊಂದು ಮುಖ್ಯ ಪಾತ್ರ ಮಾಡಿದ್ದಾರೆ. ಹಾಗಾಗಿ ಚಿತ್ರದ ಆಡಿಯೋ ರಿಲೀಸ್ಗೆ ವಿಶಾಲ್ ಬರಲಿದ್ದಾರೆ. ವಿಶಾಲ್ ಜೊತೆ ಟಾಲಿವುಡ್ನ ಸ್ಟಾರ್ಗಳ ದಂಡು ಕನ್ನಡಕ್ಕೆ ಹರಿಯಲಿದೆ.

  ಸೂರ್ಯ ತಮ್ಮ ಕಾರ್ತಿ

  ಸೂರ್ಯ ತಮ್ಮ ಕಾರ್ತಿ

  ಈ ಹಿಂದೊಮ್ಮೆ ಹಲಗೂರು ರಾಜು ನಿರ್ದೇಶನದ `ಪ್ರೀತಿಯಿಂದ' ಚಿತ್ರದ ಆಡಿಯೋ ರಿಲೀಸ್ಗೆ ಕಾರ್ತಿ ಬರ್ತಾರೆ ಅನ್ನೋದು ಕಾವೇರಿ ನೀರಿನ ವಿವಾದ ವಿಚಾರದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಈಗ ಸೂರ್ಯ ತಮ್ಮ ಕಾರ್ತಿ 'ರಾಕ್ಷಸಿ' ಆಡಿಯೋ ರಿಲೀಸ್‌ಗೆ ಬರ್ತಿದ್ದಾರೆ.

  ವೇದಿಕೆ ಏರಲಿರುವ ಶಿವಕಾರ್ತಿಕೇಯನ್

  ವೇದಿಕೆ ಏರಲಿರುವ ಶಿವಕಾರ್ತಿಕೇಯನ್

  ಟಾಲಿವುಡ್ನ ಭರವಸೆಯ ನಟನಾಗಿ ಬೆಳೆದಿರೋ ಶಿವಕಾರ್ತಿಕೇಯನ್ ಕೂಡ ಬೆಂಗಳೂರಿಗೆ ಬರಲಿದ್ದಾರಂತೆ. ರಾಕ್ಷಸಿ ಚಿತ್ರದ ಆಡಿಯೋ ರಿಲೀಸ್ನಲ್ಲಿ ಈ ರಜನಿ ಮುರುಗನ್ ಸ್ಟಾರ್ ವೇದಿಕೆಯೇರಲಿದ್ದಾರೆ.

  ಪವರ್ ಸ್ಟಾರ್ ಪುನೀತ್ ಇರದಿದ್ದರೆ ಹೇಗೆ?

  ಪವರ್ ಸ್ಟಾರ್ ಪುನೀತ್ ಇರದಿದ್ದರೆ ಹೇಗೆ?

  ತಮಿಳಿನಿಂದ ಇಷ್ಟೆಲ್ಲ ಸ್ಟಾರ್ಗಳಿದ್ದಾಗ ಕನ್ನಡದ ಸ್ಟಾರ್ಗಳು ಬಾರದಿದ್ರೆ ಹೇಗೆ? ಸೋ ಕನ್ನಡದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಸಿಂಧು ಲೋಕನಾಥ್ ಅಭಿನಯದ ರಾಕ್ಷಸಿ ಆಡಿಯೋ ಲಾಂಚ್ನಲ್ಲಿರ್ತಾರೆ ಅಂತಿದೆ ಚಿತ್ರತಂಡ.

  ಹಾರೈಸೋಕೆ ಬರ್ತಿದ್ದಾರೆ ರಿಯಲ್ ಸ್ಟಾರ್ ಉಪ್ಪಿ

  ಹಾರೈಸೋಕೆ ಬರ್ತಿದ್ದಾರೆ ರಿಯಲ್ ಸ್ಟಾರ್ ಉಪ್ಪಿ

  ರಿಯಲ್ ಸ್ಟಾರ್ ಉಪೇಂದ್ರ ಕೂಡ ಹೊಸಬರ ತಂಡಕ್ಕೆ ಶುಭ ಹಾರೈಸೋಕೆ ಈ ಅದ್ಧೂರಿ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಿಂಚು ಹರಿಸಲಿದ್ದಾರೆ. ಹೀಗೆ ಸ್ಟಾರ್ಗಳು ಸೂಪರ್ಸ್ಟಾರ್ಗಳು ಸಂಧಿಸುವ ಆಡಿಯೋ ರಿಲೀಸ್ ಡೇಟ್ ಸದ್ಯದಲ್ಲೇ ಹೊರಬೀಳಲಿದೆ..

  'ಲವ್ ಇನ್ ಮಂಡ್ಯ' ಹುಡುಗಿ ಸಿಂಧು ಲೋಕನಾಥ್

  'ಲವ್ ಇನ್ ಮಂಡ್ಯ' ಹುಡುಗಿ ಸಿಂಧು ಲೋಕನಾಥ್

  ಹಾರರ್ ಸಸ್ಪೆನ್ಸ್ ಟಚ್ ಇರೋ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿರೋದು 'ಲವ್ ಇನ್ ಮಂಡ್ಯ' ಹುಡುಗಿ ಸಿಂಧು ಲೋಕನಾಥ್.

  English summary
  Kannada movie Rakshasi is getting ready for audio release in a big way. Tamil stars Vishal, Karti, Shiva Karthikeyan and Kannada actors Puneeth Rajkumar, Upendra would be arriving to wish the movie team, which has Sindhu Lokanath in the lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X