Don't Miss!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- News
Breaking: ಭವಾನಿ ರೇವಣ್ಣಗೆ ಹಾಸನದಿಂದ ಟಿಕೆಟ್ ನೀಡುವಂತೆ ಪ್ರತಿಭಟನೆ
- Technology
ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್ ಲಾಂಚ್!
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Sathish Ninasam: ತಾಯಿ ನೆನೆದು 'ಅಮ್ಮ' ಎಂದು ನೀನಾಸಂ ಸತೀಶ್
ತನ್ನದೇ ವಿಶಿಷ್ಟ ಅಭಿನಯ ಶೈಲಿಯಿಂದ ಮೋಡಿ ಮಾಡಿರುವವರು ನಟ ನೀನಾಸಂ ಸತೀಶ್. ಪ್ರತಿ ಸಿನಿಮಾದಲ್ಲೂ ವಿಭಿನ್ನ ಪಾತ್ರದ ಮೂಲಕವೇ ಗಮನ ಸೆಳೆದಿರುವ ನೀನಾಸಂ ಸತೀಶ್ ಹಲವು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಅಂತೆಯೇ ಇತ್ತೀಚೆಗೆ ಸತೀಶ್ ವಿಡಿಯೋ ಆಲ್ಬಂ ಸಾಂಗ್ ಮಾಡಿದ್ದು, ಅಶರೀರವಾಣಿ ಎಂದು ಹೆಸರಿಟ್ಟಿದ್ದರು. ಈ ಆಲ್ಬಂ ಸಾಂಗ್‌ನಲ್ಲಿ ಸ್ವತಃ ನೀನಾಸಂ ಸತೀಶ್ ಮಗಳು ಮೊದಲ ಬಾರಿಗೆ ನಟಿಸಿದ್ದರು. ಈ ಹಾಡು ಕೂಡ ಸಾಕಷ್ಟು ವೈರಲ್ ಆಗಿತ್ತು.
ಇದೀಗ ಮತ್ತೊಂದು ಹಾಡನ್ನು ನೀನಾಸಂ ಸತೀಶ್ ಹೊರತಂದಿದ್ದಾರೆ. ನೀನಾಸಂ ಸತೀಶ್ ಮೊದಲಿನಿಂದಲೂ ತಾಯಿ ಪ್ರೀತಿಯಲ್ಲೇ ಬೆಳೆದವರು. ಅನೇಕ ಬಾರಿ ತನ್ನ ತಾಯಿಯ ವರ್ಣನೆಯನ್ನು ಸತೀಶ್ ಮಾಡಿದ್ದಾರೆ. ಇತ್ತೀಚೆಗೆ ನೀನಾಸಂ ಸತೀಶ್ ತಾಯಿ ಅನಾರೋಗ್ಯದ ನಿಮಿತ್ತ ಮೃತಪಟ್ಟಿದ್ರು. ಹೀಗಾಗಿ ಅದೇ ನೋವಿನಲ್ಲೇ ಕೆಲ ದಿನ ಶೂಟಿಂಗ್‌ನಿಂದಲೂ ಬ್ರೇಕ್ ತೆಗೆದುಕೊಂಡಿದ್ದರು ಸತೀಶ್. ತಾಯಿಯ ಮೇಲಿನ ಪ್ರೀತಿ ಮತ್ತು ಅವರನ್ನು ಕಳೆದುಕೊಂಡಿರುವ ನೋವನ್ನು ಈ ಹಾಡಿನ ಮೂಲಕ ಹೊರತಂದಿದ್ದಾರೆ.
KGF
2
:
'ಕೆಜಿಎಫ್
2'
ಮತ್ತು
'ಬೀಸ್ಟ್'
ಚಿತ್ರಕ್ಕಿಲ್ಲ
ಸ್ಟಾರ್
ವಾರ್,
ಫ್ಯಾನ್ಸ್
ಲೆಕ್ಕಾಚಾರವೇ
ಬೇರೆ!
ಸತೀಶ್ ತಮ್ಮ ತಾಯಿಯ ಪ್ರೀತಿಯ ಬಗ್ಗೆ 'ಅವ್ವ ಕೇಳೆ' ಎಂಬ ಹಾಡನ್ನು ರಚಿಸಿದ್ದಾರೆ. ಈ ಹಾಡು ರಿಲೀಸ್ ಆಗಿ ಯೂಟ್ಯೂಬ್‌ನಲ್ಲಿ ಸಾಕಷ್ಟು ಸೌಂಡ್ ಮಾಡುತ್ತಿದೆ. ಈಗಾಗಲೇ ಸಾವಿರಾರು ಮಂದಿ ನೋಡಿ ಈ ಹಾಡನ್ನು ಮೆಚ್ಚಿಕೊಂಡಿದ್ದಾರೆ. 'ಅವ್ವ ಕೇಳೆ' ಹಾಡನ್ನು ಸತೀಶ್ ಅವರೇ ಬರೆದಿದ್ದು, ಸ್ವತ: ಸತೀಶ್ ಹಾಡಿದ್ದಾರೆ. ಸತೀಶ್ ಜೊತೆ ಪುತ್ರಿ ಮನಸ್ವಿತ ಕೂಡ ಧ್ವನಿ ನೀಡಿರುವುದು ವಿಶೇಷ. ಪೂರ್ಣಚಂದ್ರ ತೇಜಸ್ವಿ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು, ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಈ ಹಾಡನ್ನು ಮೆಚ್ಚಿ ಸತೀಶ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ.
'ಅವ್ವ ಕೇಳೇ' ನಾನು ಕಂಡ ನನ್ನವ್ವನನ್ನು ನಾಲ್ಕು ಪದಗಳಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನವೇ, ಈ ಹಾಡು ಎಂದಿರುವ ನೀನಾಸಂ ಸತೀಶ್ ಈ ಹಾಡಿನಲ್ಲಿ ತಾಯಿಯ ಬಗ್ಗೆ ವರ್ಣನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ 'ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಸೇರಿದಂತೆ ಹಲವು ಮಹಿಳೆಯರು ತಮ್ಮ ಸಾಮಾಜಿಕ ಕೆಲಸಗಳಿಂದಾಗಿ ಇತಿಹಾಸ ಸೇರಿದ್ದಾರೆ. ಆದರೆ ಪ್ರತಿ ಮನೆಯಲ್ಲಿಯೂ ಪ್ರತಿ ಮಹಿಳೆಯೂ ಸಾಧಕಳೇ ಆಗಿರುತ್ತಾಳೆ. ಮನೆ, ಹೊಲ, ಮಕ್ಕಳು ಹೀಗೆ ಎಲ್ಲವನ್ನೂ ನೋಡಿಕೊಂಡು ಜೀವನ ನಡೆಸುತ್ತಿರುತ್ತಾಳೆ. ಅಂತಹವಳು ನನ್ನವ್ವ. ನಾನು ಆಕೆಯ ಕಷ್ಟವನ್ನು ಕಣ್ಣಾರೆ ನೋಡಿದ್ದೆ. ಆಕೆಗೆ ಎಷ್ಟೇ ಕಷ್ಟವಿದ್ದರೂ ನಮ್ಮನ್ನೆಲ್ಲಾ ಅದ್ಭುತವಾಗಿ ಸಾಕಿದವಳು. ಇದೇ ರೀತಿ ಹಲವು ಮಹಿಳೆಯರು ಇರುತ್ತಾರೆ. ಅವರಿಗೆ ಈ ಹಾಡು ಅರ್ಪಣೆ' ಎಂದು ಹೇಳಿದ್ದಾರೆ ನೀನಾಸಂ ಸತೀಶ್.