For Quick Alerts
  ALLOW NOTIFICATIONS  
  For Daily Alerts

  ಮೋಡಿ ಮಾಡುತ್ತಿದೆ 'ನಿನ್ನ‌ ಸನಿಹಕೆ' ಚಿತ್ರದ ರಘು ದೀಕ್ಷಿತ್ ಹಾಡು

  |

  ಕನ್ನಡದ ಹ್ಯಾಂಡ್‌ಸಮ್ ನಟ ಸೂರಜ್ ಗೌಡ ಹಾಗೂ ಧನ್ಯ ರಾಮ್ ಕುಮಾರ್ ನಟನೆಯಲ್ಲಿ ತಯಾರಾಗಿರುವ 'ನಿನ್ನ ಸನಿಹಕೆ' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಸದ್ಯಕ್ಕೆ ಹಾಡುಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಎರಡು ರೊಮ್ಯಾಂಟಿಕ್ ‌ವಿಡಿಯೋ ಹಾಡುಗಳಿಂದ ಕನ್ನಡ ಚಿತ್ರಾಭಿಮಾನಿಗಳಲ್ಲಿ ವಿಶೇಷ ನಿರೀಕ್ಷೆಯನ್ನ ಹುಟ್ಟಿಸಿದೆ.

  ''ದಿ ಸೌಂಡ್ ಆಫ್ ಕೆಯಾಸ್'' ಎಂಬ ಹೊಸ ಶೈಲಿಯಲ್ಲಿರುವ Rap ಹಾಡು ಈಗ ಗಾಂಧಿನಗರದ ಮಾತಾಗಿದೆ. ರಘು ದೀಕ್ಷಿತ್ ಕಂಪೋಸ್ ಮಾಡಿ ಸ್ವತಃ ಅವರೇ ಹಾಡಿದ್ದಾರೆ. ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದಾರೆ.

  ಪುನೀತ್ ನಟನೆಯ 'ಯುವರತ್ನ' ಚಿತ್ರಕ್ಕೆ ಶುಭಕೋರಿದ ದುನಿಯಾ ವಿಜಯ್

  ''ಯಾರು ಯಾರು ನಾನ್ ಯಾರು ಈ ನಶೆಯೂ ಹೇಳಿದೆ ಪತ್ತೆಯಾ... ಎನ್ನುವ ಕ್ಯಾಚಿ ಸಾಹಿತ್ಯ ಹೊಂದಿರುವ ಈ ಹಾಡು ಕೇಳುವುದಕ್ಕೆ ಸಖತ್ ಮಜವಾಗಿದೆ. ವಿರಹ ಮನಸುಗಳಿಗೆ ನೇರವಾಗಿ ನಾಟುವಂತಿದೆ. ಮ್ಯೂಸಿಕಲಿ ಸಖತ್ ವಿಶೇಷವಾಗಿ ಕಾಣ್ತಿರುವ ನಿನ್ನ ಸನಿಹಕೆ ಸಿನಿಮಾದ ಈ ಹಾಡು ಚಿತ್ರದ ಮೇಲಿನ ಭರವಸೆಯನ್ನ ಮತ್ತಷ್ಟು ಹೆಚ್ಚಿಸಿದೆ.

  ಸೂರಜ್ ಗೌಡ ನಟಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಧನ್ಯ ರಾಮ್ ಕುಮಾರ್ ಚೊಚ್ಚಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

  ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿದ್ದಾರೆ. ಸದ್ಯ ಈ ಲಿರಿಕಲ್ ವಿಡಿಯೋದಿಂದ ಸದ್ದು ಸುದ್ದಿ ಮಾಡ್ತಿರುವ ನಿನ್ನ ಸನಿಹಕೆ ತಂಡ ಇಷ್ಟರಲ್ಲೇ ಟ್ರೈಲರ್ ರಿಲೀಸ್ ಮಾಡುವ ಯೋಜನೆಯಲ್ಲಿದೆ.

  ಬ್ಯಾಕ್ ಟು ಬ್ಯಾಕ್ ಬಹುಭಾಷೆಯಲ್ಲಿ ಕನ್ನಡ ಸಿನಿಮಾಗಳು ಬರ್ತಿ‌ರುವ ಹೊತ್ತಲ್ಲಿ, "ಕನ್ನಡದಲ್ಲಿ ಮಾತ್ರ" ಬಿಡುಗಡೆ ಎಂಬ ಟ್ಯಾಗ್ ಲೈನ್ ನೊಂದಿಗೆ 'ನಿನ್ನ‌ ಸನಿಹಕೆ' ಸಿನಿಮಾ ತಂಡ ಏಪ್ರಿಲ್ 16ಕ್ಕೆ ಪ್ರೇಕ್ಷಕರೆದುರಿಗೆ ಬರ್ತಿದೆ. ವಿಶ್ವದಾದ್ಯಂತ ಕೆ.ಆರ್.ಜಿ ಸ್ಟುಡಿಯೋ ಈ ಚಿತ್ರವನ್ನ ರಿಲೀಸ್ ಮಾಡ್ತಿದೆ.

  English summary
  Suraj Gowda and Dhanya Ramkumar rer starninna sanihake movie set to release on april 16th in theaters. the music raghu dixit.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X