»   » ಟ್ರೆಂಡ್ ಆಯ್ತು 'RCB' ಅಭಿಮಾನಿಗಳಿಗೆ ಜೋಶ್ ಕೊಟ್ಟ ಹಾಡು

ಟ್ರೆಂಡ್ ಆಯ್ತು 'RCB' ಅಭಿಮಾನಿಗಳಿಗೆ ಜೋಶ್ ಕೊಟ್ಟ ಹಾಡು

Posted By:
Subscribe to Filmibeat Kannada

'ಈ ಸಲ ಕಪ್ ನಮ್ದೆ' ಅಂತ ಎಲ್ಲರೂ ಹೇಳುತ್ತಿದ್ದಾರೆ. ಈ ವಾಕ್ಯ ದೊಡ್ಡ ಟ್ರೆಂಡ್ ಆಗಿದೆ. ಅದೇ ರೀತಿ ಆರ್ ಸಿ ಬಿ ತಂಡಕ್ಕೆ ಜೋಶ್ ಕೊಡುವುದಕ್ಕೆ ಈಗ ಒಂದು ಹಾಡು ಬಂದಿದೆ.

ಐ ಪಿ ಎಲ್ ಸೀಸನ್ 11 ನಾಳೆಯಿಂದ ಶುರು ಆಗುತ್ತಿದೆ. ಮ್ಯಾಚ್ ಶುರು ಆಗುವುದಕ್ಕೆ ಮುಂದೆ ಈಗ ಕನ್ನಡದಲ್ಲಿ ಬಂದಿರುವ ಒಂದು ಹಾಡು ಸಖತ್ ಕಿಕ್ ನೀಡುತ್ತಿದೆ. ಆರ್ ಸಿ ಬಿ ಪಾರ್ಟಿ ಅಂಥಮ್ ಈಗ ಸಖತ್ ಸದ್ದು ಮಾಡುತ್ತಿದೆ. ಯೂ ಟ್ಯೂಬ್ ನಲ್ಲಿ ನಿನ್ನೆ ರಿಲೀಸ್ ಆಗಿರುವ ಈ ಹಾಡು 11 ನೇ ಟ್ರೆಂಡಿಂಗ್ ವಿಡಿಯೋ ಆಗಿದೆ. ಜೊತೆಗೆ ಒಂದು ಲಕ್ಷಕ್ಕೂ ಅಧಿಕ ಜನರು ಹಾಡನ್ನು ವೀಕ್ಷಿಸಿದ್ದಾರೆ.

ಐಪಿಎಲ್ 2018: ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ

''ಅಲ್ಲಿ ನೋಡು ಆರ್ ಸಿ ಬಿ, ಇಲ್ಲಿ ನೋಡು ಆರ್ ಸಿ ಬಿ, ಮನೆಯಾಗ್ ನೋಡು, ನಮ್ ಎದೆಯಾಗ್ ನೋಡು ಆರ್ ಸಿ ಬಿ..'' ಎಂಬ ಹಾಡು ಕೇಳುಗರಿಗೆ ಇಷ್ಟ ಆಗಿದೆ. ಕನ್ನಡದ ಪ್ರತಿಭಾವಂತ Rapping ಆಲ್ ಓಕೆ ಈ ಹಾಡನ್ನು ಮಾಡಿದ್ದಾರೆ. ಈ ಹಾಡಿನ ಸಾಹಿತ್ಯ, ನಿರ್ದೇಶನ ಮತ್ತು ಹಾಡಿನಲ್ಲಿ ಆಲ್ ಓಕೆ ಹೆಜ್ಜೆ ಹಾಕಿದ್ದಾರೆ. ಆರ್ ಸಿ ಬಿ ಅಭಿಮಾನಿಗಳಿಗಾಗಿ ಈ ಹಾಡನ್ನು ಡೆಡಿಕೇಟ್ ಮಾಡಲಾಗಿದೆ.

RCB party anthem kannada rap song released.

ಅಂದಹಾಗೆ, ಈ ಬಾರಿಯ ಐ ಪಿ ಎಲ್ ಪಂದ್ಯ ನಾಳೆಯಿಂದ ಶುರು ಆಗುತ್ತಿದೆ. ನಾಳೆ ಮುಂಬೈ ಇಂಡಿಯನ್ ಮತ್ತು ಚೆನೈ ಸೂಪರ್ ಕಿಂಗ್ಸ್ ಪಂದ್ಯ ನಡೆಯಲಿದೆ. ಆರ್ ಸಿ ಬಿ ತಂಡದ ಮೊದಲ ಪಂದ್ಯ ಭಾನುವಾರ ಕೊಲ್ಕತ್ತಾ ವಿರುದ್ಧ ನಡೆಯಲಿದೆ.

ಈ ಸಲ ಕಪ್ ನಮ್ದೆ: ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ

English summary
RCB party anthem kannada rap song released. indian premier league tournament is back again with its 11th edition.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X