Just In
Don't Miss!
- News
ರೈತರ ಟ್ರಾಕ್ಟರ್ ಪಡೇರ್ ತಡೆಯಬೇಡಿ; ಪೊಲೀಸರಿಗೆ ಎಚ್ಚರಿಕೆ
- Sports
ಟೆಸ್ಟ್ ಪದಾರ್ಪಣೆ ಹಾಗೂ ಸರಣಿ ಗೆಲುವು, ಕನಸು ನನಸಾದ ಸಂದರ್ಭ: ವಾಶಿಂಗ್ಟನ್ ಸುಂದರ್
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶರಣ್ 'ರಾಂಬೋ 2' ಚಿತ್ರದ ಕಿಕ್ ಕೊಡುವ ಹಾಡು ಕೇಳಿ
ಶರಣ್ ಅಭಿನಯದ 'ರಾಂಬೋ 2' ಸಿನಿಮಾದ ಒಂದು ಹಾಡು ಇದೀಗ ರಿಲೀಸ್ ಆಗಿದೆ. ನಟ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಹಾಡಿರುವ ಪೂರ್ಣ ಹಾಡನ್ನು ಚಿತ್ರತಂಡ ಈಗ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದೆ.
ಈ ಹಿಂದೆ 'ಧಮ್ ಮಾರೋ...' ಎಂಬ ಈ ಹಾಡಿನ ಸಣ್ಣ ಬೀಟ್ ರಿಲೀಸ್ ಮಾಡಲಾಗಿತ್ತು. ಆದರೆ ಇದೀಗ ಪೂರ್ಣ ಹಾಡು ಕೇಳುಗರಿಗೆ ಸಿಕ್ಕಿದೆ. ಈ ಹಾಡಿನ ಮೂಲಕ ಅದಿತಿ ಸಾಗರ್ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ. ನಿನ್ನೆ ರಿಲೀಸ್ ಆಗಿರುವ ಈ ಹಾಡು ಈ ದೊಡ್ಡ ಮಟ್ಟದ ಪ್ರತಿಕ್ರಿಯೆ ಪಡೆದುಕೊಂಡಿದೆ. ತಮ್ಮ ಮೊದಲ ಹಾಡಿನಲ್ಲಿಯೇ ಅವರ ಗಾಯನ ಪ್ರತಿಭೆಯನ್ನು ಅದಿತಿ ಸಾಗರ್ ಸಾಬೀತು ಮಾಡಿದ್ದಾರೆ. ಅವರ ಧ್ವನಿ ನಿಜಕ್ಕೂ ಬೇರೆ ಗಾಯಕರಿಗಿಂತ ತುಂಬ ವಿಭಿನ್ನವಾಗಿದೆ.
ಚಿತ್ರರಂಗಕ್ಕೆ ಕಾಲಿಟ್ಟ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ !
ಅಂದಹಾಗೆ, ಅರ್ಜುನ್ ಜನ್ಯ ಸಂಗೀತ ನೀಡಿದ್ದ ಈ ಹಾಡನ್ನು ಮತು ಎಂಬುವವರು ಬರೆದಿದ್ದರು. 'ರಾಂಬೋ 2' ಚಿತ್ರಕ್ಕೆ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಲಡ್ಡು ಸಿನಿಮಾ ಹೌಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಚಿತ್ರದಲ್ಲಿ ನಟ ಶರಣ್ ಮತ್ತು ನಟಿ ಆಶಿಕಾ ರಂಗನಾಥ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
ಮಗಳ ಗಾಯಕದ ಬಗ್ಗೆ ಮಾತನಾಡಿರುವ ಅರುಣ್ ಸಾಗರ್ ''ಇವತ್ತು ನನಗೆ ಬಹಳ ಖುಷಿ ಆದ ದಿನ. ಎಲ್ಲ ಟೆಕ್ನಿಷಿಯನ್ ಗಳು ಸೇರಿ ನಿರ್ಮಾಣ ಮಾಡುತ್ತಿರುವ 'ರಾಂಬೋ 2'. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅವರ ಮ್ಯೂಸಿಕ್ ಗೆ ನನ್ನ ಮಗಳು ಹಾಡುತ್ತಿದ್ದಾಳೆ. ನನ್ನ ಮಗಳಿಗೆ ಹಾಡುವುದಕ್ಕೆ ಅವಕಾಶ ಮಾಡಿ ಕೊಟ್ಟ ಸ್ನೇಹಿತರಿಗೆ ಪ್ರತಿಯೊಬ್ಬರಿಗೆ ಧನ್ಯವಾದ ಹೇಳುತ್ತೇನೆ. ನಮ್ಮನ್ನು ಹೇಗೆ ನೀವು ಆರ್ಶಿವದಿಸಿದ್ರಿ ಅದೇ ರೀತಿ ನನ್ನ ಮಗಳನ್ನು ಆಶಿರ್ವಾದ ಮಾಡಿ ಬೆಳಸಿ ಅಂತ ಕೇಳಿಕೊಳ್ಳುತ್ತೇನೆ. 'ರಾಂಬೋ 2 'ತಂಡಕ್ಕೆ ಒಳ್ಳೆಯದಾಗಲಿ.'' ಎಂದು ಹೇಳಿದ್ದಾರೆ.